ಮಹಿಳಾ ಐಪಿಎಲ್​ನಲ್ಲಿ ಮೊದಲ ಶತಕ ಯಾವಾಗ?  
ಕ್ರಿಕೆಟ್

WPL: ಮಹಿಳಾ ಐಪಿಎಲ್​ನಲ್ಲಿ ಮೊದಲ ಶತಕ ಯಾವಾಗ? 90ರ ಗಡಿ ದಾಟಿದರೂ ಒಲಿಯುತ್ತಿಲ್ಲ ಸೆಂಚುರಿ!

ಮುಂಬೈ: ಐಪಿಎಲ್​ನಲ್ಲಿ (IPL) ಮೊದಲ ಪಂದ್ಯದಲ್ಲೇ ಶತಕ ಸಿಡಿದಿತ್ತು. 2008ರಲ್ಲಿ ಆರ್​ಸಿಬಿ ವಿರುದ್ಧ ನಡೆದ ಐಪಿಎಲ್​ ಇತಿಹಾಸದ ಮೊದಲ ಪಂದ್ಯದಲ್ಲೇ ಕೆಕೆಆರ್​ ಪರ ನ್ಯೂಜಿಲೆಂಡ್​ನ ಬ್ರೆಂಡನ್​ ಮೆಕ್ಕಲಂ 157 ರನ್ ಸಿಡಿಸಿ ಶತಕವೀರರೆನಿಸಿದ್ದರು. ಆದರೆ ಮಹಿಳಾ ಐಪಿಎಲ್​ ಖ್ಯಾತಿಯ ಡಬ್ಲ್ಯುಪಿಎಲ್​ನಲ್ಲಿ (WPL) ಮೊದಲ 3 ಆವೃತ್ತಿಗಳಲ್ಲಿ ಒಂದೂ ಶತಕ ಸಿಡಿದಿರಲಿಲ್ಲ. ಇದೀಗ ಡಬ್ಲ್ಯುಪಿಎಲ್​ ನಾಲ್ಕನೇ ಆವೃತ್ತಿಯಲ್ಲೂ ಅರ್ಧದಷ್ಟು ಪಂದ್ಯಗಳು ಮುಗಿದಿದ್ದರೂ, ಇದುವರೆಗೆ ಒಂದೂ ಶತಕ ದಾಖಲಾಗಿಲ್ಲ.

ಡಬ್ಲ್ಯುಪಿಎಲ್​ನಲ್ಲಿ ಇದುವರೆಗೆ 10 ಆಟಗಾರ್ತಿಯರು 90ರ ಗಡಿ ದಾಟಿದ್ದರೂ, ಶತಕ ಪೂರೈಸುವಲ್ಲಿ ಯಶಸ್ವಿಯಾಗಿಲ್ಲ. ಶನಿವಾರ ಡೆಲ್ಲಿ ಎದುರು 96 ರನ್​ಗಳಿಗೆ ಔಟಾದ ಸ್ಮೃತಿ ಮಂದನಾ (Smriti Mandhana) ಇದಕ್ಕೊಂದು ತಾಜಾ ಉದಾಹರಣೆ.

ಇಬ್ಬರು ಆಟಗಾರ್ತಿಯರು 99 ರನ್​ (ವೊಲ್​, ಡಿವೈನ್​) ಗಳಿಸಿದ್ದರೂ, ಶತಕ ಒಲಿದಿರಲಿಲ್ಲ. ಸೋಫಿ ಡಿವೈನ್​ 2 ಬಾರಿ 90ರ ಗಡಿ ದಾಟಿದ್ದರೂ, ಶತಕ ಗಳಿಸಿಲ್ಲ. ಹೀಗಾಗಿ ಡಬ್ಲ್ಯುಪಿಎಲ್​ ಇತಿಹಾಸದ ಮೊದಲ ಶತಕ ಸಾಧಕಿ ಯಾರಾಗುವರು ಎಂಬ ಕುತೂಹಲ ತೀವ್ರಗೊಂಡಿದೆ.
ಡಬ್ಲ್ಯುಪಿಎಲ್​-4 ಟಾಪರ್ಸ್​
ಗರಿಷ್ಠ ರನ್​: ಪೋಬ್​ ರಿಚ್​ಫೀಲ್ಡ್​ (ಯುಪಿ): 211
ಗರಿಷ್ಠ ವಿಕೆಟ್​: ಅಮೆಲಿಯಾ ಕೆರ್​ (ಮುಂಬೈ): 10
ಗರಿಷ್ಠ ಸಿಕ್ಸರ್​: ಸೋಫಿ ಡಿವೈನ್​ (ಗುಜರಾತ್​): 10
ಪಂದ್ಯ: 11, ಒಟ್ಟು ಸಿಕ್ಸರ್​: 121