ವಿಶ್ವಕಪ್ ಟ್ರೋಫಿ ಜೊತೆ ಚಹಾಕಪ್ ಹಿಡಿದು ಫೋಟೊ ಹಂಚಿಕೊಂಡ ವರುಣ್ ಚಕ್ರವರ್ತಿ (Varun Chakravarthy)
- 2026 ರ ಟಿ-20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ
- ವಿಶ್ವಕಪ್ ಟ್ರೋಫಿ ಜೊತೆ ಚಹಾಕಪ್ ಹಿಡಿದು ಫೋಟೊ ಹಂಚಿಕೊಂಡ ಭಾರತದ ಸ್ಪಿನ್ನರ್
- ಪಾಕಿಸ್ತಾನಕ್ಕೆ ಕೊಟ್ಟ ಕೌಂಟರ್ ಎಂದ ವರುಣ್ ಚಕ್ರವರ್ತಿ ಅಭಿಮಾನಿಗಳು
ಕ್ರಿಕೆಟ್: ಮಾ.8 ಇದು ಭಾರತದ ಪುರುಷರ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಸುವಾರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ಏಕೆಂದರೆ ಭಾರತವು, ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಚಾಂಪಿಯನಾಗಿ ಹೊರಹೊಮ್ಮಿದೆ.
ಭಾರತ ಫೈನಲ್ ಪಂದ್ಯವನ್ನು ಗೆದ್ದಿತು ಎಂಬ ಸುದ್ದಿ ಈಗ ದೇಶದಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ. ಕೇವಲ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಬಾಲಿವುಡ್ ನಟ-ನಟಿಯರು, ರಾಜಕೀಯ ನಾಯಕರು ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರೆ.
ಈ ಟಿ-20 ವಿಶ್ವಕಪ್ನಿಂದ ಹೊರಬಿದ್ದ ದಿನದಿಂದ ಪಾಕಿಸ್ತಾನ ಮತ್ತು ಆ ದೇಶದ ಮಾಜಿ ಆಟಗಾರರು ಭಾರತ ತಂಡದ ವಿರುದ್ಧ ಕಿಡಿ ಕಾರುತ್ತಾ ಇದ್ದರು. ಭಾರತ ಈ ಪಂದ್ಯ ಸೋಲುತ್ತದೆ, ಆ ಪಂದ್ಯ ಸೋಲುತ್ತದೆ, ಫೈನಲ್ ತಲುಪಿದೆ ಆದರೆ ಗೆಲ್ಲಲು ಸಾಧ್ಯವಿಲ್ಲ ಎಂಬ ತಮ್ಮ ಎಂದಿಗೂ ನಿಜವಾಗದ ಭವಿಷ್ಯವಾಣಿಯನ್ನು ಹೇಳುತ್ತಾ ತಿರುಗುತ್ತಿದ್ದರು.
ಅದರೆ ಈಗ ಭಾರತ ಮತ್ತೊಮ್ಮೆ ವಿಶ್ವಕಪ್ಗೆ ಮುತ್ತಿಕ್ಕಿದನ್ನು ನೋಡಿದ ಪಾಕಿಸ್ತಾನದ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ ಎಂದರೆ ಸುಳ್ಳಲ್ಲ. ಅದೇ ರೀತಿ ಈಗ ಚಾಂಪಿಯನಾಗಿ ಹೊರಹೊಮ್ಮಿದ ಭಾರತ ತಂಡದ ಆಟಗಾರರು ಪಾಕಿಸ್ತಾನವನ್ನು ಉರಿಸುವ ಮತ್ತು ಕಿಚಾಯಿಸುವ ಕೆಲಸವನ್ನು ಶರುವಿಟ್ಟಿದ್ದಾರೆ.
ಹಾಗೂ ಈ ವಿಶ್ವಕಪ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತ ತಂಡದ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ (Varun Chakravarthy) ಕೈಯಲ್ಲಿ ವಿಶ್ವಕಪ್ ಟ್ರೋಫಿ ಜೊತೆಗೆ ಚಹಾ ಕಪ್ನ್ನು ಹಿಡಿದಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಈದೀಗ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಭಾರತದ ಅಭಿಮಾನಿಗಳು ಈ ಫೋಟೊ ಪಾಕಿಸ್ತಾನದ ಆಟಗಾರರನ್ನು ಉರಿಸಲೆಂದೇ ಹಂಚಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಏಷ್ಯಾಕಪ್ ಗೆದ್ದಾಗಲೂ ಹೀಗೆ ಮಾಡಿದ್ದ ವರುಣ್
ಈ ರೀತಿಯ ಫೋಟೊವನ್ನು ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದರೆ ಇದು ಗೆದ್ದ ಖುಷಿಗೆ ಅಪ್ಲೋಡ್ ಮಾಡಿರುವ ಫೋಟೊ ಎನ್ನಬಹುದಿತ್ತು. ಅದರೆ ವರುಣ್ ಇದೇ ರೀತಿಯ ಫೋಟೊವನ್ನು 2025 ರ ಏಷ್ಯಾಕಪ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಹಂಚಿಕೊಂಡಿದ್ದರು.
ಟಿ-20 ವಿಶ್ವಕಪ್ನಲ್ಲಿ ವರುಣ್ ಚಕ್ರವರ್ತಿ ಸಾಧನೆ
ಈ ವಿಶ್ವಕಪ್ನಲ್ಲಿ ಭಾರತದ ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ವರುಣ್ ಚಕ್ರವರ್ತಿ, ಈ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (14 ವಿಕೆಟ್) ಆಗಿ ಹೊರಹೊಮ್ಮಿದ್ದಾರೆ. ಒಟ್ಟಾರೆ 31 ಓವರ್ಗಳನ್ನು ಮಾಡಿದ ಇವರು 231 ರನ್ ನೀಡಿ 14 ವಿಕೆಟ್ಗಳನ್ನು ಖಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ಟಿಮ್ ಶೇಫರ್ಟ್ ಅವರ ವಿಕೆಟ್ನ್ನು ತೆಗೆಯುವ ಮೂಲಕ ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
ಅತೀ ಹೆಚ್ಚು ವಿಕೆಟ್ಗಳನ್ನು ಪಡೆದ ಪಟ್ಟಿಯಲ್ಲಿ ಭಾರತದ ಬೌಲರ್ಗಳಾದ ವರುಣ್ ಚಕ್ರವರ್ತಿ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 14 ವಿಕೆಟ್ಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರೆ, ಅಮೆರಿಕದ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಿಂಬಾಬೆಯ ಮುಜರಬಾನಿ ಆಶೀರ್ವಾದ ಹಾಗೂ ಇಂಗ್ಲೆಂಡ್ನ ಆದಿಲ್ ರಶೀದ್ 13 ವಿಕೆಟ್ಗಳನ್ನು ಪಡೆಯುವ ಮೂಲಕ ನಂತರದ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ,(ಏಜನ್ಸೀಸ್).