ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಸುರೇಶ್ ರೈನಾ ಅವರ ಚಿತ್ರ. 
ಕ್ರಿಕೆಟ್

'ಮಹಿ' ಗೆ ಕಾಡಿದ ಆ ನೋವೇನು? ಧೋನಿ ನಿವೃತ್ತಿ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ರೈನಾ! Dhoni Retirement

ಕ್ರಿಕೆಟ್​: ಭಾರತದಲ್ಲಿ ಐಪಿಎಲ್​ ಎಂದರೆ ಅದೊಂದು ಕೇವಲ ಕ್ರಿಕೆಟ್​ ಟೂರ್ನಿ ಮಾತ್ರವಲ್ಲ ಬದಲಾಗಿ ಅದನ್ನೊಂದು ಕ್ರಿಕೆಟ್​ ಹಬ್ಬವೆಂಬಂತೆ ಈಡೀ ದೇಶ ಸಂಭ್ರಮಿಸುತ್ತದೆ. ಹಾಗೆಯೇ ಕ್ರಿಕೆಟ್​ ಆಟಗಾರರನ್ನು ದೇವರ ಸ್ಥಾನದಲ್ಲಿಟ್ಟು ನೋಡುವವರ ಸಂಖ್ಯೆ ಕೂಡ ಅಧಿಕವಾಗಿಯೇ ಇದೆ.

ಈ ಎಲ್ಲದರ ನಡುವೆ ಈಗ, ಐಪಿಎಲ್​ನ ಹಾಟ್​ ಫೆವರೇಟ್​ ಟೀಮ್​ಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಘೋಷಿಸಿರುವ ಸುದ್ದಿ, ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದರೂ, ನಿವೃತ್ತಿ ಬಳಿಕ ಸಿಎಸ್​ಕೆ ತಂಡಕ್ಕೆ ಮೆಂಟರ್​ ಆಗಿ ಕೆಲಸ ಮಾಡುತ್ತಾರೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ, ಕಳೆದ 19 ವರ್ಷಗಳಿಂದ ಧೋನಿಯನ್ನು ಮೈದಾನದಲ್ಲಿ ಬ್ಯಾಟ್​ ಹಿಡಿದು ಮತ್ತು ವಿಕೇಟ್​ ಕೀಪಿಂಗ್​ ಗ್ಲೌಸ್​ನೊಂದಿಗೆ ನೋಡುತ್ತಿದ್ದವರಿಗೆ, ಧೋನಿ ಇನ್ನು ಕೆಲ ಕಾಲ ಆಡಬೇಕಿತ್ತೆಂಬ ಭಾವನೆ ಖಂಡಿತವಾಗಿಯೂ ಇದೆ.

ಆದರೆ, ಧೋನಿ ಈಗ ದಿಢೀರನೆ ನಿವೃತ್ತಿ ಘೋಷಿಸಿದ್ದು ಏಕೆ? ಏನಾದರೂ ಆರೋಗ್ಯ ಸಮಸ್ಯೆ ಇತ್ತೆ? ಅಥವಾ ಮ್ಯಾನೇಜ್​ಮೆಂಟ್​ನಿಂದ ಒತ್ತಡವಿತ್ತೇ? ಇಲ್ಲವೇ ಮನೆಯಲ್ಲೇನಾದರೂ ಸಮಸ್ಯೆ ಇದೆಯೇ? ಎಂಬೆಲ್ಲಾ ಪ್ರಶ್ನೆಗಳು ಧೋನಿ ಅಭಿಮಾನಿಗಳಲ್ಲಿ ಕಾಡುತ್ತಿದ್ದು, ಇದಕ್ಕೆ ಅವರ ಆಪ್ತ ಸ್ನೇಹಿತ ಮಾಜಿ ಟೀಮ್​ ಇಂಡಿಯಾ ಆಟಗಾರ ಸುರೇಶ್​ ರೈನಾ ಸ್ಪಷ್ಟನೆ ನೀಡಿದ್ದಾರೆ.

ಧೋನಿಗೆ ಮಂಡಿ ನೋವಿದೆ!

ಸಿಎಸ್​ಕೆ ತಂಡಕ್ಕೆ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಘೋಷಿಸಿದ ಬಳಿಕ ಅವರ ಆಪ್ತ ಸ್ನೇಹಿತ ಸುರೇಶ್​ ರೈನಾ, ಧೋನಿ ಏಕೆ ಈಗಲೇ ನಿವೃತ್ತಿ ಘೋಷಿಸಿದರು ಎಂದು ತಿಳಿಸಿದ್ದಾರೆ. ಮಹಿ ಕಳೆದ ಹಲವು ವರ್ಷಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅವನ ಎರಡು ಮಂಡಿಗಳು ಪದೇ-ಪದೇ ಊತಕ್ಕೆ ಒಳಗಾಗುತ್ತಿವೆ. ಇದರಿಂದ ಅವನಿಗೆ ಸರಿಯಾಗಿ ಬ್ಯಾಟಿಂಗ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಧೋನಿ ಐಪಿಎಲ್​ನ ಹೊರತಾಗಿ, ಇತರ ಲೋಕಲ್​ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಅಲ್ಲೂ ಸಹ ಅವನಿಗೆ ವಿಪರೀತ ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಅವನು ಜಿಮ್​ನಲ್ಲಿ, ಆಸ್ಪತ್ರೆಯಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾನೆ. ಆದರೆ, ಅದನ್ನು ಎದುರಿಸಲು ಅವನಲ್ಲಿ ಸಾಧ್ಯವಾಗುತ್ತಿಲ್ಲ ಎಂದು ರೈನಾ ಗುಟ್ಟನ್ನು ರಟ್ಟು ಮಾಡಿದ್ದಾರೆ. ಧೋನಿ ಸುಧೀರ್ಘವಾಗಿ ವಿಕೆಟ್​ ಕೀಪಿಂಗ್​ ಮಾಡಿದ್ದೇ ಈ ಮಂಡಿ ನೋವಿಗೆ ಕಾರಣ ಎನ್ನವುದು ರೈನಾ ಅವರ ಸ್ಪಷ್ಟನೆಯಾಗಿದೆ. ಈ ಮಂಡಿ ನೋವಿನ ಕಾರಣಕ್ಕಾಗಿಯೇ ಧೋನಿ ಮೈದಾನದಿಂದ ಹೊರ ನಡೆಯಲು ನಿರ್ಧಾರ ಮಾಡಿದ್ದಾರೆಂದು ಅವರು ತಿಳಿಸಿದ್ದಾರೆ.

ಧೋನಿ ಐಪಿಎಲ್​​ನ ದೊಡ್ಡ ಬ್ರ್ಯಾಂಡ್​!

2008 ರಲ್ಲಿ ಐಪಿಎಲ್​ ಪ್ರಾರಂಭವಾದಗನಿಂದ ಇಲ್ಲಿಯವರೆಗೆ ಧೋನಿಯ ಖ್ಯಾತಿಗೆ ಒಂದಿಷ್ಟು ಪೆಟ್ಟು ಬಿದ್ದಿಲ್ಲ. ಒಂದು ಸಮಯದಲ್ಲಿ ಧೋನಿಯ ಆಟವನ್ನು ನೋಡುವುದಕ್ಕಾಗಿಗೆ ಜನ ಐಪಿಎಲ್​​ ಅನ್ನು ನೋಡುತ್ತಿದ್ದರು. ಧೋನಿ ಸಿಎಸ್​ಕೆ ತಂಡ ಹಾಗೂ ಐಪಿಎಲ್​​ನ ಬೆಳವಣಿಗೆಗೆ ಬಹಳ ಪ್ರಮುಖ ಪಾತ್ರವಹಿಸಿದ್ದು ಮಹಿ ಐಪಿಎಲ್​ ಕಂಡ ದೊಡ್ಡ ಬ್ರ್ಯಾಂಡ್​ ಆಗಿದ್ದಾನೆಂದು ಸುರೇಶ್​ ರೈನಾ ಹೊಗಳಿದ್ದಾರೆ, (ಏಜೆನ್ಸೀಸ್​).