ಇನ್ನೂ ಮುಗಿದಿಲ್ಲ... 17 ವರ್ಷದ ಕ್ರಿಕೆಟ್​ ಕರಿಯರ್​ಗೆ ಗುಡ್​ಬೈ ಹೇಳಿದ ಯುಜ್ವೇಂದ್ರ ಚಹಾಲ್! ಆದ್ರೆ, ಹೀಗಿದೆ ಅಸಲಿ​ ಟ್ವಿಸ್ಟ್ | ​Yuzvendra Chahal 
ಕ್ರಿಕೆಟ್

ಇನ್ನೂ ಮುಗಿದಿಲ್ಲ... 17 ವರ್ಷದ ಕ್ರಿಕೆಟ್​ ಕರಿಯರ್​ಗೆ ಗುಡ್​ಬೈ ಹೇಳಿದ ಯುಜ್ವೇಂದ್ರ ಚಾಹಲ್! ಆದ್ರೆ, ಹೀಗಿದೆ ಅಸಲಿ​ ಟ್ವಿಸ್ಟ್ | ​Yuzvendra Chahal

ಉತ್ತಮ ಫಾರ್ಮ್​ನಲ್ಲಿದ್ದರೂ ಮ್ಯಾನೇಜ್​ಮೆಂಟ್​ ತಮ್ಮನ್ನು ಕೈಬಿಟ್ಟಿರುವ ಬೇಸರವನ್ನು ವ್ಯಕ್ತಪಡಿಸಿರುವ ಅವರು, ಏಕದಿನ ಮತ್ತು ಟಿ20 ಮಾದರಿಯಲ್ಲಿ ಮತ್ತೊಮ್ಮೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಹೊರಹಾಕಿದ್ದಾರೆ.

Yuzvendra Chahal: ಟೀಮ್ ಇಂಡಿಯಾದ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಸದ್ಯ ತಮ್ಮ 17 ವರ್ಷಗಳ ಟೆಸ್ಟ್​ ಕರಿಯರ್​ಗೆ ಇದೀಗ ದಿಢೀರ್​ ಎಂಬಂತೆ ನಿವೃತ್ತಿ ಘೋಷಿಸಿದ್ದಾರೆ.

ಇಂದು ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅವರು, ತನ್ನ 17 ವರ್ಷಗಳ ಸುದೀರ್ಘ ರೆಡ್ ಬಾಲ್ ವೃತ್ತಿಜೀವನಕ್ಕೆ ಗುಡ್​ಬೈ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಆಡುವ ತನ್ನ ಕನಸು ಇನ್ನೂ ನನಸಾಗಿಲ್ಲ ಎಂದು ಭಾವನಾತ್ಮಕವಾಗಿ ಹೇಳಿಯೇ ನಿವೃತ್ತಿ ಘೋಷಣೆ ಮಾಡಿರುವುದು ಕ್ರಿಕೆಟ್​ ಪ್ರೇಮಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಟೆಸ್ಟ್​ಗೆ ಮಾತ್ರವೆಂದು ಹೇಳುವ ಮೂಲಕ ಇನ್ನೂ ವೈಟ್ ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿಲ್ಲ ಎಂಬುದನ್ನೂ ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಉತ್ತಮ ಫಾರ್ಮ್​ನಲ್ಲಿದ್ದರೂ ಮ್ಯಾನೇಜ್​ಮೆಂಟ್​ ತಮ್ಮನ್ನು ಕೈಬಿಟ್ಟಿರುವ ಬೇಸರವನ್ನು ವ್ಯಕ್ತಪಡಿಸಿರುವ ಅವರು, ಏಕದಿನ ಮತ್ತು ಟಿ20 ಮಾದರಿಯಲ್ಲಿ ಮತ್ತೊಮ್ಮೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಹೊರಹಾಕಿದ್ದಾರೆ.

2009ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ ಚಾಹಲ್​, 49 ಪ್ರಥಮ ದರ್ಜೆ ಪಂದ್ಯಗಳಲ್ಲಿ 32.27ರ ಸರಾಸರಿಯಲ್ಲಿ 148 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರ ರೆಡ್​ ಬಾಲ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವು 2016-17ರ ರಣಜಿ ಆವೃತ್ತಿಯಲ್ಲಿ ಹಲವರ ಗಮನ ಸೆಳೆಯಿತು. ಚಹಾಲ್​, ಆ ಸೀಸನ್​ನಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಿದರು ಮತ್ತು 33 ವಿಕೆಟ್​ಗಳನ್ನು ಪಡೆದು ಮಿಂಚಿದರು.

ಟೆಸ್ಟ್ ಕ್ಯಾಪ್ ನನ್ನ ಕನಸು...

10ನೇ ವಯಸ್ಸಿನಲ್ಲಿ ನಾನು ಹಿಡಿದ ಮೊದಲ ಕ್ರಿಕೆಟ್ ಬಾಲ್ ಕೆಂಪು ಚೆಂಡು ಎಂದು ನೆನಪಿಸಿಕೊಂಡ ಚಹಾಲ್, ರೆಡ್​ ಬಾಲ್​ ಕ್ರಿಕೆಟ್ ತನಗೆ ತಾಳ್ಮೆ, ಪರಿಶ್ರಮ, ಗೆಲವು-ಸೋಲೆಂಬ ಹಲವು ವಿಷಯಗಳನ್ನು ಕಲಿಸಿದೆ. ಲಾರ್ಡ್ಸ್‌ನಲ್ಲಿ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದು ಭಾವನಾತ್ಮಕವಾಗಿತ್ತು. ಟೆಸ್ಟ್ ಕ್ಯಾಪ್ ಗೆಲ್ಲುವುದು ತಮ್ಮ ಬಹುದಿನದ ಕನಸಾಗಿದ್ದು, ಅದು ನನಸಾಗದಿದ್ದರೂ ಪಯಣ ತೃಪ್ತಿ ತಂದಿದೆ. ಈ ಕರಿಯರ್​ ನನ್ನ ಜೀವನದಲ್ಲಿ ಅನೇಕ ಸುಂದರ ನೆನಪುಗಳನ್ನು ಕೊಟ್ಟಿದೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ನಾನು ಇನ್ನೂ ನಿವೃತ್ತಿಯಾಗಿಲ್ಲ...

ಚಹಾಲ್​ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮಾತ್ರ ವಿದಾಯ ಹೇಳಿದ್ದೇ ಆದರೂ ಇನ್ನೂ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಭಾರತ ಪರ 72 ಏಕದಿನ ಮತ್ತು 80 ಟಿ20 ಪಂದ್ಯಗಳನ್ನು ಆಡಿರುವ ಚಹಾಲ್, 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಆಗಸ್ಟ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಅವರು ಕೊನೆಯದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರು.

"ನನ್ನ ದೇಶಕ್ಕಾಗಿ ಆಡುವ ಆಸೆ ಇನ್ನೂ ಬಲವಾಗಿದೆ. ನನ್ನಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎಂಬ ನಂಬಿಕೆ ನನ್ನಲ್ಲಿದೆ. ಏಕದಿನ ಮತ್ತು ಟಿ20ಗಳಲ್ಲಿ ಮತ್ತೊಂದು ಅವಕಾಶ ಪಡೆಯಲು ಶಕ್ತಿ ಮೀರಿ ಹೋರಾಡುತ್ತೇನೆ" ಎಂದಿದ್ದಾರೆ ಯುಜ್ವೇಂದ್ರ ಚಾಹಲ್,(ಏಜೆನ್ಸೀಸ್).