ಪ್ಯಾರಿಸ್: ಅಮೋಘ ನಿರ್ವಹಣೆ ತೋರಿದ ನಡುವೆಯೂ ಸೆಮಿೈನಲ್‌ನಲ್ಲಿ ವೀರೋಚಿತ ಸೋಲು ಅನುಭವಿಸಿದ ಭಾರತದ ಪುರುಷರ ಹಾಕಿ ತಂಡ 44 ವರ್ಷಗಳ ಬಳಿಕ ಚಿನ್ನದ ಪದಕ ಗೆಲ್ಲುವ ಆಸೆ ಕೈಚೆಲ್ಲಿದೆ. ಆದರೆ ಈಗಲೂ ಒಲಿಂಪಿಕ್ಸ್‌ನಲ್ಲಿ ಪೋಡಿಯಂ ಏರುವ ಅವಕಾಶ ಹರ್ಮಾನ್‌ಪ್ರೀತ್ ಸಿಂಗ್ ಬಳಗದ ಮುಂದಿದೆ. ಗುರುವಾರ ನಡೆಯಲಿರುವ ‘ಪ್ಲೇಆ್’ ಪಂದ್ಯದಲ್ಲಿ ಭಾರತ ಹಾಗೂ ಸ್ಪೇನ್ ತಂಡಗಳು ಕಂಚಿನ ಪದಕಕ್ಕೆ ಸೆಣಸಲಿವೆ. ಸತತ ಎರಡನೇ ಒಲಿಂಪಿಕ್ಸ್ ಪದಕದ ನಿರೀಕ್ಷೆಯಲ್ಲಿರುವ ಭಾರತ ಕಳೆದ ಬಾರಿ ಟೋಕಿಯೊ ಗೇಮ್ಸ್‌ನಲ್ಲಿಯೂ ಮೂರನೇ ಸ್ಥಾನ ಪಡೆದಿತ್ತು.
ಜರ್ಮನಿ ವಿರುದ್ಧ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿ ಹಿನ್ನಡೆ ಅನುಭವಿಸಿದ ಭಾರತ, ಸ್ಪೇನ್ ಎದುರು ಸುಧಾರಿತ ಪ್ರದರ್ಶನ ನೀಡುವ ತವಕದಲ್ಲಿದೆ. ಜರ್ಮನಿ ಎದುರು ಭಾರತ 10 ಪೆನಾಲ್ಟಿ ಕಾರ್ನರ್ ಪಡೆದರೂ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಕೂಟದಲ್ಲಿ ಅತ್ಯಧಿಕ ಗೋಲು ಸ್ಕೋರರ್ ಎನಿಸಿದ್ದು, ಪ್ರಸ್ತುತ ಫಾರ್ಮ್ ಹಾಗೂ ವಿಶ್ವ ರ‌್ಯಾಂಕಿಂಗ್ ಆಧಾರದಲ್ಲಿ ಭಾರತ ೇವರಿಟ್ ಎನಿಸಿದೆ. ಎ್ಐಎಚ್ ರ‌್ಯಾಂಕಿಂಗ್‌ನಲ್ಲಿ ಭಾರತ 5ನೇ ಹಾಗೂ ಸ್ಪೇನ್ 8ನೇ ಸ್ಥಾನದಲ್ಲಿದೆ. ಸ್ಪೇನ್ ತಂಡ ಸೆಮೀಸ್‌ನಲ್ಲಿ ನೆದರ್ಲೆಂಡ್ ಎದುರು 0-5ರಿಂದ ಸೋಲು ಅನುಭವಿಸಿದೆ. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಮಣಿಸಿರುವುದು ಎಚ್ಚರಿಕೆ ಎನಿಸಿದೆ. ಟೋಕಿಯೊ ಗೇಮ್ಸ್‌ನ ಲೀಗ್ ಹಂತದಲ್ಲಿ ಎರಡು ತಂಡಗಳು ಮುಖಾಮುಖಿಯಾದಾಗ ಭಾರತ 3-0ರಿಂದ ಗೆದ್ದು ಬೀಗಿತ್ತು.
1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಸ್ಪೇನ್ ತಂಡವನ್ನು 4-3 ರಿಂದ ಮಣಿಸಿ ಸ್ವರ್ಣ ಗೆದ್ದ ಸಾಧನೆಯನ್ನು ಸ್ಪೂರ್ತಿಯಾಗಿಸಿಕೊಂಡು ಭಾರತ ಕಂಚಿನ ಪದಕ ಉಳಿಸಿಕೊಳ್ಳುವ ಹಂಬಲದಲ್ಲಿದೆ. ಉಭಯ ತಂಡಗಳ ಹಿಂದಿನ ಐದು ಸೆಣಸಾಟಗಳಲ್ಲಿ ಭಾರತ 4-1 ರಿಂದ ಮೇಲುಗೈ ಸಾಧಿಸಿದೆ.
ಶ್ರೀಜೇಶ್‌ಗೆ ಕೊನೇ ಪಂದ್ಯ: ಭಾರತ ಹಾಕಿ ತಂಡದ ‘ಗೋಡೆ’ಎಂದು ಕರೆಯಲ್ಪಡುವ ಗೋಲು ಕೀಪರ್ ಶ್ರೀಜೇಶ್ ಪಾಲಿಗೆ ಇದು ಕೊನೆಯ ಪಂದ್ಯ ಎನಿಸಿದೆ. ಒಲಿಂಪಿಕ್ಸ್ ಕೂಟದಲ್ಲಿ ತಾನು ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವುದಾಗಿ ಶ್ರೀಜೇಶ್ ಆರಂಭಕ್ಕೂ ಮುನ್ನವೇ ತಿಳಿಸಿದ್ದರು. ‘ಈ ಬಾರಿ ನಾವು ಚಿನ್ನ ಗೆಲ್ಲುವ ಉತ್ತಮ ಅವಕಾಶ ಹೊಂದಿದ್ದೆವು. ಆದರೆ ಜರ್ಮನಿ ಎದುರಿನ ಸೋಲು ನಮಗೆ ಆಘಾತ ತಂದಿದೆ. ಆದರೆ ಈ ಸೋಲನ್ನು ಮರೆತು ಮುಂದಿನ ಪಂದ್ಯದ ಮೇಲೆ ಗಮನ ಹರಿಸಬೇಕಿದೆ’ಎಂದು ಶ್ರೀಜೇಶ್ ಜರ್ಮನಿ ವಿರುದ್ಧ ಪಂದ್ಯದ ಬಳಿಕ ತಿಳಿಸಿದ್ದರು.