ಮುಂಬೈ: ದೀಪ್ತಿ ಶರ್ಮ (30 ರನ್, 22ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆಯ ನಡುವೆಯೂ ಭಾರತ ತಂಡ ಮಹಿಳೆಯರ ಟಿ20 ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ಎದುರು 4 ವಿಕೆಟ್ಗಳಿಂದ ಮುಗ್ಗರಿಸಿದೆ. ಇದರೊಂದಿಗೆ ಆಸ್ಟ್ರೆಲಿಯಾ ತಂಡ 3 ಪಂದ್ಯಗಳ ಸರಣಿಯಲ್ಲಿ 1&1 ಸಮಬಲ ಸಾಧಿಸಿದೆ.
ಡಾ. ಡಿವೈ ಪಾಟೀಲ್ ಅಕಾಡೆಮಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಲ್ಯದ ನಡುವೆ 8 ವಿಕೆಟ್ಗೆ 130 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಆಸೀಸ್ ಕೂಡ ರನ್ ಗಳಿಸಲು ತಿಣುಕಾಡಿತು. ಆದರೆ ಸ್ಲಾಗ್ ಓವರ್ಗಳಲ್ಲಿ ಭಾರತ ಪ್ರದರ್ಶಿಸಿದ ನೀರಸ ಬೌಲಿಂಗ್ ನಿರ್ವಹಣೆಯಿಂದ ಆಸೀಸ್ 19 ಓವರ್ಗಳಲ್ಲಿ 4 ವಿಕೆಟ್ಗೆ 133 ರನ್ ಗಳಿಸಿ ಜಯಿಸಿತು.
ಆಸೀಸ್ಗೆ ಕೊನೇ 4 ಓವರ್ಗಳಲ್ಲಿ 32 ರನ್ ಗಳಿಸುವ ಒತ್ತಡ ಎದುರಾಗಿತ್ತು. ಆದರೆ ಈ ವೇಳೆ ಎಲ್ಲಿಸ್ ಪೆರ್ರಿ (34*) ಮತ್ತು ೋಬ್ ಲಿಚ್ಫೀಲ್ಡ್ (18*) ಮುರಿಯದ 5ನೇ ವಿಕೆಟ್ಗೆ 20 ಎಸೆತಗಳಲ್ಲೇ 36 ರನ್ ಕಸಿದು ಆಸೀಸ್ ಗೆಲ್ಲಿಸಿದರು. ಇನಿಂಗ್ಸ್ನ 17ನೇ ಓವರ್ನಲ್ಲಿ ದೀಪ್ತಿ ಶರ್ಮ 13 ಮತ್ತು 19ನೇ ಓವರ್ನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ 17 ರನ್ ಬಿಟ್ಟುಕೊಟ್ಟರು. ಎಲ್ಲಿಸ್ ಪೆರ್ರಿ ಸಿಕ್ಸರ್ ಸಿಡಿಸುವ ಮೂಲಕ ಆಸ್ಟ್ರೆಲಿಯಾವನ್ನು ಗೆಲುವಿನ ದಡ ಸೇರಿಸಿ 300ನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಭಾರತ: 8 ವಿಕೆಟ್ಗೆ 130 (ಶೆಫಾಲಿ 1, ಸ್ಮೃತಿ 23, ಜೆಮೀಮಾ 13, ಹರ್ಮಾನ್ಪ್ರೀತ್ 6, ರಿಚಾ 23, ದೀಪ್ತಿ ಶರ್ಮ 30, ಪೂಜಾ 9, ಕಿಮ್ ಗಾರ್ತ್ 27ಕ್ಕೆ 2, ಸುದರ್ಲ್ಯಾಂಡ್ 18ಕ್ಕೆ 2, ವರೆಹ್ಯಾಂ 17ಕ್ಕೆ 2). ಆಸ್ಟ್ರೆಲಿಯಾ: 19 ಓವರ್ಗಳಲ್ಲಿ 4 ವಿಕೆಟ್ಗೆ 133 (ಅಲಿಸ್ಸಾ ಹೀಲಿ 26, ಬೆತ್ ಮೂನಿ 20, ತಹ್ಲಿಯಾ 19, ಎಲ್ಲಿಸ್ ಪೆರ್ರಿ 34*, ಲಿಚ್ಫೀಲ್ಡ್ 18*, ದೀಪ್ತಿ ಶರ್ಮ 22ಕ್ಕೆ 2, ಶ್ರೇಯಾಂಕಾ 40ಕ್ಕೆ 1, ಪೂಜಾ 8ಕ್ಕೆ 1).
ಅಂತಿಮ ಟಿ20 ಪಂದ್ಯ
ಯಾವಾಗ: ಮಂಗಳವಾರ
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಪೋರ್ಟ್ಸ್18