ಕ್ರೀಡೆ

ಐಪಿಎಲ್​ ಮೊದಲ ಪಂದ್ಯ ಚೆನ್ನೈ ಸೂಪರ್​ ಕಿಂಗ್ಸ್​ ಮಡಿಲಿಗೆ; ಮುಂಬೈ ವಿರುದ್ಧ ಸುಲಭದ ಜಯ

lakshmihegde

ಅಬುಧಾಬಿ: ಐಪಿಎಲ್​ 2020ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಗೆಲುವು ಸಾಧಿಸಿದೆ. ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ ಮಾಡಿದ ಮುಂಬೈ ತಂಡ 163ರನ್​ಗಳ ಗುರಿ ನೀಡಿತ್ತು. ಚೆನ್ನೈ ತಂಡ ಕೇವಲ 19.2 ಓವರ್​ಗಳಲ್ಲಿ, 5 ವಿಕೆಟ್ ನಷ್ಟಕ್ಕೆ 166ರನ್​ ಗಳಿಸುವ ಮೂಲಕ ಜಯ ಸಾಧಿಸಿತು.

ಸಿಎಸ್​ಕೆ ತಂಡದಲ್ಲಿ ಮುರಳಿ ವಿಜಯ್​-1 (7), ಶೇನ್​ ವಾಟ್ಸನ್​ -4 (5), ಪಾಫ್​ ಡು ಪ್ಲೆಸಿಸ್​ -33 (32), ಅಂಬುಟಿ ರಾಯುಡು 71 (48), ರವೀಂದ್ರ ಜಡೇಜಾ- 10 (5), ಸ್ಯಾಮ್ ಕರ್ರನ್​- 18 (6), ಕೇದಾರ್​ ಜಾದವ್​ - ಮಹೇಂದ್ರ ಸಿಂಗ್ ಧೋನಿ- ದೀಪಕ್​ ಚಹರ್​- ಪಿಯುಷ್ ಚಾವ್ಲಾ- ಲುಂಗಿ ಎನ್​ಜಿಡಿ ರನ್​ ಬಾರಿಸಿದರು.

ಮುಂಬೈ ಇಂಡಿಯನ್ಸ್​ನಲ್ಲಿ ಟ್ರೆಂಟ್ ಬೌಲ್ಟ್​- 1, ಜೇಮ್ಸ್​ ಪ್ಯಾಟಿನ್​ಸನ್​-1, ಕೃನಾಲ್​ ಪಾಂಡ್ಯಾ-1 ಮತ್ತು ರಾಹುಲ್ ಚಹರ್-1 , ಜಸ್ಪ್ರೀತ್​ ಬುಮ್ರಾ -1 ವಿಕೆಟ್ ಪಡೆದಿದ್ದಾರೆ.