ಕ್ರೀಡೆ

ಆಸೀಸ್‌ಗೆ ಸುಲಭ ತುತ್ತಾದ ಲಂಕಾ: ಏಷ್ಯನ್ ಚಾಂಪಿಯನ್ಸ್‌ಗೆ ಸತತ 2ನೇ ಸೋಲು

ಶಾರ್ಜಾ: ವೇಗಿ ಮೇಗನ್ ಶುಟ್ (12ಕ್ಕೆ 3) ಹಾಗೂ ಬೆಥ್ ಮೂನಿ (43* ರನ್, 38 ಎಸೆತ, 4 ಬೌಂಡರಿ) ನಿರ್ವಹಣೆಯ ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಎದುರು 6 ವಿಕೆಟ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ, 7 ವಿಕೆಟ್‌ಗೆ 93 ರನ್ ಕಲೆಹಾಕಿತು. ಪ್ರತಿಯಾಗಿ ಆಸೀಸ್, 14.2 ಓವರ್‌ಗಳಲ್ಲಿ 4 ವಿಕೆಟ್‌ಗೆ 94 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಶ್ರೀಲಂಕಾ: 7 ವಿಕೆಟ್‌ಗೆ 93 (ಚಾಮರಿ 3, ಹರ್ಷಿತಾ 23, ಕವಿಷಾ 5, ನೀಲಾಕ್ಷಿಕ 29*, ಅನುಷ್ಕಾ 16, ಶುಟ್ 12ಕ್ಕೆ 3, ಮೂಲಿನೆಕ್ಸ್ 20ಕ್ಕೆ 2).

ಆಸ್ಟ್ರೇಲಿಯಾ: 14.2 ಓವರ್‌ಗಳಲ್ಲಿ 4 ವಿಕೆಟ್‌ಗೆ 94 (ಬೆಥ್ ಮೂನಿ 43*, ಅಲೀಸಾ 4, ವಾರೆಹ್ಯಾಂ 3, ಎಲ್ಲಿಸ್ ಪೆರ‌್ರಿ 17, ಗಾರ್ಡನರ್ 12, ಲಿಚ್ಛಿಫೀಲ್ಡ್ 9*, ಸುಗಂಧಿಕಾ 16ಕ್ಕೆ 1). ಪಂದ್ಯಶ್ರೇಷ್ಠ: ಮೇಗನ್ ಶುಟ್.