ಒಬ್ಬರಲ್ಲ, ಇಬ್ಬರಲ್ಲ 3 ವಿಂಡೀಸ್​ ಬ್ಯಾಟರ್​ಗಳ ಶತಕಕ್ಕೆ ನಡುಗಿದ ಟೀಮ್ ಇಂಡಿಯಾ! ಗಿಲ್​ ಪಡೆಗೆ 400 ರನ್​ಗಳ ಬೃಹತ್​ ಗುರಿ  
ಕ್ರಿಕೆಟ್

ಒಬ್ಬರಲ್ಲ, ಇಬ್ಬರಲ್ಲ 3 ವಿಂಡೀಸ್​ ಬ್ಯಾಟರ್​ಗಳ ಶತಕಕ್ಕೆ ನಡುಗಿದ ಟೀಮ್ ಇಂಡಿಯಾ! ಗಿಲ್​ ಪಡೆಗೆ 406 ರನ್​ಗಳ ಬೃಹತ್​ ಗುರಿ | IND vs WI ODI

ಕೇವಲ 65 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 101 ರನ್ ಬಾರಿಸಿದರು. ಇನ್ನು, ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿದ ವೆಸ್ಟ್ ಇಂಡೀಸ್‌ನ ಅತಿ ವೇಗದ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

IND vs WI ODI: ಇಂದು ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸ್​ನ ಮೂವರು ದೈತ್ಯ ಬ್ಯಾಟರ್​ಗಳು ಶತಕದಾಟ ತೋರಿ ಹೊಸ ದಾಖಲೆ ಬರೆದಿದ್ದಾರೆ.

ಜಾನ್ ಕ್ಯಾಂಪ್‌ಬೆಲ್ ದಾಖಲೆ

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ವೆಸ್ಟ್ ಇಂಡೀಸ್​ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಕಣಕ್ಕಿಳಿದ ವಿಂಡೀಸ್​ ಪರ ಆರಂಭಿಕರಾದ ಜಾನ್ ಕ್ಯಾಂಪ್‌ಬೆಲ್, ಸ್ಫೋಟಕ ಇನ್ನಿಂಗ್ಸ್ ನೀಡುವ ಮೂಲಕ ಅತ್ಯಂತ ವೇಗದ ಏಕದಿನ ಶತಕ ಸಿಡಿಸಿದರು. ಕೇವಲ 65 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 101 ರನ್ ಬಾರಿಸಿದರು. ಇನ್ನು, ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿದ ವೆಸ್ಟ್ ಇಂಡೀಸ್‌ನ ಅತಿ ವೇಗದ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಮೂವರ ಶತಕದಾಟ

ಇದು ಇಲ್ಲಿಗೆ ಮುಗಿಯಲಿಲ್ಲ. ಜಾನ್​ಗೆ ಸಾಥ್​ ನೀಡಿದ ಶಾಯ್​ ಹೋಪ್​ (104 ರನ್​, 94 ಎಸೆತ) ಮತ್ತು ಅಮಿರ್​ ಜಾಂಗೋ (114 ರನ್​, 77 ಎಸೆತ) ಇಬ್ಬರೂ ಸಹ ಶತಕದಾಟ ತೋರುವ ಮೂಲಕ ತಂಡದ ಒಟ್ಟು ಮೊತ್ತವನ್ನು 300ರ ಗಡಿದಾಟಿಸಿದರು. ವರದಿಗಳ ಪ್ರಕಾರ, ಟೀಮ್ ಇಂಡಿಯಾ ಎದುರು ಈ ಮಟ್ಟಿಗಿನ ಶತಕ ಮತ್ತು 350 ರನ್​ ಗಳಿಸಿದ್ದು ಎಷ್ಟೋ ವರ್ಷಗಳ ನಂತರ ಎನ್ನಲಾಗಿದೆ. 50 ಓವರ್​ ನಷ್ಟಕ್ಕೆ 6 ವಿಕೆಟ್​ ಕಳೆದುಕೊಂಡ ವಿಂಡೀಸ್​ ಪಡೆ 400 ರನ್​ಗಳನ್ನು ಕಲೆಹಾಕಿದೆ. ಅಲ್ಲಿಗೆ, ಶುಭಮನ್​ ಗಿಲ್​ ತಂಡಕ್ಕೆ ಪೈಪೋಟಿಗಿಂತಲೂ ಹೆಚ್ಚಿನ ಒತ್ತಡ ಹೇರುವ ಮೂಲಕ ಗೆದ್ದು ತೋರಿಸಿ ಎಂದು ವೆಸ್ಟ್ ಇಂಡೀಸ್​ ಸವಾಲು ಹಾಕಿದೆ.

ಬೌಲಿಂಗ್​ನಲ್ಲಿ ಬಲ ಕುಸಿತ

ಟೀಮ್ ಇಂಡಿಯಾ ಪರ ಗುರ್ನೂರ್ ಬ್ರಾರ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಪ್ರಸಿದ್ಧ್​ ಕೃಷ್ಣ ಕೇವಲ ಒಂದು ವಿಕೆಟ್​ ಪಡೆದರು. ಇನ್ನು, ಈ ಪಂದ್ಯದಲ್ಲಿ 2 ಹೆಚ್ಚುವರಿ ವಿಕೆಟ್​ ಕೀಳುವ ಮೂಲಕ ಕುಲದೀಪ್ ತಮ್ಮ ವೃತ್ತಿಜೀವನದ 200 ಏಕದಿನ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಒಟ್ಟಾರೆ, ವಿಂಡೀಸ್​ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಎಡವಿದ ಟೀಮ್ ಇಂಡಿಯಾ ಬೌಲರ್​ಗಳು, ತಂಡಕ್ಕೆ ಇಲ್ಲದ ಒತ್ತಡವನ್ನು ತಂದಿಟ್ಟಿರುವುದು ಭಾರತೀಯ ಕ್ರಿಕೆಟ್​ ಪ್ರಿಯರಲ್ಲಿ ತಲೆಬಿಸಿ ತಂದಿಟ್ಟಿದೆ.