ಶ್ರೀಲಂಕಾ ಎದುರು ಗೆದ್ದು ಬೀಗಿದ ಜಿಂಬಾಬ್ವೆ
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಗೆಲುವು
- ಶ್ರೀಲಂಕಾ ವಿರುದ್ಧ 6 ವಿಕೆಟ್ಗಳ ರೋಚಕ ಜಯ
- ಆಸೀಸ್, ಶ್ರೀಲಂಕಾಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ ಈಗ ಸೂಪರ್ 8 ಕದನಕ್ಕೆ
ಕೊಲೊಂಬೊ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಗೆಲುವು ನೋಡಿಕೊಂಡು ಬಂದಿರುವ ಜಿಂಬಾಬ್ವೆ ತಂಡ, ಇಂದು (ಫೆ.19) ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್ಗಳ ರೋಚಕ ಗೆಲುವು ದಾಖಲಿಸುವ ಮೂಲಕ ಇದೀಗ ಸೂಪರ್ 8 ಹಂತದಲ್ಲಿ ನಮ್ಮ ಸ್ಥಾನವನ್ನು ಖಚಿತಪಡಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ಜಿಂಬಾಬ್ವೆಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. 20 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡ ಸಿಂಹ ಪಡೆ, 178 ರನ್ ಕಲೆಹಾಕಲು ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆಗೆ ಬ್ರಿಯಾನ್ ಬೆನೆಟ್ ಮತ್ತು ಸಿಕಂದರ್ ರಾಝ ಅವರ ಉತ್ತಮ ಇನ್ನಿಂಗ್ಸ್ ಗೆಲುವಿಗೆ ಪ್ರಮುಖ ಕಾರಣವಾಯಿತು.
ಕಳೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ, ಕಾಂಗರೂ ಪಡೆಯನ್ನು ಟಿ20 ಟೂರ್ನಿಯಿಂದ ಹೊರಗಟ್ಟಿತು. ಈಗ ಶ್ರೀಲಂಕಾವನ್ನು ಮಣಿಸುವ ಮೂಲಕ ಗ್ರೂಪ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಕಂಡಿದೆ. ಒಂದು ಮ್ಯಾಚ್ ಮಳೆಯಿಂದಾಗಿ ರದ್ದಾಯಿತು. ಈ ಮೂಲಕ ಆಸ್ಟ್ರೇಲಿಯಾ, ಶ್ರೀಲಂಕಾದಂತಹ ಅನುಭವಿ ತಂಡಗಳನ್ನು ಈ ಬಾರಿಯ ಟಿ20 ವಿಶ್ವಕಪ್ ಸರಣಿಯಲ್ಲಿ ಹಿಂದಿಕ್ಕಿರುವ ಜಿಂಬಾಬ್ವೆ, ಈಗ ಸೂಪರ್ 8 ಕದನಕ್ಕೆ ಎದುರುನೋಡುತ್ತಿದೆ,(ಏಜೆನ್ಸೀಸ್).