ಕ್ರೀಡೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಶೆಫಾಲಿ: ಶತಕದಬ್ಬರ ಮುಂದುವರಿಸಿದ ಸ್ಮೃತಿ ಮಂದನಾ

ಚೆನ್ನೈ: ಶೆಫಾಲಿ ವರ್ಮ (205 ರನ್, 197 ಎಸೆತ, 23 ಬೌಂಡರಿ, 8 ಸಿಕ್ಸರ್) ಚೊಚ್ಚಲ ದ್ವಿಶತಕ ಹಾಗೂ ಸ್ಮೃತಿ ಮಂದನಾ (149 ರನ್, 161 ರನ್, 27 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು ಮೊದಲ ದಿನವೇ ರನ್‌ಪ್ರವಾಹ ಹರಿಸಿ ದಾಖಲೆಯ ಮೊತ್ತ ಕಲೆಹಾಕಿದೆ.

ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಶೆಾಲಿ ವರ್ಮ ಹಾಗೂ ಸ್ಮತಿ ಮಂದನಾ 292 ರನ್‌ಗಳ ಭದ್ರ ಅಡಿಪಾಯ ಹಾಕಿಕೊಟ್ಟರೆ, ಕನ್ನಡತಿ ಶುಭಾ ಸತೀಶ್ (15) ಹೆಚ್ಚು ಹೊತ್ತು ನಿಲ್ಲಲಿಲ್ಲ. ಜೆಮೀಮಾ ರೋಡ್ರಿಗಸ್ (55 ರನ್, 94 ಎಸೆತ, 8 ಬೌಂಡರಿ) ಅರ್ಧಶತಕದ ಬಲದಿಂದ ದಿನದಂತ್ಯಕ್ಕೆ ಭಾರತ 98 ಓವರ್‌ಗಳಲ್ಲಿ 4 ವಿಕೆಟ್‌ಗೆ 525 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ (42*) ಹಾಗೂ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ (43*) ಮುರಿಯದ 5ನೇ ವಿಕೆಟ್‌ಗೆ 66 ಎಸೆತಗಳಲ್ಲಿ 75 ರನ್ ಕಸಿದು 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ: 98 ಓವರ್‌ಗಳಲ್ಲಿ 4 ವಿಕೆಟ್‌ಗೆ 525 (ಸ್ಮೃತಿ ಮಂದನಾ 149, ಶೆಫಾಲಿ 205, ಶುಭಾ 15, ಜೆಮೀಮಾ 55, ಹರ್ಮಾನ್‌ಪ್ರೀತ್ 42*, ರಿಚಾ 43*, ಡೆಲ್‌ಮಿ ಟಕ್ಕರ್ 141ಕ್ಕೆ 2).

1: ಶೆಫಾಲಿ ವರ್ಮ (192 ಎಸೆತ) ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಸಿಡಿಸಿದ ಆಸ್ಟ್ರೇಲಿಯಾದ ಅನ್ನಾಬೆಲ್ ಸುದರ್‌ಲ್ಯಾಂಡ್ (256) ದಾಖಲೆ ಮುರಿದರು.