ಭಾರತ ಮಹಿಳಾ ತಂಡದ ಕೋಚ್ ಮಜುಂದಾರ್
- ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭ
- ಜೂನ್ 14ರಂದು ಪಾಕಿಸ್ತಾನ ಎದುರು ಭಾರತ ತಂಡದ ಮೊದಲ ಪಂದ್ಯ
- ಚೊಚ್ಚಲ ಟಿ20 ಪ್ರಶಸ್ತಿಯನ್ನು ಭಾರತ ಎತ್ತಿಹಿಡಿಯಲಿದೆ ಎಂದ ಕೋಚ್
Womens T20 World Cup: ಮಹಿಳಾ ಏಕದಿನ ವಿಶ್ವಕಪ್ 2026ರ ಟೂರ್ನಿ ಆರಂಭವಾಗಿದ್ದು, ಜೂನ್ 14ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ಎದುರು ಆಡಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೀವಿ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವ ಹರ್ಮನ್ಪ್ರೀತ್ ಕೌರ್ ಪಡೆ, ಮೈದಾನದಲ್ಲಿ ಹೆಚ್ಚು ಶ್ರಮಿಸುತ್ತಿದೆ. ಈ ಮಧ್ಯೆ, ಟಿ20 ಟ್ರೋಫಿಯನ್ನು ನಮ್ಮ ತಂಡವೇ ಎತ್ತಿಹಿಡಿಯಲಿದೆ ಎಂದು ಕೋಚ್ ಭವಿಷ್ಯ ನುಡಿದಿದ್ದಾರೆ.
ಯಾವುದೇ ಸವಾಲನ್ನು ಎದುರಿಸಿ ಗೆಲ್ಲುವ ಆತ್ಮವಿಶ್ವಾಸ ಭಾರತ ಮಹಿಳಾ ತಂಡದಲ್ಲಿ ಈಗ ದ್ವಿಗುಣಗೊಂಡಿದೆ ಎಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮಜುಂದಾರ್ ಹೇಳಿದ್ದಾರೆ. ಹರ್ಮನ್ಪ್ರೀತ್ ಕೌರ್ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡವು ಭಾನುವಾರ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದೊಂದಿಗೆ ಇಂಗ್ಲೆಂಡ್‌ನಲ್ಲಿ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ ಎಂದರು.
ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದಶಕಗಳ ಕಾಯುವಿಕೆಯನ್ನೂ ಕೊನೆಗೂ ಮಹಿಳಾ ತಂಡ ಈಡೇರಿಸಿತು. ಆದರೆ, ಟಿ20 ಫಾರ್ಮೆಟ್ ಸಂಪೂರ್ಣ ಬದಲು. ಏಕದಿನ ರೀತಿಯಲ್ಲಿ ಇರುವುದಿಲ್ಲ. ನಾವು ಹಿಂದೆ ಏಕದಿನ ವಿಶ್ವಕಪ್ ಗೆದ್ದಿದ್ದರೂ, ಆ ಟೂರ್ನಮೆಂಟ್ ಗೆಲುವಿನಿಂದ ನಾವು ಬಹಳಷ್ಟು ಕಲಿತಿದ್ದೇವೆ. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಹೋರಾಡಬೇಕು, ಒತ್ತಡವನ್ನು ಕಂಟ್ರೋಲ್ ಮಾಡುವುದು ಮತ್ತು ಯಶಸ್ವಿಯಾಗುವ ಬಗ್ಗೆ ಎಲ್ಲಾ ಆಟಗಾರ್ತಿಯರು ಸಂಪೂರ್ಣವಾಗಿ ಅರಿತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಸ್ತಿಕಾ ಭಾಟಿಯಾ ಎಂಟ್ರಿಯೇ...
ಕಳೆದ ಏಕದಿನ ವಿಶ್ವಕಪ್ ಪ್ರ್ಯಾಕ್ಟಿಸ್ನ ಕೊನೆಯ ದಿನದಂದು ಮೊಣಕಾಲಿನ ಗಾಯದಿಂದಾಗಿ ಪಂದ್ಯದಿಂದ ದೂರ ಉಳಿದ ವಿಕೆಟ್ ಕೀಪರ್-ಬ್ಯಾಟ್ಸ್‌ವುಮನ್ ಯಸ್ತಿಕಾ ಭಾಟಿಯಾ ಈಗ ತಂಡಕ್ಕೆ ಮರಳಿರುವುದು ನಮಗೆ ಖುಷಿ ತಂದಿದೆ. ಕೊನೆಯ ಕ್ಷಣದಲ್ಲಿ ಯಸ್ತಿಕಾ ಗಾಯಗೊಂಡಿದ್ದು ತುಂಬಾ ದುರದೃಷ್ಟಕರ. ಆದರೆ, ಆ ಇಂಜುರಿಯಿಂದ ಅವರು ಚೇತರಿಸಿಕೊಂಡು ವಾಪಾಸ್ ತಂಡವನ್ನು ಸೇರಿರುವುದು ತಂಡಕ್ಕೆ ದೊಡ್ಡ ಬಲವನ್ನು ತುಂಬಿದೆ. ಸವಾಲಗಳನ್ನು ಹೇಗೆ ಎದುರಿಸಬೇಕು ಅನ್ನೋದಕ್ಕೆ ಯಾಸ್ತಿಕಾ ಒಂದು ಉತ್ತಮ ಉದಾಹರಣೆ" ಎಂದು ಹೊಗಳಿದರು.
ಸ್ಪಿನ್ ಮಾತ್ರವಲ್ಲ...
ಭಾರತ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಹೇಳುವುದಾದರೆ, ಒಂದು ಕಾಲಘಟ್ಟದಲ್ಲಿ, ಟೀಮ್ ಇಂಡಿಯಾ ಸ್ಪಿನ್ನರ್‌ಗಳ ಮೇಲೆ ಮಾತ್ರ ಹೆಚ್ಚು ಅವಲಂಬಿತವಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ತಂಡದಲ್ಲಿ ಪ್ರಸ್ತುತ ಎಂಟು ಅತ್ಯುತ್ತಮ ಬೌಲರ್‌ಗಳಿದ್ದು, ಅವರಲ್ಲಿ ಉತ್ತಮ ಸ್ಪಿನ್ನರ್‌ಗಳು ಹಾಗೂ ಗುಣಮಟ್ಟದ ವೇಗಿಗಳು ಸೇರಿದ್ದಾರೆ. ಬೌಲಿಂಗ್ ವಿಭಾಗದಲ್ಲಿನ ಈ ಬದಲಾವಣೆಗಳು ತಂಡದ ದೊಡ್ಡ ಶಕ್ತಿಯಾಗಿದ್ದು, ಈ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಭಾರತವೇ ಗೆಲ್ಲಲಿದೆ ಎಂದು ಭರವಸೆಯ ಮಾತುಗಳನ್ನಾಡಿದರು(ಏಜೆನ್ಸೀಸ್).