ಕ್ರೀಡೆ

ಹಿಟ್​ಮ್ಯಾನ್​ಗಾಗಿ ಈ ಒಂದು ನಿಯಮವನ್ನು ತೆಗೆದುಹಾಕಲು ಮುಂದಾದ BCCI; ಅಷ್ಟಕ್ಕೂ ಇದು ವಿವಾದವಾಗಲು ಕಾರಣವೇನು?

ಮುಂಬೈ: 18ನೇ ಆವೃತ್ತಿಯ ಐಪಿಎಲ್​ಗೆ (IPL) ಸಂಬಂಧಿಸಿದ ಕೆಲಸಗಳು ಈಗಾಗಲೇ ಚುರುಕುಗೊಂಡಿದ್ದು, ಈಗಾಗಲೇ ರಿಟೇನ್​ಗೆ (Retain) ಸಂಬಂಧಿಸಿದ ನಿಯಮಗಳನ್ನು (Rules) ಬಿಡುಗಡೆ ಮಾಡಲಾಗಿದ್ದು, ವರ್ಷಾಂತ್ಯದಲ್ಲಿ ಸೌದಿ ಅರೇಬಿಯಾ (Saudi Arabia) ಅಥವಾ ಸಿಂಗಾಪುರದಲ್ಲಿ (Singapore) ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಫ್ರಾಂಚೈಸಿಗಳನ್ನು ಓಲೈಸುವ ನಿಟ್ಟಿನಲ್ಲಿ ಈಗಾಗಲೇ ಬಿಸಿಸಿಐ (BCCI) ಕೆಲವು ನಿಯಮಗಳ್ನು (Rules) ಸಡಿಲಗೊಳಿಸಿ ಮತ್ತಷ್ಟು ರೂಲ್ಸ್​ಗೆ ಹೊಸ ರೂಪ ನೀಡಿದ್ದು, ಇದೀಗ ಮತ್ತೊಂದು ವಿಚಾರಕ್ಕೆ ಐಪಿಎಲ್​ (IPL) ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದು, ಈ ನಡೆ ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗಾಗಿ ಇಂಪ್ಯಾಕ್ಟ್​ ಪ್ಲೇಯರ್ (Impact Player) ನಿಯಮವನ್ನು ತೆಗೆದುಹಾಕಲು ಬಿಸಿಸಿಐ (BCCI) ಮುಂದಾಗಿದ್ದು, ಈ ಬಗ್ಗೆ ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಸಂದೇಶವನ್ನು ರವಾನಿಸಿದೆ. ಈ ಹಿಂದೆ SMAT ಅಡಿಯಲ್ಲಿ ಈ ನಿಯಮವನ್ನು ದೇಶೀಯ ಕ್ರಿಕೆಟ್​ನಲ್ಲಿ ಪರಿಚಯಿಸಲಾಗಿತ್ತಾದರೂ ಇದನ್ನು ರದ್ದುಪಡಿಸಿಲು ಬಿಸಿಸಿಐ (BCCI) ಮುಂದಾಗಿದ್ದು, ಐಪಿಎಲ್​ಗೂ (IPL) ಇದು ಅನ್ವಯವಾಗುವ ಸಾಧ್ಯತೆಯಿದೆ.

16ನೇ ಆವೃತ್ತಿಯಲ್ಲಿ ಪರಿಚಿಯಿಸಲಾದ ಇಂಪ್ಯಾಕ್ಟ್​ ಪ್ಲೇಯರ್​ (Impact Player) ನಿಯಮವನ್ನು 2027ರವರೆಗೆ ಮುಂದುವರೆಸುವುದಾಗಿ ಬಿಸಿಸಿಐ (BCCI) ಈ ಹಿಂದೆ ಹೇಳಿತ್ತು. ಐಪಿಎಲ್​ನ (IPL) ಬಹುಪಾಲು ಫ್ರಾಂಚೈಸಿಗಳು ಈ ನಿಯಮದ ಪರ ಇದ್ದವು. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ (IPL Impact Player) ನಿಯಮವು ಸಾಕಷ್ಟು ಪ್ರಭಾವ ಬೀರಿದ್ದು, ರೋಹಿತ್​ ಶರ್ಮ (Rohit Sharma) ಸೇರಿದಂತೆ ಕೆಲವು ಆಟಗಾರರು ಈ ನಿಯಮವನ್ನು ಕಟುವಾಗಿ ವಿರೋಧಿಸಿದ್ದರು. ಇಂಪ್ಯಾಕ್ಟ್​ ಪ್ಲೇಯರ್​ (Impact Player) ನಿಯಮದ ಬಗ್ಗೆ ಇದೀಗ ಬಿಸಿಸಿಐ (BCCI) ಗಂಭೀರವಾಗಿ ಯೋಚಿಸುತ್ತಿದ್ದು, ಈ ಬಗ್ಗೆ ಟೀಮ್​ ಇಂಡಿಯಾ (Team India) ನಾಯಕ ರೋಹಿತ್​ ಶರ್ಮ (Rohit Sharma) ಪಾಡ್​ಕಾಸ್ಟ್​ (Podcast) ಒಂದರಲ್ಲಿ ಮಾತನಾಡಿದ್ದು, ಸಖತ್​ ವೈರಲ್​ ಆಗುತ್ತಿದೆ.

ನನ್ನ ಪ್ರಕಾರ ಈ ನಿಯಮವನ್ನು ಹೋಲ್ಡ್​ ಮಾಡಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಅಲ್ರೌಂಡರ್​ಗಳ (Allrounders) ಬೆಳವಣಿಗೆಗೆ ಸಹಕಾರಿಯಾಗಿದ್ದು, ಅಂತಿಮವಾಗಿ ಕ್ರಿಕೆಟ್ ಅನ್ನು 11 ಆಟಗಾರರು ಆಡುತ್ತಾರೆ, 12 ಆಟಗಾರರು ಅಲ್ಲ. ನಾನು ಇಂಪ್ಯಾಕ್ಟ್​ ಪ್ಲೇಯರ್​ನ (Impact Player) ನಿಯಮದ ಪರವಿಲ್ಲ. ಇಂಪ್ಯಾಕ್ಟ್​ ಪ್ಲೇಯರ್ (Impact Player)​ ನಿಯಮವನ್ನು ತೆಗೆದುಹಾಕುವುದು ಉತ್ತಮ ಬೆಳವಣಿಗೆಯಾಗಿದ್ದು, ಪ್ರಮುಖ ಟೂರ್ನಿಗಳಿಗೆ ಐಸಿಸಿ (ICC) ಈ ನಿಯಮವನ್ನು ಜಾರಿ ಮಾಡಿಲ್ಲ. ಹೀಗಾಗಿ ಈ ನಿಯಮವನ್ನು ತೆಗೆದುಹಾಕುವುದರಿಂದ ಭಾರತಕ್ಕಾಗಿ ಆಡಲು ಬಯಸುವ ಕ್ರಿಕೆಟಿಗರಿಗೆ ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಟೀಮ್​ ಇಂಡಿಯಾ (Team India) ನಾಯಕ ರೋಹಿತ್​ ಶರ್ಮ (Rohit Sharma) ಅಭಿಪ್ರಾಯಪಟ್ಟಿದ್ದಾರೆ.

ಇದೀಗ ಇಂಪ್ಯಾಕ್ಟ್​ ಪ್ಲೇಯರ್​ (Impact Player) ನಿಯಮವನ್ನು ತೆಗೆದುಹಾಕಲು ಬಿಸಿಸಿಐ ಮುಂದಾಗಿರುವ ಬಗ್ಗೆ ಐಪಿಎಲ್​ ಫ್ರಾಂಚೈಸಿಗಳು (IPL Franchise) ಅಪಸ್ವರ ತೆಗೆದಿವೆ ಎಂದು ಹೇಳಲಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕಾರಿ ಸಮಿತಿ (Core committe Meeting) ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ವರದಿಯಾಗಿದೆ. ಅಂತಿಮವಾಗಿ ಬಿಸಿಸಿಐ (BCCI) ಯಾರ ನಿರ್ಧಾರಕ್ಕೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.