ವೈಎಸ್​ ರಾಮಸ್ವಾಮಿ ಸ್ಮಾರಕ ಟ್ರೋಫಿ: ವಲ್ಚರ್ಸ್​ ಕ್ರಿಕೆಟ್​ ಕ್ಲಬ್​ ಚಾಂಪಿಯನ್​ 
ಕ್ರಿಕೆಟ್

ವೈಎಸ್​ ರಾಮಸ್ವಾಮಿ ಸ್ಮಾರಕ ಟ್ರೋಫಿ: ವಲ್ಚರ್ಸ್​ ಕ್ರಿಕೆಟ್​ ಕ್ಲಬ್​ ಚಾಂಪಿಯನ್​

ಬೆಂಗಳೂರು: ಕೆಎಲ್​ ಶ್ರೀಜಿತ್​ ಸಾರಥ್ಯದ ವಲ್ಚರ್ಸ್​ ಕ್ರಿಕೆಟ್​ ಕ್ಲಬ್​ (Vultures Cricket Club) ತಂಡ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ ವೈ.ಎಸ್​. ರಾಮಸ್ವಾಮಿ ಸ್ಮಾರಕ ಟ್ರೋಫಿ ಕ್ರಿಕೆಟ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಳೆಬಾಧಿತ ಫೈನಲ್​ ಪಂದ್ಯದಲ್ಲಿ ವಲ್ಚರ್ಸ್​ ತಂಡ ಸ್ವಸ್ತಿಕ್​ ಯೂನಿಯರ್​ ಕ್ರಿಕೆಟ್​ ಕ್ಲಬ್​ ವಿರುದ್ಧ 8 ವಿಕೆಟ್​ಗಳಿಂದ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್​ಗೆ ಇಳಿದ ಸ್ವಸ್ತಿಕ್​ ಯೂನಿಯನ್​ ತಂಡ ಅನೀಶ್ವರ್​ ಗೌತಮ್​ (156) ಶತಕದಾಟದಿಂದ 50 ಓವರ್​ಗಳಲ್ಲಿ 7 ವಿಕೆಟ್​ಗೆ 307 ರನ್​ ಗಳಿಸಿತು. ಪ್ರತಿಯಾಗಿ ವಲ್ಚರ್ಸ್​ ಚೇಸಿಂಗ್​ ವೇಳೆ ಮಳೆ ಅಡಚಣೆ ತಂದಿದ್ದರಿಂದ 39 ಓವರ್​ಗಳಲ್ಲಿ 263 ರನ್​ ಗಳಿಸುವ ಪರಿಷತ ಸವಾಲು ನೀಡಲಾಯಿತು. ಕರುಣ್​ ನಾಯರ್​ (69), ಶ್ರೀಜಿತ್​ (54*) ಅರ್ಧಶತಕದ ಬಲದಿಂದ ವಲ್ಚರ್ಸ್​ ತಂಡ 25.5 ಓವರ್​ಗಳಲ್ಲಿ 2 ವಿಕೆಟ್​ಗೆ 152 ರನ್​ ಗಳಿಸಿದಾಗ ಮಳೆ ಮತ್ತೆ ಅಡಚಣೆ ತಂದಿತು. ನಂತರ ಆಟ ಮುಂದುವರಿಸಲು ಸಾಧ್ಯವಾಗದೆ ವಿಜೆಡಿ ನಿಯಮದನ್ವಯ ಫಲಿತಾಂಶ ನಿರ್ಧರಿಸಲಾಯಿತು.