ಜ್ವೆರೆವ್ ಯುಎಸ್ ಓಪನ್ ಚಾಂಪಿಯನ್: ಜರ್ಮನಿ ಆಟಗಾರನಿಗೆ 2ನೇ ಗ್ರಾಂಡ್ ಸ್ಲಾಂ ಕಿರೀಟ 
ಕ್ರಿಕೆಟ್

ಜ್ವೆರೆವ್ ಯುಎಸ್ ಓಪನ್ ಚಾಂಪಿಯನ್: ಜರ್ಮನಿ ಆಟಗಾರನಿಗೆ 2ನೇ ಗ್ರಾಂಡ್ ಸ್ಲಾಂ ಕಿರೀಟ

ನ್ಯೂಯಾರ್ಕ್: ಹಾಲಿ ಟೆನಿಸ್ ಋತುವಿನಲ್ಲಿ ತನ್ನ ಕನಸಿ ಓಟ ಮುಂದುವರಿಸಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವರ್ಷದ 4ನೇ ಹಾಗೂ ಕೊನೇ ಗ್ರಾಂಡ್ ಸ್ಲಾಂ ಯುಎಸ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಮೂಲಕ ಅಗ್ರ ಶ್ರೇಯಾಂಕಿತ ಜ್ವೆರೆವ್ ಹಾಲಿ ವರ್ಷ ಫ್ರೆಂಚ್ ಓಪನ್ ನಂತರ ಗೆದ್ದ 2ನೇ ಮೇಜರ್ ಟೂರ್ನಿ ಇದಾಗಿದ್ದು, ಆತಿಥೇಯ ತಾರೆ ಬೆನ್ ಶೆಲ್ಟನ್ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಕಂಡರು. ಇದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಅಮೆರಿಕನ್ನರ 23 ವರ್ಷಗಳ ಸುದೀರ್ಘ ಪ್ರಶಸ್ತಿ ಬರವೂ ಮುಂದುವರಿಯಿತು.
ಭಾನುವಾರ ತಡರಾತ್ರಿ ಅರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ 29 ವರ್ಷದ ಜ್ವೆರೆವ್ 6-3, 7-6 (2), 5-7, 6-2 ಅಂತರದಿಂದ ಎಂಟನೇ ಶ್ರೇಯಾಂಕಿತ ಬೆನ್ ಶೆಲ್ಟನ್‌ರನ್ನು ಮಣಿಸಿದರು. ಈ ಮೂಲಕ 2003ರ ನಂತರ ಅಮೆರಿಕದ ಪುರುಷ ಆಟಗಾರನೊಬ್ಬ ಗ್ರಾಂಡ್ ಸ್ಲಾಂ ಜಯಿಸುವುದನ್ನು ನೋಡಲು ನೆರೆದಿದ್ದ 24 ಸಾವಿರಕ್ಕೂ ಅಧಿಕ ಸ್ಥಳೀಯ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು. 2020ರಲ್ಲಿ ಕೈತಪ್ಪಿದ್ದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಜ್ವೆರೆವ್ ಮುಕ್ತ ಟೆನಿಸ್ ಯುಗದಲ್ಲಿ ಈ ಸಾಧನೆ ಮಾಡಿದ ಜರ್ಮನಿಯ ಎರಡನೇ ಆಟಗಾರ ಎನಿಸಿದರು.
ಆರು ವರ್ಷಗಳ ಹಿಂದೆ ಎರಡು ಸೆಟ್ ಮುನ್ನಡೆಯ ನಡುವೆಯೂ ಪ್ರಶಸ್ತಿ ಜಯಿಸುವಲ್ಲಿ ವಿಲವಾಗಿದ್ದ ಮಧುಮೇಹ ಟೈಪ್-1 ಕಾಯಿಲೆ ಹೊಂದಿರುವ ಜ್ವೆರೆವ್ ಈ ಬಾರಿಯೂ ಎರಡು ಸೆಟ್ ನಂತರ ಮೂರನೇ ಸೆಟ್‌ನಲ್ಲಿ ಹಿನ್ನಡೆ ಕಂಡರು. ಟೈಬ್ರೇಕರ್‌ನಲ್ಲಿ 4ನೇ ಸೆಟ್ ಒಲಿಸಿಕೊಂಡ ಜ್ವೆರೆವ್, ತಾನು ಗೆದ್ದಿರುವುದು ತಕ್ಷಣಕ್ಕೆ ತಿಳಿಯದೆ ಬೇಸ್‌ಲೈನ್ ಬಳಿ ತೆರಳಿದರು. ಕೆಲ ಕ್ಷಣಗಳ ನಂತರ ತಾನು ಗೆದ್ದಿರುವುದನ್ನು ಅರಿತು ಕೈಯನ್ನು ಮೇಲೆತ್ತಿ ಮುಗುಳುನಗೆಯೊಂದಿಗೆ ಸಂಭ್ರಮಿಸಿದರು. ಇದರೊಂದಿಗೆ 23 ವರ್ಷದ ಬೆನ್ ಶೆಲ್ಟನ್ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಕನಸು ಭಗ್ನಗೊಂಡಿತು.
2. ಅಲೆಕ್ಸಾಂಡರ್ ಜ್ವೆರೆವ್ ಮುಕ್ತ ಟೆನಿಸ್ ಯುಗದಲ್ಲಿ ಯುಎಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಜರ್ಮನಿಯ 2ನೇ ಆಟಗಾರ. ಬೊರಿಸ್ ಬೆಕರ್ (1989) ಮೊದಲಿಗರು.
4. ಒಂದೇ ಋತುವಿನಲ್ಲಿ ತನ್ನ ಮೊದಲ ಎರಡು ಮೇಜರ್ ಪ್ರಶಸ್ತಿಗಳನ್ನು ಗೆದ್ದ 4ನೇ ಆಟಗಾರ. ಜಿಮ್ಮಿ ಕಾನರ್ರ್ಸ್‌, ಗಿಲ್ಲೆರ್ಮೊ ವಿಲಾಸ್, ಯಾನಿಕ್ ಸಿನ್ನರ್ ಹಿಂದಿನ ಸಾಧಕರು.
52. ಜ್ವೆರೆವ್ ಪ್ರಶಸ್ತಿ ಗೆಲುವಿನೊಂದಿಗೆ 52.55 ಕೋಟಿ ರೂ.ನಗದು ಬಹುಮಾನ ಗಳಿಸಿದರೆ, ರನ್ನರ್‌ಅಪ್ ಬೆನ್ ಶೆಲ್ಟನ್ 26.75 ಕೋಟಿ ರೂ. ಪಡೆದರು.