ಮಹೇಂದ್ರ ಸಿಂಗ್ ಧೋನಿ  
ಕ್ರಿಕೆಟ್

ಐಪಿಎಲ್​ ಮುಗಿಯುವ ಹಂತಕ್ಕೆ ಬಂದಾಯ್ತು! ಧೋನಿ ಎಂಟ್ರಿ ಪ್ರಶ್ನಿಸಿದ ಫ್ಯಾನ್ಸ್​ಗೆ ಕಡೆಗೂ ಸಿಕ್ಕಿತು ಉತ್ತರ ​ ​

ಪ್ರಮುಖ ಮುಖ್ಯಾಂಶಗಳು

  • ಆಡಿರುವ 9 ಪಂದ್ಯದಲ್ಲಿ 4ರಲ್ಲಿ ಮಾತ್ರ ಗೆಲುವು
  • ಅಭ್ಯಾಸದ ವೇಳೆ ಕಾಣಿಸಿಕೊಳ್ಳುವ ಧೋನಿ, ಪಂದ್ಯದಲ್ಲಿ ಕಣ್ಮರೆ
  • ಮಹೇಂದ್ರ ಸಿಂಗ್​ ಧೋನಿ ನೋಡಲು ಕಾಯುತ್ತಿರುವ ಫ್ಯಾನ್ಸ್​ಗೆ ಪದೇ ಪದೇ ನಿರಾಶೆ
MS Dhoni: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಐದು ಬಾರಿ ಚಾಂಪಿಯನ್ಸ್ ತಂಡ ಎಂದೇ ಪಟ್ಟ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್​, ಅದ್ಯಾಕೋ ಸತತ ಕಳಪೆ ಪ್ರದರ್ಶನದಿಂದ ಅಭಿಮಾನಿಗಳನ್ನು ಬೇಸರಕ್ಕೆ ದೂಡಿದೆ. ಇಲ್ಲಿಯವರೆಗೆ ಆಡಿರುವ 9 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆಲುವು ಕಂಡರೆ ಉಳಿದ 5ರಲ್ಲಿ ಹೀನಾಯ ಸೋಲು ಕಂಡಿದೆ. ಇಷ್ಟಾದರೂ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಮಾತ್ರ ತಂಡದ ಪರ ಇನ್ನೂ ಕಣಕ್ಕಿಳಿಯದೆ ಇರುವುದು ಸದ್ಯ ಫ್ಯಾನ್ಸ್​ಗಳ ಪಿತ್ತವನ್ನು ನೆತ್ತಿಗೇರಿಸಿದೆ.
ಇದೊಂದು ರೀತಿ ಸಿಎಸ್​ಕೆ ಮತ್ತು ಕ್ಯಾಪ್ಟನ್​ ಕೂಲ್ ಅಭಿಮಾನಿಗಳಲ್ಲಿ ಉಳಿದ ಪಂದ್ಯಗಳನ್ನು ನೋಡಬೇಕೋ, ಬೇಡವೋ ಎಂಬ ಗೊಂದಲವನ್ನು ಸೃಷ್ಟಿಸಿದೆ. ಐಪಿಎಲ್​ ಅನ್ನು ದಿಗ್ಗಜ ಕ್ರಿಕೆಟಿಗ, ಟೀಮ್ ಇಂಡಿಯಾದ ದಂತಕಥೆ ಎಂ.ಎಸ್​. ಧೋನಿ ಅವರನ್ನು ಇಲ್ಲಿಯಾದರೂ ವರ್ಷಕ್ಕೊಮ್ಮೆ ನೋಡುವ ಕಾತರದಲ್ಲಿ ಕಾಯುವ ಅಪ್ಪಟ ಫ್ಯಾನ್ಸ್​ಗೆ ಸದ್ಯ ಈ ವಿಷಯ ಭಾರೀ ಬೇಸರ ತಂದಿದೆ. ಆರಂಭದಲ್ಲಿ ಧೋನಿ ಅವರು ಹಿಂಜುರಿ ಸಮಸ್ಯೆಯಿಂದ ಹೊರಗಿದ್ದಾರೆ ಎಂದಿದ್ದ ಮ್ಯಾನೇಜ್​ಮೆಂಟ್​, ಮಾಹಿ ಎಂಟ್ರಿ ಬಗ್ಗೆ ಯಾವುದೇ ಅಪ್ಡೇಟ್​ ಕೊಡದೆ ಸುಮ್ಮನೆ ಕುಳಿತದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಧೋನಿ ಎಂಟ್ರಿ ಕುರಿತು ತುಟಿ ಬಿಚ್ಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಸಲಹೆಗಾರ ಎರಿಕ್ ಸೈಮನ್ಸ್, ಪ್ರಸ್ತುತ ಮಾಹಿ ಅವರು ನಮ್ಮೊಂದಿಗೆ ತಂಡದಲ್ಲಿಲ್ಲ. ಕಾಲಿನ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ರೆಡಿ ಎಂದರೆ ಖಂಡಿತ ರೆಡಿ. ಆದರೆ, ಇದನ್ನು ಖುದ್ದಾಗಿ ಧೋನಿ ಅವರೇ ಹೇಳುತ್ತಾರೆ. ಅಲ್ಲಿಯವರೆಗೆ ಹೀಗೆಯೇ. ಸದ್ಯಕ್ಕೆ ಅವರು ತಂಡದೊಂದಿಗೆ ಪ್ರಯಾಣಿಸಿಲ್ಲ ಎಂದು ಹೇಳಿದ್ದಾರೆ. ಇದನ್ನು ಗಮನಿಸಿ ನೋಡುವುದಾದರೆ, ಮುಂದಿನ ಪಂದ್ಯಗಳಲ್ಲಿ ಕ್ಯಾಪ್ಟನ್ ಕೂಲ್ ಆಡುವುದು ಬಹುತೇಕ ಡೌಟ್​ ಎಂದೇ ಹೇಳಬಹುದು.

ಹೀಗಿದೆ ಸಿಎಸ್​ಕೆ ಪ್ಲೇಆಫ್​​ ಲೆಕ್ಕಾಚಾರ

ಪ್ರಸ್ತುತ, ಐಪಿಎಲ್​ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ 4 ಪಂದ್ಯಗಳಲ್ಲಿ ಗೆಲುವು ಬೇಕಿದೆ. ಅದರಲ್ಲೂ ಹೆಚ್ಚುವರಿ ರನ್​ರೇಟ್​ನಿಂದ ಗೆದ್ದರೆ, ಸುಲಭವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡುವ ಸಾಧ್ಯತೆಗಳು ಹೆಚ್ಚಿವೆ. ಆರಂಭದಿಂದಲೂ ಕಳಪೆ ಪ್ರದರ್ಶನ ನೀಡುತ್ತಲೇ ಕ್ಯಾಪ್ಟನ್​ ಇನ್ನಿಂಗ್ಸ್​ ಮರೆತಿದ್ದ ರುತುರಾಜ್​ ಗಾಯಕ್ವಾಡ್​, ಕಳೆದೆರೆಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್​ ಮಾಡುವ ಮೂಲಕ ಫಾರ್ಮ್​ಗೆ ಮರಳಿದ್ದಾರೆ,(ಏಜೆನ್ಸೀಸ್).