- ನ್ಯೂಜಿಲೆಂಡ್ ವಿರುದ್ಧ ನಡೆದ ಹೈವೋಲ್ಟೇಜ್ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು
- ಮೈದಾನದಲ್ಲಿ ವಿಜಯೋತ್ಸವ ಮುಗಿಲು ಮುಟ್ಟಿದ್ದಾಗ, ಕ್ಯಾಮೆರಾ ಕಣ್ಣುಗಳು ಸೆರೆಹಿಡಿದ ಒಂದು ಸುಂದರ ದೃಶ್ಯ
- ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ತ್ರಿವರ್ಣ ಧ್ವಜವನ್ನು ಹೆಗಲ ಮೇಲೆ ಹೊತ್ತು ಸಂಭ್ರಮ
- ಗೆಳತಿ ಅದಿತ ಹುಂಡಿಯಾ ಕ್ರೀಡಾಂಗಣದಿಂದ ನೇರವಾಗಿ ಮೈದಾನಕ್ಕೆ ಧಾವಿಸಿ ಸಂಭ್ರಮದಲ್ಲಿ ಪಾಲ್ಗೊಂಡರು
Ishan Kishan: ನ್ಯೂಜಿಲೆಂಡ್ ವಿರುದ್ಧ ನಡೆದ ಹೈವೋಲ್ಟೇಜ್ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಮೈದಾನದಲ್ಲಿ ವಿಜಯೋತ್ಸವ ಮುಗಿಲು ಮುಟ್ಟಿದ್ದಾಗ, ಕ್ಯಾಮೆರಾ ಕಣ್ಣುಗಳು ಸೆರೆಹಿಡಿದ ಒಂದು ಸುಂದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ತ್ರಿವರ್ಣ ಧ್ವಜವನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸುತ್ತಿದ್ದಾಗ, ಅವರ ಗೆಳತಿ ಅದಿತ ಹುಂಡಿಯಾ ಕ್ರೀಡಾಂಗಣದಿಂದ ನೇರವಾಗಿ ಮೈದಾನಕ್ಕೆ ಧಾವಿಸಿ ಸಂಭ್ರಮದಲ್ಲಿ ಪಾಲ್ಗೊಂಡರು. ಈ ಜೋಡಿಯ ಅಪರೂಪ ಕ್ಷಣಗಳನ್ನು ಕಂಡ ಅಭಿಮಾನಿಗಳು ಇಶನ್ ಕಿಶನ್ ಅವರ ಗೆಳತಿ ಯಾರು ಎಂಬುದನ್ನು ಹುಡುಕಾಡಲು ಶುರು ಮಾಡಿದ್ದಾರೆ.
ಇಶಾನ್ ಕಿಶನ್ ಗೆಳತಿ ಅದಿತಿ ಹುಂಡಿಯಾ ಯಾರು?
ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ಟಿ20 ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಅವರನ್ನು ಹುರಿದುಂಬಿಸಲು ಗೆಳತಿ ಹುಂಡಿಯಾ ಕೆಂಪು ಬಣ್ಣದ ಬಟ್ಟೆ ಧರಿಸಿ ಸ್ಟೇಡಿಯಂಗೆ ಆಗಮಿಸಿದ್ದರು. ಪಂದ್ಯದ ಸಮಯದಲ್ಲಿ ಕಿಶನ್‌ಗೆ ಹುರಿದುಂಬಿಸುತ್ತಿದ್ದರು.
ಅದಿತಿ ಹುಂಡಿಯಾ ಒಬ್ಬ ಮಾಡೆಲ್ ಮತ್ತು ಪ್ರಭಾವಶಾಲಿ ವ್ಯಕ್ತಿ. ಅವರು ಫೆಮಿನಾ ಮಿಸ್ ಇಂಡಿಯಾ 2017 ರ ಫೈನಲಿಸ್ಟ್ ಮತ್ತು ಮಿಸ್ ದಿವಾ 2018 ವಿಜೇತರಾಗಿ ಗಮನ ಸೆಳೆದಿದ್ದಾರೆ. ಅವರು ಒಬ್ಬ ಉದ್ಯಮಿಯೂ ಆಗಿದ್ದು, ತನ್ನದೇ ಆದ ಫ್ಯಾಷನ್ ಲೇಬಲ್ನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ.
ಜೈಪುರದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಬಿಬಿಎ ಪದವಿ ಪೂರ್ಣಗೊಳಿಸಿದ ಅವರು ಮಾಡೆಲಿಂಗ್ ಮತ್ತು ಫ್ಯಾಷನ್ನಲ್ಲಿ ಆಸಕ್ತಿಯನ್ನು ತೋರಿಸಲು ನಿರ್ಧರಿಸಿದರು. ಇದು ಅವರನ್ನು ಸ್ಪರ್ಧೆಗಳಿಗೆ ಕೊಂಡೊಯ್ಯಲು ನಿರ್ಧರಿಸಿತು.
ಇಶಾನ್ ಕಿಶನ್ ಮತ್ತು ಅದಿತಿ ಹುಂಡಿಯಾ ಹೇಗೆ ಭೇಟಿಯಾದರು?
ಅದಿತಿ ಹುಂಡಿಯಾ ಪಂದ್ಯಗಳ ಸಮಯದಲ್ಲಿ ಇಶಾನ್ ಕಿಶನ್‌ಗೆ ಹುರಿದುಂಬಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತದೆ. ಆದಾಗ್ಯೂ, ಭಾರತ ಮತ್ತು ನ್ಯೂಜಿಲ್ಯಾಂಡ್ ಫೈನಲ್ ಪಂದ್ಯಾವಳಿಗೂ ಆಗಮಿಸಿದ್ದರು. ಈ ಜೋಡಿ 2019 ರ ಐಪಿಎಲ್ ನಡೆಯುವ ಸಮಯದಲ್ಲಿ ಪ್ರೀತಿಗೆ ಬಿದ್ದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ (ಏಜೆನ್ಸೀಸ್).