ಚೆಸ್ ಒಲಿಂಪಿಯಾಡ್, ಭಾರತ ತಂಡ ಪ್ರಕಟ
ನವದೆಹಲಿ: ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ಸೆಪ್ಟೆಂಬರ್ 16ರಿಂದ 27ರ ವರೆಗೆ ನಿಗದಿಯಾಗಿರುವ ಫಿಡೆ ಚೆಸ್ ಒಲಿಂಪಿಯಾಡ್ 46ನೇ ಆವೃತ್ತಿಗೆ ಹಾಲಿ ಚಾಂಪಿಯನ್ ಭಾರತದ ಪುರುಷರ ಮತ್ತು ಮಹಿಳಾ ತಂಡಗಳನ್ನು ಪ್ರಕಟಿಸಲಾಗಿದೆ. ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, ಆರ್. ಪ್ರಜ್ಞಾನಂದ ಜತೆಗೆ ಕ್ಯಾಂಡಿಡೇಟ್ಸ್ ಟೂರ್ನಿ ವಿಜೇತೆ ಆರ್.ವೈಶಾಲಿ ಸ್ಥಾನ ಪಡೆದಿದ್ದಾರೆ.
2024ರ ಚಾಂಪಿಯನ್ ಭಾರತ ಪುರುಷ-ಮಹಿಳಾ ತಂಡಗಳಲ್ಲಿ ತಲಾ ಐವರು ಚೆಸ್ ತಾರೆಯರಿದ್ದಾರೆ. ಮುಕ್ತ ವಿಭಾಗದಲ್ಲಿ ಡಿ.ಗುಕೇಶ್, ಆರ್. ಪ್ರಜ್ಞಾನಂದ ಜತೆಗೆ ಅರ್ಜುನ್ ಇರಿಗೈಸಿ, ವಿದಿತ್ ಗುಜರಾತಿ ಜತೆಗೆ ನಿಹಾಲ್ ಸರಿನ್ ಹೊಸಮುಖ ಎನಿಸಿದ್ದಾರೆ. ಮಹಿಳಾ ತಂಡದಲ್ಲಿ ಅನುಭವಿ ಕೊನೆರು ಹಂಪಿ, ವೈಶಾಲಿ, ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್, ವಂತಿಕಾ ಅಗರ್ವಾಲ್ ಹಾಗೂ ಸವಿತಾ ಶ್ರೀ ಬಿ. ಇದ್ದಾರೆ. ಹಂಪಿ, ಸವಿತಾ ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದ ತಂಡದ ಭಾಗವಾಗಿರಲಿಲ್ಲ. ಎರಡು ತಂಡಗಳಿಗೆ ಭಾರತದ ಗ್ರಾಂಡ್ ಮಾಸ್ಟರ್ ಸ್ವಯಂಸ್ ಮಿಶ್ರಾ ನಾಯಕನಾಗಿ ನೇಮಕಗೊಂಡಿದ್ದಾರೆ.