ಮುಂಬೈ: ಮೊದಲ ಪಂದ್ಯಗಳಲ್ಲಿ ಭರ್ಜರಿ ಗೆಲುವಿನಿಂದ ಬೀಗಿದ ಬೆನ್ನಲ್ಲೇ ಆಘಾತಕ್ಕೊಳ್ಳಗಾಗಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-14ರ ಹಣಾಹಣಿಯಲ್ಲಿ ಭಾನುವಾರ ಎದುರಾಗಲಿವೆ. ಲೀಗ್‌ನಲ್ಲಿ ಇದುವರೆಗೂ ಆಡಿರುವ 2 ಪಂದ್ಯಗಳಿಂದ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿರುವ ಉಭಯ ತಂಡಗಳ ಮನಸ್ಥಿತಿಯೂ ಒಂದೇ ರೀತಿಯಾಗಿದೆ. ರನ್‌ಮಳೆಗೆ ಸಾಕ್ಷಿಯಾಗುತ್ತಿದ್ದ ವಾಂಖೆಡೆ ಪಿಚ್ ಕಳೆದೆರಡು ಪಂದ್ಯಗಳಿಂದ ವ್ಯತಿರಿಕ್ತವಾಗಿ ವರ್ತಿಸುತ್ತಿದೆ. ಬೌಲರ್‌ಗಳ ಅಬ್ಬರ ಜೋರಾಗಿದ್ದು, ಬ್ಯಾಟ್ಸ್‌ಮನ್‌ಗಳ ಪರೇಡ್ ಹೆಚ್ಚಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ಎದುರು ವೀರೋಚಿತ ಸೋಲು ಕಂಡಿದ್ದರೆ, ನಿಕೃಷ್ಟ ಬ್ಯಾಟಿಂಗ್‌ನಿಂದಾಗಿ ಕನ್ನಡಿಗ ಕೆಎಲ್ ರಾಹುಲ್ ಬಳಗ ಸಿಎಸ್‌ಕೆಗೆ ಸುಲಭವಾಗಿ ಶರಣಾಗಿತ್ತು. ಇದೀಗ ಬ್ಯಾಟಿಂಗ್ ವೈಲ್ಯದಿಂದ ಬೆಲೆತೆತ್ತಿರುವ ಉಭಯ ತಂಡಗಳು ಹಿಂದಿನ ಪಂದ್ಯಗಳಲ್ಲಿ ಮಾಡಿಕೊಂಡ ತಪ್ಪಿನಿಂದ ಪಾಠ ಕಲಿತಿದ್ದು, ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿವೆ.
ಟೀಮ್ ನ್ಯೂಸ್
ಡೆಲ್ಲಿ ಕ್ಯಾಪಿಟಲ್ಸ್:
ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಕೋವಿಡ್-19ರಿಂದ ಚೇತರಿಸಿಕೊಂಡಿರುವ ಅನ್ರಿಚ್ ನೋಕಿಯಾ ಹನ್ನೊಂದರ ಬಳಗದ ಆಯ್ಕೆಗೆ ಲಭ್ಯವಿದ್ದು, ಇವರನ್ನು ಪರಿಗಣಿಸಿದರೆ ಟಾಮ್ ಕರ‌್ರನ್ ಹೊರಗುಳಿಯಲಿದ್ದಾರೆ.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 3 ವಿಕೆಟ್ ಸೋಲು
----------
ಪಂಜಾಬ್ ಕಿಂಗ್ಸ್;
ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ಎಂ.ಅಶ್ವಿನ್ ಸತತ ಎರಡು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದಾರೆ. ಅಶ್ವಿನ್ ಬದಲಿಗೆ ಮತ್ತೋರ್ವ ಸ್ಪಿನ್ನರ್ ರವಿ ಬಿಷ್ಣೋಯಿಗೆ ಮಣೆಹಾಕುವ ಸಾಧ್ಯತೆಗಳಿವೆ. ಸತತ 2 ಪಂದ್ಯಗಳಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ವಿಲಗೊಂಡಿದ್ದರೂ ಸದ್ಯದ ಮಟ್ಟಿಗೆ ಬದಲಾವಣೆ ಕಷ್ಟಕರ.
ಕಳೆದ ಪಂದ್ಯ: ಸಿಎಸ್‌ಕೆ ವಿರುದ್ಧ 6 ವಿಕೆಟ್‌ಗಳಿಂದ ಸೋಲು
-----------------
ಮುಖಾಮುಖಿ: 26, ಪಂಜಾಬ್: 15, ಡೆಲ್ಲಿ: 11
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆರಂಭ: ರಾತ್ರಿ 7.30ಕ್ಕೆ