ಕ್ರೀಡೆ

ಖ್ಯಾತ ಕ್ರಿಕೆಟಿಗ ಶೇನ್​ ವಾರ್ನ್ ಇನ್ನಿಲ್ಲ...

ನವದೆಹಲಿ: ಖ್ಯಾತ ಕ್ರಿಕೆಟಿಗ, ಆಸ್ಟ್ರೇಲಿಯಾದ ಶೇನ್​ ವಾರ್ನ್​ (52) ಇಂದು ಕೊನೆಯುಸಿರೆಳೆದಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶೇನ್ ವಾರ್ನ್ ತಮ್ಮ ವಿಲ್ಲಾದಲ್ಲಿ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಿದರೂ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅವರ ಆಪ್ತಮೂಲಗಳು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿವೆ.

ಸದ್ಯ ಅವರು ಥಾಯ್ಲೆಂಡ್​​ನಲ್ಲಿ ಸಾವಿಗೀಡಾಗಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಅವರ ಕುಟುಂಬ ಮೂಲದಿಂದ ಇನ್ನಷ್ಟೇ ಹೊರಬೀಳಬೇಕಿದೆ. (ಏಜೆನ್ಸೀಸ್)