ಶೇನ್ ವಾರ್ನ್ ಸಾವಿಗೆ ಕೋವಿಡ್ ವ್ಯಾಕ್ಸಿನ್ ಕಾರಣ: ಪುತ್ರ ಜಾಕ್ಸನ್ ಆರೋಪ
ಸಿಡ್ನಿ: ಆಸ್ಟ್ರೆಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ಗೆ (Shane Warne) ಬಲವಂತವಾಗಿ ಕೋವಿಡ್ ಲಸಿಕೆ (COVID vaccine) ನೀಡಿದ್ದೇ ಅವರ ಅಕಾಲಿಕ ಸಾವಿಗೆ ಕಾರಣ ಎಂದು ಅವರ ಪುತ್ರ ಜಾಕ್ಸನ್ ಆರೋಪಿಸಿದ್ದಾರೆ. ವಾರ್ನ್ ಆರೋಗ್ಯ ಕೆಲ ಸಮಸ್ಯೆಯನ್ನೂ ಹೊಂದಿದ್ದರು. ಹೀಗಾಗಿ ಅವರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಆದರೆ ಬಲವಂತವಾಗಿಯೇ ಅವರಿಗೆ ಲಸಿಕೆಯ 3-4 ಡೋಸ್ಗಳನ್ನು ನೀಡಲಾಗಿತ್ತು ಎಂದು ಜಾಕ್ಸನ್ ಪಾಡ್ಕಾಸ್ಟ್ ಒಂದರಲ್ಲಿ ಹೇಳಿದ್ದಾರೆ.
ವಾರ್ನ್ ಸಾವಿನ 4 ವರ್ಷಗಳ ಈ ಆರೋಪ ಕೇಳಿಬಂದಿದೆ. ವಾರ್ನ್ 2022ರಲ್ಲಿ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಧೂಮಪಾನ ಮತ್ತು ಕುಡಿತದ ಅಭ್ಯಾಸ ಹೊಂದಿದ್ದ ಹೊರತಾಗಿಯೂ ತನ್ನ ತಂದೆ ಆರೋಗ್ಯವಾಗಿಯೇ ಇದ್ದರು ಎಂದೂ ಜಾಕ್ಸನ್ ತಿಳಿಸಿದ್ದಾರೆ.
ವಾರ್ನ್ ಸಾವಿಗೆ ಕೆಲವೇ ತಿಂಗಳ ಮುನ್ನ ಕರೋನಾ ಸೋಂಕಿಗೂ ತುತ್ತಾಗಿದ್ದರು. ಆದರೆ ಸಾವಿನ ಸಮಯದಲ್ಲಿ ಅವರಿಗೆ ಯಾವುದೇ ಪ್ರಮುಖ ಕಾಯಿಲೆಗಳು ಇರಲಿಲ್ಲ.