ಮಹಿಳಾ ಟಿ20 ಏಷ್ಯಾಕಪ್: ಸೆ.5ಕ್ಕೆ ಭಾರತ-ಪಾಕ್ ಕಾದಾಟ, ಟೂರ್ನಿ ಸ್ವರೂಪ ಹೀಗಿದೆ!
ದುಬೈ: ಮುಂಬರುವ ಏಷ್ಯನ್ ಗೇಮ್ಸ್‌ಗೆ ಪೂರ್ವ ಸಿದ್ಧತೆಯಾಗಿರುವ ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಯ 10ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಕ್ಕಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎ ಗುಂಪಿನ ಥಾಯ್ಲೆಂಡ್ ಹಾಗೂ ಹಾಂಕಾಂಗ್ ಎದುರು 6 ರನ್ ಗೆಲುವು ಸಾಧಿಸಿದೆ. ಏಳು ಬಾರಿಯ ಚಾಂಪಿಯನ್
ಏಳು ಬಾರಿಯ ಚಾಂಪಿಯನ್ ಭಾರತ
ಆಗಸ್ಟ್ 30ರಂದು
ತನ್ನ ಅಭಿಯಾನ ಆರಂಭಿಸಲಿದ್ದು, ಶ್ರೀಲಂಕಾ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದೆ.
ಏಷ್ಯನ್‌ಗೇಮ್ಸ್‌ನಲ್ಲಿ ಆಡಲಿರುವ ಭಾರತ ತಂಡವೇ ಏಷ್ಯಾಕಪ್‌ನಲ್ಲೂ ಕಣಕ್ಕಿಳಿಯಲಿದ್ದು, ಏಷ್ಯಾ ಖಂಡದ ಟೂರ್ನಿಯಲ್ಲಿ ಪ್ರಶಸ್ತಿ ಫೇವರಿಟ್ ಎನಿಸಿದೆ. ಆದರೆ, ಹಾಲಿ ವರ್ಷ ಇದುವರೆಗೆ ಆಡಿರುವ 16 ಟಿ20ಗಳ ಪೈಕಿ 9ರಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ ಸೋಲು ಕಂಡಿದೆ. ಜತೆಗೆ ಐಸಿಸಿ ಟಿ20 ವಿಶ್ವಕಪ್‌ನಲ್ಲೂ ಲೀಗ್ ಹಂತದಲ್ಲಿಯೇ ನಿರ್ಗಮಿಸಿತ್ತು. ಭಾರತದ ಜತೆಗೆ ಚಾಮರಿ ಅಟಪಟ್ಟು ಸಾರಥ್ಯದ ಶ್ರೀಲಂಕಾ ಪ್ರಶಸ್ತಿ ರೇಸ್‌ನಲ್ಲಿದೆ. ಹಾಲಿ ವರ್ಷ 10-3 ಗೆಲುವು-ಸೋಲಿನ ದಾಖಲೆ ಹೊಂದಿದೆ. 2024ರಲ್ಲಿ ನಡೆದ ಕೊನೆಯ ಆವೃತ್ತಿಯ ಫೈನಲ್‌ನಲ್ಲಿ ಭಾರತ ತಂಡ, ಶ್ರೀಲಂಕಾ ಎದುರು 8 ವಿಕೆಟ್‌ಗಳ ಸೋಲು ಕಂಡಿತ್ತು.
2022ರಲ್ಲಿ ಕೊನೆಯದಾಗಿ ಪ್ರಶಸ್ತಿ ಜಯಿಸಿರುವ ಭಾರತ ತಂಡಕ್ಕೆ ಜೆಮೀಮಾ ರೋಡ್ರಿಗಸ್ ಗಾಯದ ಸಮಸ್ಯೆಯಿಂದ ಅಲಭ್ಯರಾಗಲಿದ್ದಾರೆ. ಉಪನಾಯಕಿ ಸ್ಮತಿ ಮಂದನಾ, ವಿಕೆಟ್ ಕೀಪರ್-ಬ್ಯಾಟುಗಾರ್ತಿ ರಿಚಾ ಘೋಷ್ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮ ಪ್ರಮುಖರೆನಿಸಿದ್ದಾರೆ. ಇಂಡೋನೇಷ್ಯಾ ಪದಾರ್ಪಣೆಯ ಹಂಬಲದಲ್ಲಿದೆ. ಬಾಂಗ್ಲಾದೇಶ 2018ರಲ್ಲಿ ಒಮ್ಮೆ ಚಾಂಪಿಯನ್‌ಪಟ್ಟಕೇರಿದ ಬಲ ಹೊಂದಿದೆ.
ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ತನ್ನ ಗುಂಪಿನ ಇತರ ತಂಡಗಳೊಂದಿಗೆ ಒಮ್ಮೆಸೆಣಸಲಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ಗೇರಲಿವೆ. ಸೆ.10, 11ರಂದು ಸೆಮಿಫೈನಲ್ಸ್ ಹಾಗೂ ಸೆ.13ಕ್ಕೆ ಪ್ರಶಸ್ತಿ ಕಾದಾಟ ನಡೆಯಲಿದೆ.
2. ಎಂಟು ತಂಡಗಳು ಒಳಗೊಂಡ ಎರಡನೇ ಆವೃತ್ತಿ ಇದಾಗಿದ್ದು, 2024ರ ಆವೃತ್ತಿಯಲ್ಲಿ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 7ರಿಂದ 8ಕ್ಕೆ ಏರಿಸಲಾಯಿತು.
ಎ: ಭಾರತ, ಪಾಕಿಸ್ತಾನ, ಹಾಂಕಾಂಗ್, ಥಾಯ್ಲೆಂಡ್
ಬಿ: ಬಾಂಗ್ಲಾದೇಶ, ಶ್ರೀಲಂಕಾ, ಯುಎಇ, ಇಂಡೋನೇಷ್ಯಾ
ಎಲ್ಲ ಪಂದ್ಯಗಳ ಆರಂಭ:ರಾತ್ರಿ 8.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್
7: 2004ರಲ್ಲಿ ಆರಂಭವಾದ ಮಹಿಳೆಯರ ಏಷ್ಯಾಕಪ್‌ನಲ್ಲಿ ಭಾರತ ಇದುವರೆಗೆ 7 ಬಾರಿ ಪ್ರಶಸ್ತಿ ಜಯಿಸಿದೆ. ಈ ಪೈಕಿ 4 ಬಾರಿ ಏಕದಿನ ಮತ್ತು 3 ಬಾರಿ ಟಿ20 ಕ್ರಿಕೆಟ್ ಪ್ರಕಾರದಲ್ಲಿ ಆಗಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸೆಪ್ಟೆಂಬರ್ 5ಕ್ಕೆ ಪರಸ್ಪರ ಎದುರಾಗಲಿವೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 17 ಬಾರಿ ಮುಖಾಮುಖಿಯಾಗಿದ್ದು, ಭಾರತ 14-3 ಗೆಲುವು- ಸೋಲಿನ ದಾಖಲೆ ಹೊಂದಿದೆ. ಹರ್ಮಾನ್‌ಪ್ರೀತ್ ಪಡೆ ‘ನೋ ಹ್ಯಾಂಡ್‌ಶೇಕ್’ ಪಾಲಿಸಿ ಮುಂದುವರಿಸುವ ಸಾಧ್ಯತೆಗಳಿದ್ದು, ಟಿ20 ವಿಶ್ವಕಪ್‌ನಲ್ಲೂ ಉಭಯ ತಂಡಗಳ ಆಟಗಾರ್ತಿಯರು ಹಸ್ತಲಾಘವ ಮಾಡಿರಲಿಲ್ಲ. ಭಾರತ ತಂಡ ಗುಂಪಿನ ತನ್ನ ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡ್ ಸವಾಲು ಎದುರಿಸಲಿದೆ.