ಯಜುವೇಂದ್ರ ಚಹಲ್​  
ಕ್ರಿಕೆಟ್

ಹುಡುಕುತ್ತಿರುವೆ... ನೆಟ್ಟಿಗರಲ್ಲಿ ಗೊಂದಲ ತಂದಿಟ್ಟ ಯಜುವೇಂದ್ರ ಚಹಲ್​ ಕಮೆಂಟ್​! ಹೀಗಿದೆ ವೈರಲ್​ ಪೋಸ್ಟ್​

ಪ್ರಮುಖ ಮುಖ್ಯಾಂಶಗಳು

  • ಈ ವರ್ಷದ ಮಾರ್ಚ್​ನಲ್ಲಿ ಧನಶ್ರೀಗೆ ವಿಚ್ಛೇದನ
  • ಡಿವೋರ್ಸ್​ ಬಳಿಕ ಗೆಳತಿ ಆರ್​ಜೆ ಮಹ್ವಾಶ್​ ಜತೆ ಸುತ್ತಾಟ
  • ಮದುವೆ ಕುರಿತು ಮಾಡಿದ ಕಮೆಂಟ್​ ವೈರಲ್​
ಮುಂಬೈ: ಈ ವರ್ಷದ ಮಧ್ಯದಲ್ಲಿ ಧನಶ್ರೀ ವರ್ಮ ಅವರಿಗೆ ವಿಚ್ಛೇದನ ನೀಡಿದ ಟೀಮ್ ಇಂಡಿಯಾ ಬೌಲರ್​ ಯಜುವೇಂದ್ರ ಚಹಲ್​, ಡಿವೋರ್ಸ್​ ಕೊಟ್ಟ ಕೆಲವೇ ದಿನಗಳ ಬಳಿಕ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್​ ಟ್ರೋಫಿಯ ಫೈನಲ್ ಹಣಾಹಣಿಯಲ್ಲಿ ಗೆಳತಿ ಆರ್​ಜೆ ಮಹ್ವಾಶ್​ ಜತೆ ಸ್ಟೇಡಿಯಂನಲ್ಲಿ ಪ್ರತ್ಯಕ್ಷವಾದರು. ಅಂದಿನಿಂದ ಇವರಿಬ್ಬರ ಮದುವೆ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಬಲು ಜೋರಾಗಿ ಹರಿದಾಡುತ್ತಿವೆ. ಈ ಮಧ್ಯೆ, ಇದೀಗ ಚಹಲ್​ ಮಾಡಿರುವ ಕಮೆಂಟ್​ ಸದ್ಯ ನೆಟ್ಟಿಗರಲ್ಲಿ ಗೊಂದಲ ಸೃಷ್ಟಿಸಿದೆ.  
ಟೀಮ್ ಇಂಡಿಯಾ ಪರ ಅಷ್ಟಾಗಿ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ಸ್ಪಿನ್​ ಮಾಂತ್ರಿಕ ಚಹಲ್​, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದಾರೆ. ತಮ್ಮ ಬಗ್ಗೆ ಹರಿದಾಡುತ್ತಿರುವ ಮದುವೆ ವದಂತಿಗಳು, ಮೀಮ್​ಗಳನ್ನು ನೋಡಿ ಖುಷಿ ಪಡುವ ಅವರು, ಈಗ ತಮ್ಮ ಕಮೆಂಟ್​ನಿಂದ ಹಲವರ ಹುಬ್ಬೇರಿಸಿದ್ದಾರೆ. ಕ್ರಿಕೆಟಿಗನ ಈ ಕಮೆಂಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕ್ಷಣಮಾತ್ರದಲ್ಲಿ ವೈರಲ್ ಆಗಿದೆ.   
ಹಿಂದಿಯಲ್ಲಿ ಕಮೆಂಟ್ ಹಾಕಿರುವ ಚಹಲ್​, ನಾನು ಮದುವೆಯಾಗಲು ರೆಡಿಯಿದ್ದೇನೆ. ಆದರೆ, ಹುಡುಗಿ ಬೇಕಷ್ಟೇ ಎಂದಿದ್ದಾರೆ. ಚಹಲ್​ ಹಾಕಿರುವ ಈ ಕಮೆಂಟ್​ಗೆ ಅನೇಕರು ಪ್ರತಿಕ್ರಿಯಿಸಿದ್ದು, ಒಂದಷ್ಟು ಮಂದಿ ಮತ್ತೊಂದು ಮದುವೆಗೆ ನೀವು ಮಾಡಿರುವ ನಿರ್ಧಾರ ಸರಿಯಿದೆ ಎಂದರೆ, ಇನ್ನೂ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚಹಲ್​-ಧನಶ್ರೀ ಡಿವೋರ್ಸ್​

ಚಹಲ್ ಮತ್ತು ಧನಶ್ರೀ ಅವರ ವಿಚ್ಛೇದನ ಈ ವರ್ಷದ ಮಾರ್ಚ್ 2025ರಲ್ಲಿ ಮುಂಬೈ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು. ಈ  ನಿರ್ಧಾರದಿಂದ ಅವರ ನಾಲ್ಕು ವರ್ಷಗಳ ದಾಂಪತ್ಯಕ್ಕೆ ತೆರೆ ಬಿದ್ದಿತು. ಚಹಲ್​-ಧನಶ್ರೀ ಮಧ್ಯೆ ಬಿರುಕು ಮೂಡಿದೆ ಎಂಬ ವದಂತಿಗಳು 2022ರ ಮಧ್ಯದಿಂದಲೂ ವ್ಯಾಪಕವಾಗಿ ಹರಿದಾಡಿತ್ತು. ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವರದಿಗಳು ಅಂದು ದೊಡ್ಡ ಸುದ್ದಿಗೆ ಕಾರಣವಾಗಿತ್ತು,(ಏಜೆನ್ಸೀಸ್).