ಮಹಿಳಾ ಟಿ20 ವಿಶ್ವಕಪ್: ಇಂಗ್ಲೆಂಡ್, ಆಸ್ಟ್ರೇಲಿಯಾ ಗೆಲುವಿನ ಆರಂಭ
ಬರ್ಮಿಂಗ್‌ಹ್ಯಾಮ್: ಆತಿಥೇಯ ಇಂಗ್ಲೆಂಡ್ ತಂಡ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದೆ. ಶುಕ್ರವಾರ ರಾತ್ರಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಡ್ಯಾನಿ ವ್ಯಾಟ್ ಹಡ್ಜ್ (105* ರನ್, 62 ಎಸೆತ, 13 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕದ ನೆರವಿನಿಂದ ನ್ಯಾಟ್ ಸೀವರ್ ಬ್ರಂಟ್ ಬಳಗ ಶ್ರೀಲಂಕಾ ಎದುರು 87 ರನ್‌ಗಳಿಂದ ಗೆದ್ದು, ಶುಭಾರಂಭ ಮಾಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್‌ಗೆ ಆಮಿ ಜೋನ್ಸ್ (53 ರನ್, 38 ಎಸೆತ, 4 ಬೌಂಡರಿ, 1 ಸಿಕ್ಸರ್) ಮತ್ತು ಡ್ಯಾನಿ ವ್ಯಾಟ್ ಹಾಡ್ಜ್ ಮೊದಲ ವಿಕೆಟ್‌ಗೆ ಶತಕದ ಜತೆಯಾಟ ನೀಡಿದರು. ನಂತರ ನ್ಯಾಟ್ ಸೀವರ್ (46* ರನ್, 22 ಎಸೆತ, 6 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ ಇಂಗ್ಲೆಂಡ್ 1 ವಿಕೆಟ್‌ಗೆ 219 ರನ್‌ಗಳ ದಾಖಲೆ ಮೊತ್ತ ಪೇರಿಸಿತು. ಚುಟುಕು ವಿಶ್ವಕಪ್‌ನಲ್ಲಿ ತಂಡವೊಂದರ ಸರ್ವಾಧಿಕ ಮೊತ್ತ ಇದಾಗಿದೆ. ಪ್ರತಿಯಾಗಿ ್ರೈಯಾ ಕೆಂಪ್ (21ಕ್ಕೆ 4) ದಾಳಿಗೆ ತತ್ತರಿಸಿದ ಶ್ರೀಲಂಕಾ ಭರ್ತಿ 20 ಓವರ್‌ಗಳಲ್ಲಿ 132 ರನ್‌ಗಳಿಗೆ ಸರ್ವಪತನ ಕಂಡಿತು. ಟೂರ್ನಿಯ ಮೊದಲ ಪಂದ್ಯಕ್ಕೆ 14, 865 ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಹಾಜರಿದ್ದರು.
ಇಂಗ್ಲೆಂಡ್:1 ವಿಕೆಟ್‌ಗೆ 219 (ಆಮಿ ಜೋನ್ಸ್ 53, ಡ್ಯಾನಿ ವ್ಯಾಟ್ 105*, ನ್ಯಾಟ್ ಸೀವರ್ 46*, ಮಲ್ಕಿ 51ಕ್ಕೆ 1). ಶ್ರೀಲಂಕಾ: 20 ಓವರ್‌ಗಳಲ್ಲಿ 132 (ವಿಶ್ಮಿ 6, ಚಾಮರಿ 4, ಹರ್ಷಿತಾ 29, ಕವಿಷಾ 19, ನಿಲಾಕ್ಷಿಕ 39, ್ರೈಯಾ ಕೆಂಪ್ 21ಕ್ಕೆ 4, ಚಾರ್ಲಿ ಡೀನ್ 18ಕ್ಕೆ 2). ಪಂದ್ಯಶ್ರೇಷ್ಠ: ಡ್ಯಾನಿ ವ್ಯಾಟ್ ಹಡ್ಜ್.
ಆಸ್ಟ್ರೇಲಿಯಾಗೆ ಜಯ: ಜಾರ್ಜಿಹ್ಯಾ ವೇರ್‌ಹ್ಯಾಂ (32 ರನ್, 22 ಎಸೆತ, 6 ಬೌಂಡರಿ ಹಾಗೂ 13ಕ್ಕೆ 3 ವಿಕೆಟ್) ಆಲ್ರೌಂಡ್ ಆಟ ಜತೆಗೆ ಲಿಚ್‌ಫೀಲ್ಡ್ (50 ರನ್, 24 ಎಸೆತ, 9 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 65 ರನ್‌ಗಳಿಂದ ಗೆದ್ದು ಬೀಗಿತು. ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್‌ಗೆ 172 ರನ್‌ಗಳಿಸಿತು. ಪ್ರತಿಯಾಗಿ ದ.ಆಫ್ರಿಕಾ 16.4 ಓವರ್‌ಗಳಲ್ಲಿ 107 ರನ್‌ಗಳಿಗೆ ಸರ್ವಪತನ ಕಂಡಿತು.
3. ಡ್ಯಾನಿ ವ್ಯಾಟ್ ಹಡ್ಜ್ ಟಿ20 ವಿಶ್ವಕಪ್‌ನಲ್ಲಿ 5ನೇ ಹಾಗೂ ಇಂಗ್ಲೆಂಡ್‌ನ 2ನೇ ಶತಕ ಸಾಧಕಿ ಎನಿಸಿದರು.
784.ನ್ಯಾಟ್ ಸೀವರ್ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಗರಿಷ್ಠ ರನ್‌ಗಳಿಸಿದ ಮಾಜಿ ಆಟಗಾರ್ತಿ, ಹಾಲಿ ಕೋಚ್ ಚಾರ್ಲೋಟ್ ಎಡ್ವರ್ಡ್ಸ್ (768) ದಾಖಲೆ ಮುರಿದರು.