Yuzvendra Chahal ಚಿತ್ರ Instagram 
ಕ್ರಿಕೆಟ್

ಸಿಕ್ಕಿಬಿದ್ದ ಸ್ಪಿನ್ ಮಾಂತ್ರಿಕ? ವಿಮಾನದಲ್ಲೇ ವೇಪಿಂಗ್ ಮಾಡಿದ್ರಾ ಚಾಹಲ್! ವಿಡಿಯೋ ವೈರಲ್.. Yuzvendra Chahal

ಹೈದರಾಬಾದ್​: ಐಪಿಎಲ್ 2026ರ ಆವೃತ್ತಿಯು ಕೇವಲ ಸಿಕ್ಸರ್-ಬೌಂಡರಿಗಳಿಗಷ್ಟೇ ಅಲ್ಲದೆ, ಸಾಲು ಸಾಲು ವಿವಾದಗಳಿಂದಲೂ ಸುದ್ದಿಯಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದೊಡ್ಡ ವಿವಾದವೊಂದರಲ್ಲಿ ಸಿಲುಕಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

ಘಟನೆ ಏನು?

ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಪಂಜಾಬ್​ ಕಿಂಗ್ಸ್​ ತಂಡವು ಮೇ 6 ರಂದು ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಆರ್ಷ್​ದೀಪ್​ ಟ್ರಾವೆಲ್​ ವ್ಲಾಗ್ ಒಂದನ್ನು ಚಿತ್ರೀಕರಿಸುತ್ತಿದ್ದರು. ಆ ವಿಡಿಯೋದ ಒಂದು ಭಾಗದಲ್ಲಿ ಚಾಹಲ್​ ವಿಮಾನದಲ್ಲಿ ವೇಪ್​ ಮಾಡುತ್ತಿರುವಂತೆ ಕಂಡುಬಂದಿದೆ. 
ಚಾಹಲ್ ವೇಪ್ ಬಳಸುತ್ತಿರುವುದನ್ನು ನೋಡಿದ ನಂತರ ಆರ್ಷ್​ದೀಪ್​ ವಿಡಿಯೋದ ಉದ್ದವನ್ನು ಕಡಿಮೆ ಮಾಡಿದ್ದಾರೆ ಎಂದು ಬಳಕೆದಾರರು ಆರೋಪಿಸಿದ್ದಾರೆ. ಆದಾಗ್ಯೂ, ಭದ್ರತಾ ಲೋಪದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಚಾಹಲ್​ ವೇಪ್​ ಬಳಸಿ ವಿಮಾನವನ್ನು ಹೇಗೆ ಹತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. 
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಾಹಲ್ ವೇಪ್ ಮಾಡುವುದು ಏಕೈಕ ಕೃತ್ಯವಲ್ಲ. ಈ ಹಿಂದೆ ನಡೆದ ಐಪಿಎಲ್ ಸಂದರ್ಭದಲ್ಲಿ ವಾಹನ ಚಲಾಯಿಸುತ್ತಾ ಧೂಮಪಾನ ಮಾಡಿ ಸಿಗರೇಟ್​ ಅನ್ನು ನೆಲಕ್ಕೆ ಎಸೆಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಜನರು "ಇದು ಕೇವಲ ಶಿಸ್ತಿನ ಉಲ್ಲಂಘನೆಯಲ್ಲ, ಕಾನೂನಿನ ಉಲ್ಲಂಘನೆಯೂ ಹೌದು" ಎಂದು ಟೀಕಿಸುತ್ತಿದ್ದಾರೆ. ಈ ಹಿಂದೆಯಷ್ಟೇ ರಾಜಸ್ಥಾನ್ ರಾಯಲ್ಸ್‌ನ ರಿಯಾನ್ ಪರಾಗ್ ಕೂಡ ಇದೇ ರೀತಿಯ ವೇಪಿಂಗ್ ವಿವಾದದಲ್ಲಿ ಸಿಲುಕಿದ್ದರು. ಈಗ ಚಹಾಲ್ ಕೂಡ ಅದೇ ಹಾದಿ ಹಿಡಿದಿರುವುದು ಐಪಿಎಲ್ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ (ಏಜೆನ್ಸೀಸ್​).