ನವದೆಹಲಿ: ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್ ಟಿ 20) ಮತ್ತೊಬ್ಬ ಹಿಟ್ಟಿಂಗ್ ಸ್ಟಾನನ್ನು ಮುನ್ನೆಲೆಗೆ ತಂದಿದೆ. ಸರಣಿ ಸೆನ್ಸೇಷನಲ್ ಇನ್ನಿಂಗ್ಸ್ ಗಳ ಮೂಲಕ ಸಂಚಲನ ಮೂಡಿಸಿರುವ ಪ್ರಿಯಾಂಶ್ ಆರ್ಯ ಇದೀಗ ತನ್ನ ಖಾತೆಯಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಈ ಲೀಗ್‌ನಲ್ಲಿ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಪರ ಆಡುತ್ತಿರುವ ಪ್ರಿಯಾಂಶ್, ಬೌಲರ್‌ಗಳನ್ನು ದಂಡಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಕೇವಲ 50 ಎಸೆತಗಳಲ್ಲಿ 120 ರನ್ ಗಳಿಸಿದ್ದರು. ಮನನ್ ಭಾರದ್ವಾಜ್ ತಮ್ಮ ಶಕ್ತಿಶಾಲಿ ಬ್ಯಾಟಿಂಗ್‌ನಿಂದ 12ನೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದರು.
23 ವರ್ಷದ ಪ್ರಿಯಾಂಶ್ ಈ ಹಿಂದೆ ಯಶಸ್ವಿ ಜೈಸ್ವಾಲ್ ಮತ್ತು ರವಿ ಬಿಷ್ಣೋಯ್ ಅವರೊಂದಿಗೆ ಭಾರತ-ಎ ಪರ ಆಡಿದ್ದರು. ಸದ್ಯ ಅವರು ಸತತ ಸೆನ್ಸೇಷನಲ್ ಇನ್ನಿಂಗ್ಸ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಿಯಾಂಶ್ ಭಾರಿ ಬೆಲೆಗೆ ಹರಾಜಾಗುವುದು ಖಚಿತ ಎನ್ನಲಾಗುತ್ತಿದೆ.
ಇತ್ತೀಚೆಗೆ ನಡೆದ ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಪ್ರಿಯಾಂಶ್ 50 ಎಸೆತಗಳಲ್ಲಿ 120 ರನ್ ಗಳಿಸಿದ್ದು, ಮನಸ್ ಭಾರದ್ವಾಜ್ ಬೌಲಿಂಗ್ನಲ್ಲಿ 12ನೇ ಓವರ್‌ನಲ್ಲಿ ಪ್ರಿಯಾಂಶ್ 6ಎಸೆತದಲ್ಲಿ 6ಸಿಕ್ಸರ್ ಹೊಡೆದು ದಾಖಲೆ ನಿರ್ಮಿಸಿದ್ದಾರೆ.
ಇದುವರೆಗೆ ನಡೆದ ಪಂದ್ಯಗಳಲ್ಲಿ ಪ್ರಿಯಾಂಶ್ 57 (30 ಎಸೆತ), 82 (51), 53 (32), 45 (26), 107 (55), 88 (42), 24 (9) ರನ್ ಗಳಿಸಿದ್ದಾರೆ.