ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಶರತ್ ಬಿಆರ್ ಮತ್ತು ಸ್ಯಾಂಡಲ್ವುಡ್ ನಟಿ ಅರ್ಚನಾ ಕೊಟ್ಟಿಗೆ ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 28 ವರ್ಷದ ಶರತ್, ಕಳೆದ ವರ್ಷ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು.
ಕಳೆದ 8 ವರ್ಷಗಳಿಂದಲೂ ಸ್ನೇಹಿತರಾಗಿದ್ದ ಇಬ್ಬರು, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಕ್ರಿಕೆಟಿಗರಾದ ದೇವದತ್ ಪಡಿಕ್ಕಲ್, ಪ್ರಸಿದ್ಧ ಕೃಷ್ಣ, ವೈಶಾಕ್ ವಿಜಯ್ಕುಮಾರ್, ಮನೋಜ್ ಭಾಂಡಗೆ ಮತ್ತಿತರರು ಸಮಾರಂಭಕ್ಕೆ ಹಾಜರಾಗಿ ನವದಂಪತಿಗೆ ಶುಭ ಹಾರೈಸಿದರು. ಸಿನಿಮಾ ತಾರೆಯರಾದ ಸಪ್ತಮಿ ಗೌಡ, ಅಮೃತಾ ಅಯ್ಯಂಗಾರ್, ಆಶಿಕಾ ರಂಗನಾಥ್ ಕೂಡ ಭಾಗಿಯಾದರು.