ವೈರಲ್​ ವಿಡಿಯೋ ದೃಶ್ಯ 
ಕ್ರಿಕೆಟ್

ಜಸ್ಟ್​ ಮಿಸ್! ಜಡ್ಡುಗೆ ಏಕಿಷ್ಟು ಕೋಪ? ಕುಲ್​ದೀಪ್​ ಮೇಲೆ ಬ್ಯಾಟ್​ ಬೀಸುವಂತದ್ದು ಏನಾಯ್ತು? | RR vs DC

ಪ್ರಮುಖ ಮುಖ್ಯಾಂಶಗಳು

  • ಕುಲ್​ದೀಪ್​ ಯಾದವ್​ ಮುಖಕ್ಕೆ ಬೀಳುತ್ತಿದ್ದ ಬ್ಯಾಟ್​ ಜಸ್ಟ್​ ಮಿಸ್​
  • ಮೈದಾನದಲ್ಲಿ ಕುಲ್​ದೀಪ್​ ಮೇಲೆ ಜಡೇಜಾ ಬ್ಯಾಟ್​ ಬೀಸಿದ್ದೇಕೆ?
  • ವೈರಲ್​ ವಿಡಿಯೋ ಕಂಡು ಕೆರಳಿದ ಕ್ರಿಕೆಟ್​ ಅಭಿಮಾನಿಗಳು
RR vs DC: ನಿನ್ನೆ (ಮೇ.02) ನಡೆದ 19ನೇ ಆವೃತ್ತಿಯ ಐಪಿಎಲ್​ನ 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಿತು. ಬೃಹತ್​ ಸ್ಕೋರ್​ ನೀಡಿದ್ದೇ ಆದರೂ ಈ ಮ್ಯಾಚ್​ನಲ್ಲಿ ಆರ್​ಆರ್​ ಪಡೆ ಸೋಲುಂಡಿತು. ಮತ್ತೊಂದೆಡೆ, ಪಂದ್ಯದ ನಡುವೆ ನಡೆದ ಕೆಲವು ಘಟನೆಗಳು ಲೈವ್​ನಲ್ಲಿದ್ದ ಅಭಿಮಾನಿಗಳನ್ನು ಒಂದು ನಿಮಿಷ ಅಚ್ಚರಿಗೆ ದೂಡಿತು. 
ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ ರಾಯಲ್ಸ್, 20 ಓವರ್​ನಲ್ಲಿ 225 ರನ್​ಗಳ ಬೃಹತ್​ ಸ್ಕೋರ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ವೇಳೆ, ಎರಡು ಘಟನೆಗಳು ಪಂದ್ಯ ನೋಡುತ್ತಿದ್ದ ಕ್ರಿಕೆಟ್​ ಪ್ರಿಯರಿಗೆ ಹುಬ್ಬೇರಿಸಿತು. ಮೊದಲನೇಯದು, ವೈಭವ್ ಸೂರ್ಯವಂಶಿಯನ್ನು ಎರಡನೇ ಎಸೆತದಲ್ಲಿ ಔಟ್​ ಮಾಡಿದ ಡೆಲ್ಲಿ ವೇಗಿ ಕೈಲ್​ ಜೇಮಿಸನ್​, 15 ವರ್ಷ ಬ್ಯಾಟರ್​ ವಿಕೆಟ್​ ಕಿತ್ತ ಖುಷಿಗೆ ಹುಚ್ಚು ಸಂಭ್ರಮ ಮೆರೆದರು. ಇದು ಹಲವರನ್ನು ಕೆರಳಿಸಿತು. ಮತ್ತೊಂದೆಡೆ, ರವೀಂದ್ರ ಜಡೇಜಾ ಮತ್ತು ಕುಲದೀಪ್​ ಯಾದವ್ ನಡುವಿನ​ ಜಟಾಪಟಿ ಆಶ್ಚರ್ಯಕ್ಕೆ ಕಾರಣವಾಯಿತು.     
ಸದಾ ಎಲ್ಲ ಆಟಗಾರರೊಂದಿಗೆ ತುಂಬಾ ತಮಾಷೆಯಾಗಿರುವ ಜಡೇಜಾ, ಅದ್ಯಾಕೋ ಕುಲದೀಪ್​ ವಿರುದ್ಧ ಸಿಡಿದೆದ್ದ ರೀತಿ ನೆಟ್ಟಿಗರಿಗೆ ಇಷ್ಟವಾಗಲಿಲ್ಲ. ರವೀಂದ್ರ ಜಡೇಜಾ ಕ್ರೀಸ್‌ಗೆ ಬಂದಾಗ, ಅವರು ಡೆಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಮೇಲೆ ಎಂದಿನಂತೆ ಹಾಸ್ಯ ಚಟಾಕಿ ಸಿಡಿಸಲು ಬ್ಯಾಟ್​ ಬೀಸಿದರು. ಈ ವೇಳೆ ಕುಲದೀಪ್​ ಮುಖಕ್ಕೆ ಬೀಳುತ್ತಿದ್ದ ಬ್ಯಾಟ್​ ಜಸ್ಟ್​ ಮೀಸ್​ ಆಯಿತು. ಒಂದು ಸೆಕೆಂಡ್ ಇವರಿಬ್ಬರ ನಡುವೆ ಏನೋ ಮನಸ್ತಾಪವಿದೆ ಎಂಬಂತೆ ಕಾಣಿಸಿದ್ದೇ ಆದರೂ ಅದೊಂದು ತಮಾಷೆಯ ನಡೆ ಎಂಬುದು ಕೆಲವರಿಗೆ ಮಾತ್ರ ಸ್ಪಷ್ಟವಾಯಿತು.
ಮೇಲ್ನೋಟಕ್ಕೆ ಜಡೇಜಾ ಬೀಸಿದ ಬ್ಯಾಟ್​ ಸ್ವಲ್ಪ ತಡವಾಗಿದ್ದರೂ, ಅದು ಕುಲದೀಪ್‌ ಮುಖಕ್ಕೆ ಬಲವಾಗಿ ಹೊಡೆಯುತ್ತಿತ್ತೇನೋ ಎನ್ನುವಂತೆ ದೃಶ್ಯದಲ್ಲಿ ಕಾಣಿಸಿದೆ. ಈ ಸಂದರ್ಭದಲ್ಲಿ, ಜಡೇಜಾರನ್ನು ಯಾದವ್​ ಹಿಂದಕ್ಕೆ ನೂಕಿದರು. ಈ ವೈರಲ್​ ವಿಡಿಯೋ ಕೆಲವರಿಗೆ ಜಡೇಜಾ ಮತ್ತು ಕುಲ್​ದೀಪ್​​ ಮಧ್ಯೆ ಜಟಾಪಟಿ ನಡೆಯಿತು ಎಂದು ತೋರಿಸಿದರೆ, ಇನ್ನೂ ಕೆಲವರಿಗೆ ಇದೂ ಸಹ ಜಡ್ಡು ಅವರ ತಮಾಷೆಯ ಒಂದು ರೀತಿ ಎಂಬುದನ್ನು ಹೇಳಿತು. ಇದೀಗ ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).