ಕ್ರೀಡೆ

ಇಂಗ್ಲೆಂಡ್ ವಿರುದ್ಧ ಒಂದೇ ಕೈಯಿಂದ ಸಿಕ್ಸರ್ :ರಿಷಭ್ ಪಂತ್ ಸ್ಫೂರ್ತಿ ಎಂದ ದೀಪ್ತಿ ಶರ್ಮಾ! Deepti Sharma

Deepti Sharma: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆಲ್‌ರೌಂಡರ್ ದೀಪ್ತಿ ಶರ್ಮಾ ಬಾರಿಸಿದ ಸಿಕ್ಸರ್ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಒಂದೇ ಕೈಯಿಂದ ದೀಪ್ತಿ ಬಾರಿಸಿದ ಸಿಕ್ಸರ್​, ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ ರಿಷಭ್ ಪಂತ್​ರನ್ನು ನೆನಪಿಸಿದೆ.

ಈ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ಪರ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದ ದೀಪ್ತಿ ಶರ್ಮಾ, ತಮ್ಮ ಬತ್ತಳಿಕೆಗೆ ಹೊಸ ಅಸ್ತ್ರ ಸೇರ್ಪಡೆಯಾಗಲು ರಿಷಭ್​ ಪಂತ್ ಅವರೇ ಸ್ಫೂರ್ತಿ. ಇಂತಹ ಅವಕಾಶಕ್ಕಾಗಿ ನಾನು ತುಂಬಾ ದಿನಗಳಿಂದ ಕಾಯುತ್ತಿದ್ದೆ. ಜೆಮಿಮಾ ಅವರೊಂದಿಗೆ ಉತ್ತಮ ಜೊತೆಯಾಟ ಆಡುವುದು ನನ್ನ ಆಸೆಯಾಗಿತ್ತು, ಪ್ರತಿ ಓವರ್​ಗೆ 5ರಿಂದ 6 ರನ್ ಗಳಿಸುವ ಅನಿವಾರ್ಯತೆ ಎದುರಾಗಿತ್ತು. ಈ ಮೊದಲು ನಾವು ಇಂಗ್ಲೆಂಡ್‌ನಲ್ಲಿ ಅನೇಕ ಪಂದ್ಯಗಳನ್ನು ಆಡಿರುವ ಅನುಭವ ಇದ್ದಿದ್ದರಿಂದ, ಪಂದ್ಯದ ಗೆಲುವಿಗೆ ಸಹಕಾರಿ ಆಯಿತು ಎಂದಿದ್ದಾರೆ.

ಈ ಪಂದ್ಯದಲ್ಲಿ ದೀಪ್ತಿ ಶರ್ಮಾ ಅಜೇಯರಾಗಿ 62 ರನ್​ ( 64 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌) ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ದೀಪ್ತಿ ಶರ್ಮಾ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿ ಹೊರಹೊಮ್ಮಿದರು. ಒಟ್ಟಾರೆಯಾಗಿ, ಐದು ಇನ್ನಿಂಗ್ಸ್‌ನಿಂದ 16.55 ಸರಾಸರಿಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ತಂಡದ ಪರ ಮಿಂಚಿದ್ದಾರೆ.(ಏಜೆನ್ಸೀಸ್)