ವೆಸ್ಟ್ ಇಂಡೀಸ್ (West Indies)
ಮುಂಬೈ: ಎಡಗೈ ಬ್ಯಾಟರ್ ಶೆರ್ಫಾನ್ ರುದರ್‌ಫೋರ್ಡ್ (76* ರನ್, 42 ಎಸೆತ, 2 ಬೌಂಡರಿ, 7 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಗುಡಕೇಶ್ ಮೋತಿ (33ಕ್ಕೆ 3) ಬಿಗಿ ದಾಳಿಯ ನೆರವಿನಿಂದ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ (West Indies) ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ (England)ಎದುರು 30 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಶೈ ಹೋಪ್ ಬಳಗ ಸಿ ಗುಂಪಿನ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ 8 ರನ್‌ಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು ಆಘಾತ ಎದುರುಸಿತು. ಆಗ ಶಿಮ್ರೊನ್ ಹೆಟ್ಮೆಯರ್ (23) ಮತ್ತು ರೋಸ್ಟನ್ ಚೇಸ್ (34) ಜೋಡಿ ಚೇತರಿಕೆ ನೀಡಿತು. ನಂತರ ಸ್ಲಾಗ್ ಓವರ್‌ಗಳಲ್ಲಿ ರುದರ್‌ಫೋರ್ಡ್ - ಜೇಸನ್ ಹೋಲ್ಡರ್ (33) ಮೊತ್ತ ಏರಿಸಿದರು. ಅಂತಿಮವಾಗಿ ವಿಂಡೀಸ್ 6 ವಿಕೆಟ್‌ಗೆ 196 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ವಿಂಡೀಸ್ ಸ್ಪಿನ್ನರ್‌ಗಳ ಎದುರು ಪರದಾಡಿದ ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಲ್ಯದಿಂದಾಗಿ ಇಂಗ್ಲೆಂಡ್ ತಂಡ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಸರ್ವಪತನ ಕಂಡಿತು. ಕೊನೆಯಲ್ಲಿ ಸ್ಯಾಮ್ ಕರ‌್ರನ್ (43*) ಪ್ರತಿರೋಧ ಸೋಲಿನ ಅಂತರ ತಗ್ಗಿಸಿತು.
ವೆಸ್ಟ್ ಇಂಡೀಸ್: 6 ವಿಕೆಟ್‌ಗೆ 196 (ಬ್ರೆಂಡನ್ ಕಿಂಗ್ 1, ಶೈ ಹೋಪ್ 0, ಶಿಮ್ರೊನ್ ಹೆಟ್ಮೆಯರ್ 23, ರೋಸ್ಟನ್ ಚೇಸ್ 34, ಶೆರ್ಫಾನ್ ರುದರ್‌ಫೋರ್ಡ್ 76*,ರೋವ್ಮನ್ ಪೊವೆಲ್ 14, ಜೇಸನ್ ಹೋಲ್ಡರ್ 33, ಶೆರ್ಡ್ 1*, ಆದಿಲ್ ರಶೀದ್ 16ಕ್ಕೆ 2, ಓವರ್ಟನ್ 33ಕ್ಕೆ 2).
ಇಂಗ್ಲೆಂಡ್: 19 ಓವರ್‌ಗಳಲ್ಲಿ 166 (ಫಿಲ್ ಸಾಲ್ಟ್ 30, ಬಟ್ಲರ್ 21, ಬೆಥೆಲ್ 33, ಟಾಮ್ ಬಾಂಟನ್ 2, ಹ್ಯಾರಿ ಬ್ರೂಕ್ 17, ಸ್ಯಾಮ್ ಕರ‌್ರನ್ 43*, ವಿಲ್ ಜಾಕ್ಸ್ 2, ಓವರ್ಟನ್ 5, ಗುಡಕೇಶ್ ಮೋತಿ 33ಕ್ಕೆ 3, ರೋಸ್ಟನ್ ಚೇಸ್ 29ಕ್ಕೆ 2).
ಪಂದ್ಯಶ್ರೇಷ್ಠ: ಶೆರ್ಫಾನ್ ರುದರ್‌ಫೋರ್ಡ್
7. ಶೆರ್ಫಾನ್ ರುದರ್‌ಫೋರ್ಡ್ ಟಿ20 ವಿಶ್ವಕಪ್ ಇನಿಂಗ್ಸ್‌ವೊಂದರಲ್ಲಿ 5 ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಯುವರಾಜ್ ಸಿಂಗ್ (2007) ದಾಖಲೆ ಸರಿಗಟ್ಟಿದರು.
33. ಆದಿಲ್ ರಶೀದ್ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಸರ್ವಾಧಿಕ ವಿಕೆಟ್ ಕಬಳಿಸಿದ ಕ್ರಿಸ್ ಜೋರ್ಡನ್ (31) ದಾಖಲೆ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು.