ಕ್ರೀಡೆ

ಚೆಪಾಕ್‌ನಲ್ಲಿ ಇಂದು ಸಿಎಸ್‌ಕೆಗೆ ರಾಯಲ್ಸ್ ಸವಾಲು: ಧೋನಿ ಕೊನೇ ಪಂದ್ಯ?, ಪ್ಲೇಆಫ್ ಲೆಕ್ಕಾಚಾರ ಹೀಗಿದೆ…

ಚೆನ್ನೈ: ಪ್ಲೇಆಫ್ ಸ್ಥಾನ ಖಾತ್ರಿಪಡಿಸಿಕೊಳ್ಳುವ ಹಂಬಲದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರ ತನ್ನ 12ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಎದುರಿಸಲಿದೆ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸಿಎಸ್‌ಕೆ, ಅಗ್ರ-4ರಲ್ಲಿ ಸ್ಥಾನ ಪಡೆಯುವ ಅವಕಾಶ ವೃದ್ಧಿಸಿಕೊಳ್ಳುವ ಹಂಬಲದಲ್ಲಿದೆ. ತವರಿನ ಕೊನೇ ಲೀಗ್ ಪಂದ್ಯದಲ್ಲಿ ಅಸ್ಥಿರ ನಿರ್ವಹಣೆಯಿಂದ ಹೊರಬರುವ ನಿರೀಕ್ಷೆ ಇದೆ.

ಚೆಪಾಕ್‌ನಲ್ಲಿ ಕೊನೇ ಪಂದ್ಯ?: ಸಿಎಸ್‌ಕೆ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಮಾಜಿ ನಾಯಕ ಎಂಎಸ್ ಧೋನಿ ತನ್ನ ಕೊನೆಯ ಪಂದ್ಯವನ್ನು ಚೆನ್ನೈ ಅಭಿಮಾನಿಗಳ ಎದುರು ಆಡುವ ಬಯಕೆಯನ್ನು ಟೂರ್ನಿ ಆರಂಭಕ್ಕೂ ಮುನ್ನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಿಎಸ್‌ಕೆ ತಂಡ ಪ್ಲೇಆ್ ಪ್ರವೇಶಿಸಲು ವಿಲವಾದರೆ, ರಾಜಸ್ಥಾನ ವಿರುದ್ಧದ ಪಂದ್ಯವೇ ಧೋನಿಗೆ ಚೆಪಾಕ್‌ನಲ್ಲಿ ಕೊನೇ ಪಂದ್ಯ ಎನಿಸಲಿದೆ. ಸಿಎಸ್‌ಕೆ ತನ್ನ ಅಂತಿಮ ಲೀಗ್ ಪಂದ್ಯವನ್ನು ಮೇ 18 ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಎದುರು ಆಡಲಿದೆ. ಕ್ವಾಲಿೈಯರ್-2 ಮತ್ತು ೈನಲ್ ಪಂದ್ಯಗಳು ಚೆನ್ನೈನಲ್ಲೇ ನಿಗದಿಯಾಗಿವೆ. ಹೀಗಾಗಿ ಸಿಎಸ್‌ಕೆ ಪ್ಲೇಆ್ಗೇರಿದರೆ ಮಾತ್ರ ಧೋನಿಗೆ ತನ್ನ ಕೊನೇ ಐಪಿಎಲ್ ಪಂದ್ಯವನ್ನು ಚೆನ್ನೈನಲ್ಲಿ ಆಡುವ ಅವಕಾಶ ಲಭಿಸಲಿದೆ.

ಸಿಎಸ್‌ಕೆ ಪ್ಲೇಆಫ್ ಲೆಕ್ಕಾಚಾರ: ಹಿಂದಿನ ಆರು ಪಂದ್ಯಗಳ ಪೈಕಿ 4ರಲ್ಲಿ ಸೋಲುಂಡಿರುವ ಸಿಎಸ್‌ಕೆ ಪ್ಲೇಆ್ ಹಾದಿ ಕಠಿಣವೆನಿಸಿದೆ. ಉಳಿದಿರುವ 2 ಲೀಗ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ 16 ಅಂಕಗಳೊಂದಿಗೆ, ಇತರ ಪೂರಕ ಲಿತಾಂಶಗಳೊಂದಿಗೆ ಪ್ಲೇಆ್ಗೇರಬಹುದು. ಸನ್‌ರೈಸರ್ಸ್‌ ಹಾಗೂ ಡೆಲ್ಲಿ ಅಥವಾ ಲಖನಾ ಕೂಡ 16 ಅಂಕ ಗಳಿಸುವ ಅವಕಾಶ ಹೊಂದಿವೆ. ರನ್‌ರೇಟ್ ಉತ್ತಮವಾಗಿರುವುದು ಸಿಎಸ್‌ಕೆಗೆ ಪ್ಲಸ್ ಪಾಯಿಂಟ್ ಎನಿಸಿದೆ. ಸನ್‌ರೈಸರ್ಸ್‌ ಉಳಿದ 2 ಪಂದ್ಯಗಳಲ್ಲಿ ಸೋತರೆ, ಡೆಲ್ಲಿ ಹಾಗೂ ಲಖನೌ ತಂಡಗಳು ಉಳಿದ 2ರಲ್ಲಿ 1ರಲ್ಲಿ ಸೋತರೆ ಸಿಎಸ್‌ಕೆಗೆ ಅನುಕೂಲವಾಗಲಿದೆ.