- ಕ್ರಿಕೆಟ್, ಬ್ಯಾಂಕ್ ಉದ್ಯೋಗ ಆಯ್ತು ಈಗ ಟೀ ಅಂಗಡಿ?
- ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗೆ ಇದೆಂಥಾ ಪರಿಸ್ಥಿತಿ ಎಂದ ನೆಟ್ಟಿಗರು
Ishan Kishan: ಟೀಮ್ ಇಂಡಿಯಾದ ಸ್ಟಾರ್ ಓಪನಿಂಗ್ ಬ್ಯಾಟ್ಸ್ಮನ್ ಇಶಾನ್ ಕಿಶಾನ್ ಸದಾ ಒಂದಲ್ಲ, ಒಂದು ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ, ಇತ್ತೀಚೆಗಂತು ಫ್ಯಾನ್ಸ್ಗಳ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದಕ್ಕೆ ಮತ್ತೊಂದು ವೈರಲ್ ವಿಡಿಯೋವೇ ಸಾಕಾಗಿದೆ.
ಭಾರತದಲ್ಲಿ ಕ್ರಿಕೆಟ್ ಮೇಲಿರುವ ಕ್ರೇಜ್ ಅಷ್ಟಿಷ್ಟಲ್ಲ. ಐಪಿಎಲ್, ಟಿ20 ಲೀಗ್ಗಳಂತಹ ಮೆಗಾ ಟೂರ್ನಮೆಂಟ್ ನಡೆಯುತ್ತಿರುವಾಗಲೂ, ಕ್ರಿಕೆಟಿಗರ ಪ್ರದರ್ಶನ, ಅಬ್ಬರದ ಬ್ಯಾಟಿಂಗ್, ಅವರಿಗೆ ಸಂಬಂಧಿಸಿದ ವೈಯಕ್ತಿಕ ವಿಷಯಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮೀಮ್ಸ್, ಟ್ರೋಲ್ ನೆಟ್ಟಿಗರನ್ನು ಭಾರಿ ಚರ್ಚೆಗೆ ದೂಡುತ್ತದೆ. ಮೊನ್ನೆ ಮೊನ್ನೆಯಷ್ಟೇ ಆರ್ಬಿಐ ಬ್ಯಾಂಕಿನಲ್ಲಿ ಇಶಾನ್ ಕಿಶನ್ ಉದ್ಯೋಗ ಮಾಡುತ್ತಿರುವ ಸುದ್ದಿಗಳು ಹೊರಬಿದ್ದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಆಡುವುದರ ಜತೆಗೆ ಬ್ಯಾಂಕ್ ನೌಕರಿಯನ್ನು ನಿಭಾಯಿಸುತ್ತಿರುವುದು ಹಲವರಿಗೆ ಖುಷಿ ತಂದಿತು. ಆದರೆ, ಅದರ ಬೆನ್ನಲ್ಲೇ ಟೀ ಅಂಗಡಿಯಲ್ಲಿ ಇಶಾನ್ರನ್ನು ನೋಡಿ ಫ್ಯಾನ್ಸ್ ಕಕ್ಕಾಬಿಕ್ಕಿಯಾಗಿದ್ದಾರೆ. ಕ್ರಿಕೆಟ್, ಬ್ಯಾಂಕಿನ ಉದ್ಯೋಗದಿಂದ ಬರುವ ಹಣವೂ ಸಾಲದ ಪರಿಸ್ಥಿತಿ ಕಿಶನ್ಗೆ ಏಕೆ? ಎಂದು ಪ್ರಶ್ನಿಸಿದ್ದಾರೆ.
ಅಸಲಿಗೆ, ಸೋಷಿಯಲ್ ಮೀಡಿಯಾದ ಜಗತ್ತು ಇಂದು ಹೇಗಾಗಿದೆ ಎಂದರೆ, ಯಾರು? ಯಾವಾಗ, ಯಾಕಾಗಿ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚುತ್ತಾರೆ? ಎಂಬುದಕ್ಕೆ ಸ್ಪಷ್ಟ ಉತ್ತರವೇ ಸಿಗೋದಿಲ್ಲ. ನೋಡಲು ಥೇಟ್ ಒಬ್ಬ ಗಣ್ಯ ಅಥವಾ ಸ್ಟಾರ್ ವ್ಯಕ್ತಿಯಂತೆ ಕಾಣಿಸಿದರೆ ಸಾಕು, ಅವರನ್ನು ಒಬ್ಬ ಸೆಲೆಬ್ರಿಟಿ ರೇಂಜಿಗೆ ತಂದು ನಿಲ್ಲಿಸುತ್ತಾರೆ ನಮ್ಮ ನೆಟ್ಟಿಗರು. ಅಂತೆಯೇ, ಇಲ್ಲೊಬ್ಬ ಚಾಯ್ ವಾಲಾನ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಈತ ನೋಡಲು ಥೇಟ್ ಸ್ಟಾರ್ ಕ್ರಿಕೆಟಿಗ ಇಶಾನ್ರನ್ನೇ ಹೋಲುತ್ತಾನೆ. ಇದನ್ನು ಕಂಡು ಒಂದು ನಿಮಿಷ ಕ್ರಿಕೆಟ್ ಪ್ರೇಮಿಗಳೇ ಅಚ್ಚರಿಗೊಳಗಾಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವಕನೊಬ್ಬ ಸ್ಥಳೀಯ ಟೀ ಸ್ಟಾಲ್‌ನಲ್ಲಿ ಚಹಾ ತಯಾರಿಸುವಲ್ಲಿ ನಿರತನಾಗಿದ್ದಾನೆ. ಅವನ ಮುಖಭಾವ, ಹೇರ್ಸ್ಟೈಲ್ ಮತ್ತು ನಗು ಎಲ್ಲವೂ ಇಶಾನ್ರನ್ನೇ ನೆನಪಿಸುತ್ತದೆ. ಈ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದ ಕೆಲವೇ ಕ್ಷಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಆಶ್ಚರ್ಯಚಕಿತರಾದರು. ಇನ್ನು, ಅತ್ತ ಕೆಲ ಸಿಎಸ್ಕೆ ಅಭಿಮಾನಿಗಳು ಅಂದು ಐಪಿಎಲ್ನಲ್ಲಿ ಚೆನ್ನೈ ವಿರುದ್ಧ ಗೆದ್ದಿದ್ದಕ್ಕೆ, ವಿಜಿಲ್ ಬಿಟ್ಟು ಮನೆಗೆ ಹೋಗಿ ಎಂದಿದ್ದಕ್ಕೆ, ಇಲ್ಲಿ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡಿದ್ದಾರೆ. ಇದ್ಯಾಕೆ ಇಶಾನ್ ನೀವಿಲ್ಲಿ? ಮೊನ್ನೆಯಷ್ಟೇ ಆರ್ಬಿಐ ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದವರು ಈಗ ದಿಢೀರ್ ಟೀ ಅಂಗಡಿಗೆ ಏಕೆ? ಎಂದೆಲ್ಲ ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ.
ಒಂದೆಡೆ, ಅಸಲಿ ಇಶಾನ್ ಕಿಶನ್ ಐಪಿಎಲ್, ಅಂತಾರಾಷ್ಟ್ರೀಯ ತಂಡದಲ್ಲಿ ತಮ್ಮ ಬ್ಯಾಟ್‌ನಿಂದ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದರೆ, ಡಪ್ಪಲ್‌ಗ್ಯಾಂಗರ್ ರಸ್ತೆಬದಿಯಲ್ಲಿ ಬಿಸಿ ಬಿಸಿ ಟೀ ಮಾರುವ ಮೂಲಕವೇ ಈತ ಲಕ್ಷಾಂತರ ನೆಟಿಗರ ಗಮನವನ್ನು ಸೆಳೆಯುತ್ತಿರುವುದು ಒಂದು ರೀತಿ ಗಮನಾರ್ಹವೇ,(ಏಜೆನ್ಸೀಸ್).