ಮಹಾರಾಜ ಟ್ರೋಫಿ ಟಿ20: ಶಿವಮೊಗ್ಗ ಯೋಧಾಸ್​ ಗೆಲುವಿನಾರಂಭ 
ಕ್ರಿಕೆಟ್

ಮಹಾರಾಜ ಟ್ರೋಫಿ ಟಿ20: ಶಿವಮೊಗ್ಗ ಯೋಧಾಸ್​ ಗೆಲುವಿನಾರಂಭ

ವಿಜಯವಾಣಿ ಸುದ್ದಿಜಾಲ ಮೈಸೂರು
ಲವನೀತ್​ ಸಿಸೋಡಿಯಾ (58 ರನ್​, 38ಎಸೆತ, 8 ಬೌಂಡರಿ, 1ಸಿಕ್ಸರ್​) ಆಕರ್ಷಕ ಬ್ಯಾಟಿಂಗ್​ ನೆರವಿನಿಂದ ಶಿವಮೊಗ್ಗ ಯೋಧಾಸ್​ (Shivamogga Yodhas) ತಂಡ ಮಹಾರಾಜ ಟ್ರೋಫಿಯ (Maharaja Trophy KSCA T20) ದಿನದ 2ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್​ ಮೈಸೂರು ವಾರಿಯರ್ಸ್ (Mysore Warriors)​ ಎದುರು 90 ರನ್​ಗಳಿಂದ ಗೆಲುವು ದಾಖಲಿಸಿತು.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಯೋಧಾಸ್​ಗೆ ಲವನೀತ್​, ತುಷಾರ್​ ಸಿಂಗ್​(33), ನಾಯಕ ಆರ್​.ಸ್ಮರಣ್​(36), ಹರ್ಷಿಲ್​(36) ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 8 ವಿಕೆಟ್​ಗೆ 190 ರನ್​ ಗಳಿಸಿತು. ಪ್ರತಿಯಾಗಿ ಮೈಸೂರು 14.5 ಓವರ್​ಗಳಲ್ಲಿ 100 ರನ್​ಗಳಿಗೆ ಆಲೌಟ್​ ಆಯಿತು.

ಶಿವಮೊಗ್ಗ: 8 ವಿಕೆಟ್​ಗೆ 190 (ಲವನೀತ್​ 58 , ತುಷಾರ್​ 33, ಸ್ಮರಣ್​ 36, ಹರ್ಷಿಲ್​36, ಭಾಂಡಗೆ 16ಕ್ಕೆ 2, ವೈಶಾಖ್​ 38ಕ್ಕೆ 2, ಮೋನಿಷ್​ ರೆಡ್ಡಿ 40ಕ್ಕೆ 1). ಮೈಸೂರು: 14.5 ಓವರ್​ಗಳಲ್ಲಿ 100 (ಚೇತನ್​ 1, ಕಾರ್ತಿಕ್​ 16, ರಿತೇಶ್​ 17, ವೈಶಾಖ್​ 13, ಯಶ್​ರಾಜ್​ 30ಕ್ಕೆ 4, ಅಭಿಲಾಷ್​ 10ಕ್ಕೆ 2).
ಭಾನುವಾರದ ಪಂದ್ಯಗಳು
*ಮಂಗಳೂರು-ಹುಬ್ಬಳ್ಳಿ
ಆರಂಭ: ಮಧ್ಯಾಹ್ನ 2.30
*ಬೆಂಗಳೂರು-ಶಿವಮೊಗ್ಗ
ಆರಂಭ ರಾತ್ರಿ 7
ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ಕನ್ನಡ, ಫ್ಯಾನ್​ಕೋಡ್​ ಆ್ಯಪ್​