ಮೈಸೂರು: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜ.3 ಮತ್ತು 4ರಂದು ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಶನಿವಾರ (ಜ.4ರಂದು) ತೆರೆ ಬಿದ್ದಿತು. ಕ್ರೀಡಾಕೂಟದಲ್ಲಿ ವಿಜೇತರಾದವರ ವಿವರ ಈ ಕೆಳಕಂಡಂತಿದೆ.
ಮಹಿಳೆಯರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಫೆಬ್ರುವರಿಯಲ್ಲಿ ಧಾರವಾಡದಲ್ಲಿ ನಡೆಯುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಅಥ್ಲೆಟಿಕ್ಸ್ ಪುರುಷರ ವಿಭಾಗ (40 ವರ್ಷದೊಳಗಿನವರು): 200 ಮೀ. ಓಟ- ಎಚ್.ಬಿ. ಲೋಕೇಶ್, 1500 ಮೀ. ಓಟ- ಕೆ.ಎಸ್. ಭೈರೇಶ್, 110 ಮೀ. ಹರ್ಡಲ್ಸ್- ಎಸ್. ಸಂತೋಷ್, 400 ಮೀ. ಹರ್ಡಲ್ಸ್- ರಾಜೇಶ್, 5000 ಮೀ. ಓಟ- ಉದಯ್‌ಗೌಡ, 10,000 ಮೀ. ಓಟ- ಉದಯ್‌ಕುಮಾರ್, ಎತ್ತರ ಜಿಗಿತ- ಬಿ.ಸಿ. ಜಯತಿರ್ಥರಾಜ್, ಗುಂಡು ಎಸೆತ (7.260 ಕೆ.ಜಿ)- ಆಕಾಶ್ ದೀಪ್ ಸಾಗರ್, ಡಿಸ್ಕಸ್ ಥ್ರೋ- ನವೀನ್‌ಕುಮಾರ್, ಜಾವಲಿನ್ ಥ್ರೋ- ಡಿ.ಶಿವಕುಮಾರ್ ವಿಜೇತರಾದರು. 4 *100 ಮೀ. ರಿಲೇ- ಮೈಸೂರು ವೈದ್ಯಕೀಯ ಕಾಲೇಜು ತಂಡ ಗೆಲುವು ಸಾಧಿಸಿತು.
40-50 ವರ್ಷ ಮೇಲ್ಪಟ್ಟವರ ವಿಭಾಗ: ಗುಂಡು ಎಸೆತ- ಎಚ್.ಆರ್. ಗೋಪಾಲಕೃಷ್ಣ ಮೂರ್ತಿ, ಡಿಸ್ಕಸ್ ಥ್ರೋ- ಗಣಪತಿ ಜಕಾತಿ, 50-60 ವರ್ಷ ಮೇಲ್ಪಟ್ಟವರ ವಿಭಾಗ: ಡಿಸ್ಕಸ್ ಥ್ರೋ ಮತ್ತು ಗುಂಡು ಎಸೆತದಲ್ಲಿ ಕೆ.ಬಿ.ಅಯ್ಯಪ್ಪ ವಿಜೇತರಾದರು.
40 ವರ್ಷದೊಳಗಿನ ವಿಭಾಗ: ಟೇಬಲ್ ಟೆನಿಸ್‌ನಲ್ಲಿ ಮುರುಳೀಧರ್ ವಿ. ರಾಯ್, ಡಬಲ್ಸ್- ಮುರುಳೀಧರ್ ವಿ ರಾಯ್, ಡಾ. ಸಂಜಯ್‌ಕುಮಾರ್, ಟೆನಿಸ್ ಕೆ. ನಾರಾಯಣಸ್ವಾಮಿ, ಕುಸ್ತಿ (ಫ್ರೀ ಸ್ಟ್ರೈಲ್)- 57 ಕೆ.ಜಿ. ವಿಭಾಗದಲ್ಲಿ ಶ್ರೀನಿವಾಸ್, 61 ಕೆ.ಜಿ- ರಾಮಶೆಟ್ಟಿ, 65 ಕೆ.ಜಿ- ಎಸ್.ಗೋಪಾಲಸ್ವಾಮಿ, 70 ಕೆ.ಜಿ- ಎಂ.ಎಂ.ರಮೇಶ್, 74 ಕೆ.ಜಿ- ಎ.ಇ.ಪರಮೇಶ, 79 ಕೆ.ಜಿ- ಪ್ರದೀಪ್ ಕುಮಾರ್, 86 ಕೆ.ಜಿ- ವಿನಯ್, 92 ಕೆ.ಜಿ-ಸುಂದರ್‌ಕುಮಾರ್, 97 ಕೆ.ಜಿ- ರಾಮದಾಸ್, 97 ಕೆಜಿ ಮೇಲ್ಪಟ್ಟ ವಿಭಾಗ- ಪವನ್‌ರಾಜ್ ಬಹುಮಾನ ಪಡೆದರು.
ಭಾರ ಎತ್ತುವ ಸ್ಪರ್ಧೆ- 55 ಕೆ.ಜಿ ವಿಭಾಗ- ಎನ್. ಗಿರೀಶ್, 59 ಕೆ.ಜಿ- ಮೋಹನ್ ಕುಮಾರ್, 64 ಕೆ.ಜಿ- ರಾಮಶೆಟ್ಟಿ, 70 ಕೆ.ಜಿ- ಪಿ.ಎಸ್. ಮಹೇಶ್, 76 ಕೆ.ಜಿ- ಮಂಜುನಾಥ್, 83 ಕೆ.ಜಿ- ಡಿ.ಶಿವಕುಮಾರ್, 91 ಕೆ.ಜಿ- ಚೇತನ್ ಕುಮಾರ್ ನಾಯಕ್, 99 ಕೆ.ಜಿ- ಬಾಲಸುಬ್ರಹ್ಮಣ್ಯ, 108 ಕೆ.ಜಿ- ಶಶಬಿಲ್ ಬಹುಮಾನ ಗಳಿಸಿದರು.
ಪವರ್ ಲಿಫ್ಟಿಂಗ್52 ಕೆ.ಜಿ- ಎನ್. ಗಿರೀಶ್, 56 ಕೆ.ಜಿ- ಮೋಹನ್ ಕುಮಾರ್, 67 ಕೆ.ಜಿ- ಎಂ.ಪಿ.ಅರವಿಂದ, 75 ಕೆ.ಜಿ- ಮಂಜುನಾಥ್, 82.5 ಕೆ.ಜಿ- ಡಿ.ಶಿವಕುಮಾರ್, 90 ಕೆ.ಜಿ- ಗಿರೀಶ್, 100 ಕೆ.ಜಿ- ಬಾಲಸುಬ್ರಹ್ಮಣ್ಯ, 110 ಕೆ.ಜಿ- ಶಶಬಿಲ್, ಬಾಡಿ ಬಿಲ್ಡಿಂಗ್- 60 ಕೆ.ಜಿ- ಎಂ.ಪಿ. ಅರವಿಂದ, 65 ಕೆ.ಜಿ- ಮಂಜುನಾಥ್, 75 ಕೆ.ಜಿ- ಬಾಲಸುಬ್ರಹ್ಮಣ್ಯ ಬಹುಮಾನ ಪಡೆದರು.
ಹಾಕಿ ಮತ್ತು ಕಬಡ್ಡಿ- ಕಂದಾಯ ಇಲಾಖೆ, ಫುಟ್ಬಾಲ್- ಸರ್ಕಾರಿ ಮುದ್ರಣಾಲಯ, ಬಾಸ್ಕೆಟ್‌ಬಾಲ್-ತಾಂತ್ರಿಕ ಶಿಕ್ಷಣ ಇಲಾಖೆ, ವಾಲಿಬಾಲ್ ಸಮಾಜ ಕಲ್ಯಾಣ ಇಲಾಖೆ, ಬಾಲ್ ಬ್ಯಾಡ್ಮಿಂಟನ್- ಮಸ್ತಾಕ್ ತಂಡ ಬಹುಮಾನ ಪಡೆಯಿತು.
ಮಹಿಳೆಯರ ವಿಭಾಗ: 35 ವರ್ಷದೊಳಗಿನ ವಿಭಾಗ: 200 ಮೀ. ಓಟ- ಆರ್.ವಿ. ಮನು, 800 ಮೀ. ಓಟ- ಎಂ.ಎಸ್. ಸರೋಜಾ, 100 ಮೀ. ಹರ್ಡಲ್ಸ್- ಎಂ. ಶಿಲ್ಪಶ್ರೀ, ಎತ್ತರ ಜಿಗಿತ- ಕೆ. ಸೌಮ್ಯಾ, ಜಾವಲೀನ್ ಥ್ರೋ- ವಸಂತಾ, ಡಿಸ್ಕಸ್ ಥ್ರೋ- ವಸಂತಾ, ಗುಂಡು ಎಸೆತ -(4 ಕೆ.ಜಿ)- ವಸಂತಾ, 4*100 ಮೀ. ರಿಲೇ ಡಾ.ಎನ್.ನಳಿನಾ, 35-45 ವರ್ಷ ಮೇಲ್ಪಟ್ಟವರ ವಿಭಾಗ 200 ಮೀ. ಓಟ- ಡಾ. ಎನ್. ನಳಿನಾ, ಡಿಸ್ಕಸ್ ಥ್ರೋ - ಎಂ.ಎಸ್. ಸರೋಜಾ, 45-60 ವರ್ಷ ಮೇಲ್ಪಟ್ಟವರ ವಿಭಾಗ 200 ಮೀ. ಓಟ- ಎ.ಬಿ. ಪುಷ್ಪಲತಾ, ಉದ್ದ ಜಿಗಿತ- ಸಬೀನಾ, ಗುಂಡು ಎಸೆತ- ರತ್ನಮ್ಮ, 40 ವರ್ಷ ಮೇಲ್ಪಟ್ಟವರ ವಿಭಾಗ ಟೆನಿಕಾಯ್ಟ ಸಿಂಗಲ್ಸ್- ಎ.ಪಿ. ಭಾಗ್ಯವತಿ ಬಹುಮಾನ ಪಡೆದರು. ಮಹಿಳೆಯರ ವಿಭಾಗ ಕಬಡ್ಡಿ-ವಾಣಿಜ್ಯ ತೆರಿಗೆ ಇಲಾಖೆ, ಥ್ರೋಬಾಲ್- ಮೆಡಿಕಲ್ ಕಾಲೇಜು ಗೆಲುವು ಸಾಧಿಸಿತು.
ಸಾಂಸ್ಕೃತಿಕ ಕಾರ್ಯಕ್ರಮ ವಿಜೇತರು: ಹಿಂದೂಸ್ತಾನಿ ಸಂಗೀತ ಮೌಖಿಕ (ಕ್ಲಾಸಿಕಲ್)- ಪಿ.ಎಸ್. ಪದ್ಮಾವತಿ, ಲಘು ಶಾಸ್ತ್ರಿಯ ಸಂಗೀತ ಮೌಖಿಕ (ಕ್ಲಾಸಿಕ್)- ಪನ್ನಗ, ಕರ್ನಾಟಕ ಶಾಸ್ತ್ರೀಯ ಸಂಗೀತ- ಆರ್.ಎಸ್. ಪನ್ನತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ-ಧನಂಜಯ- ಜಾನಪದ ಗೀತೆ- ಎಚ್.ಎನ್. ನಿಂಗರಾಜು, ಜಾನಪದ ಗೀತೆ (ತಂಡ)- ಎಚ್.ಎನ್.ನಿಂಗರಾಜು ತಂಡ, ಕಥಕ್- ವಿ. ಚಿತ್ರ, ಒಡಿಸ್ಸಿ- ಎಸ್.ಪುಷ್ಪ , ಭರತನಾಟ್ಯ- ಸುಬ್ರಹ್ಮಣ್ಯ, ಜಾನಪದ ನೃತ್ಯ- ಎಚ್.ಎಸ್. ಲೋಕೇಶ್ ತಂಡ, ಕಿರು ನಾಟಕ - ನಾಗೇಶ್ ತಂಡ, ಸ್ಟ್ರಿಂಗ್ ವಾದ್ಯಗಳು- ಸವರಿಯಪ್ಪನ್, ವಿಂಡ್ ವಾದ್ಯಗಳು- ವಿ.ರಾಜು, ಪರಕೇಷನ್ ವಾದ್ಯಗಳು- ಬಿ.ಎಸ್. ನವರತ್ನ ಕುಮಾರ್, ಕರಕುಶಲ ಪ್ರದರ್ಶನ- ದೆಬೋರ ಚೆನ್ನ ವಿಜೇತರಾದರು.