ಹಾಲಿ ಚಾಂಪಿಯನ್ಸ್ ಕಿವೀಸ್‌ಗೆ ಆಘಾತ ನೀಡಿದ ವೆಸ್ಟ್ ಇಂಡೀಸ್
ಸೌತ್‌ಹ್ಯಾಂಪ್ಟನ್: ಶೆಮೈನ್ ಕ್ಯಾಂಪ್‌ಬೆಲ್ (90*ರನ್, 62 ಎಸೆತ, 7 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ಸಾಹಸ ಹಾಗೂ ಆಲಿಯಾ ಅಲ್ಲೆಯ್ನೆ (27ಕ್ಕೆ 4) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿತು.
ಶನಿವಾರ ತಡರಾತ್ರಿ ನಡೆದ ಟೂರ್ನಿಯ 4ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ ಸಂಘಟಿತ ಬ್ಯಾಟಿಂಗ್‌ನಿಂದ 6 ವಿಕೆಟ್‌ಗೆ 162 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಹ್ಯಾಲೆ ಮ್ಯಾಥ್ಯೂಸ್ (48) ಹಾಗೂ ಕ್ಯಾಂಪ್‌ಬೆಲ್ ಜತೆಯಾಟದ ನೆರವಿನಿಂದ ವೆಸ್ಟ್ ಇಂಡೀಸ್ 19.5 ಓವರ್‌ಗಳಲ್ಲಿ 3 ವಿಕೆಟ್‌ಗೆ 163 ರನ್‌ಗಳಿಸಿ, ಹಾಲಿ ಚಾಂಪಿಯನ್ನರಿಗೆ ಸೋಲಿನ ಆಘಾತ ನೀಡಿತು.
ಬಾಂಗ್ಲಾದೇಶಕ್ಕೆ ಜಯ: ಜುಯಿರಿಯಾ ರ್ದೌಸ್ (50) ಅರ್ಧಶತಕದ ಬಲದಿಂದ ಬಾಂಗ್ಲಾದೇಶ ತಂಡ ಭಾನುವಾರದ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ ಎದುರು 6 ವಿಕೆಟ್‌ಗಳಿಂದ ಗೆದ್ದು, ಗುಂಪು-1ರಲ್ಲಿ ಶುಭಾರಂಭ ಕಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ನೆದರ್ಲೆಂಡ್ 8 ವಿಕೆಟ್‌ಗೆ 139 ರನ್ ಗಳಿಸಿತು. ಪ್ರತಿಯಾಗಿ ಬಾಂಗ್ಲಾ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 141 ರನ್ ಗಳಿಸಿ ಜಯ ದಾಖಲಿಸಿತು.