ಕರ್ನಾಟಕದ ಶ್ರೇಯಾಂಕಾ ಪಾಟೀಲ್, ನಿಕಿ ಪ್ರಸಾದ್ ರಿಟೇನ್
ಮುಂಬೈ: ಕರ್ನಾಟಕದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಹಾಗೂ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕಿ ನಿಕಿ ಪ್ರಸಾದ್ ಅವರನ್ನು ಮುಂಬರುವ 4ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ಗೆ (WPL) ಕ್ರಮವಾಗಿ ಆರ್ಸಿಬಿ (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ರಿಟೇನ್ ಮಾಡಿಕೊಂಡಿವೆ.
ಭಾರತ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್, ಸ್ಮೃತಿ ಮಂದನಾರನ್ನು (Smrithi Mandhana) ಮುಂಬೈ, ಆರ್ಸಿಬಿ ತಂಡಗಳು ಉಳಿಸಿಕೊಂಡಿದ್ದು, ಡೆಲ್ಲಿ ತಂಡ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಯುಪಿ ವಾರಿಯರ್ಸ್ ತಂಡ ದೀಪ್ತಿ ಶರ್ಮರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ. ನ.27ಕ್ಕೆ ಆಟಗಾರ್ತಿಯರ ಮೆಗಾ ಹರಾಜು ನಡೆಯಲಿದೆ.
ರಿಟೇನ್ ಆಟಗಾರ್ತಿರು: ಮುಂಬೈ ಇಂಡಿಯನ್ಸ್: ಹರ್ಮಾನ್ಪ್ರೀತ್, ನ್ಯಾಟ್ ಸೀವರ್ ಬ್ರಂಟ್, ಅಮನ್ಜೋತ್ ಕೌರ್, ಜಿ.ಕಮಿಲಿನಿ, ಹ್ಯಾಲೆ ಮ್ಯಾಥ್ಯೂಸ್; ಡೆಲ್ಲಿ: ಅನ್ನಾಬೆಲ್ ಸುದರ್ಲ್ಯಾಂಡ್, ಮಾರಿಜಾನ್ನೆ ಕಾಪ್, ಜೆಮೀಮಾ ರೋಡ್ರಿಗಸ್, ಶೆಫಾಲಿ ವರ್ಮ, ನಿಕಿ ಪ್ರಸಾದ್; ಆರ್ಸಿಬಿ: ಸ್ಮೃತಿ ಮಂದನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್; ಗುಜರಾತ್ ಜೈಂಟ್ಸ್: ಆಶ್ಲೇ ಗಾರ್ಡ್ನರ್, ಬೆಥ್ ಮೂನಿ; ಯುಪಿ ವಾರಿಯರ್ಸ್: ಶ್ವೇತಾ ಸೆಹ್ರಾವತ್.