ನಾಚಿಕೆ ಏಕೆ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ... ಕೆಕೆಆರ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ ವೀರೂ! Virender Sehwag  
ಕ್ರಿಕೆಟ್

ನಾಚಿಕೆಬಿಟ್ಟು ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ... ಕೆಕೆಆರ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ ವೀರೂ! Virender Sehwag

ಪ್ರಮುಖ ಮುಖ್ಯಾಂಶಗಳು

  • ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಡಳಿತ ಮಂಡಳಿಯ ವಿರುದ್ಧ ವೀರೇಂದ್ರ ಸೆಹ್ವಾಗ್ ಟೀಕಾ ಪ್ರಹಾರ
  • ತಪ್ಪುಗಳನ್ನು ಒಪ್ಪಿಕೊಳ್ಳಲು ಯಾವುದೇ ಕಾರಣಕ್ಕೂ ನಾಚಿಕೆಪಡುವ ಅಗತ್ಯವಿಲ್ಲ ಎಂದ ವೀರೂ
  • ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಕೆಕೆಆರ್​ಗೆ ಮಹತ್ವದ ಸಲಹೆ ನೀಡಿದ ಸೆಹ್ವಾಗ್​
Virender Sehwag : ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಕೋಲ್ಕತ್ತ ನೈಟ್ ರೈಡರ್ಸ್ ( KKR ) ತಂಡದ ಆಡಳಿತ ಮಂಡಳಿಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ತಪ್ಪುಗಳನ್ನು ಒಪ್ಪಿಕೊಳ್ಳಲು ಯಾವುದೇ ಕಾರಣಕ್ಕೂ ನಾಚಿಕೆಪಡುವ ಅಗತ್ಯವಿಲ್ಲ ಎಂದಿರುವ ವೀರೂ, ಈಗಲೇ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಕೆಕೆಆರ್​ಗೆ ಮಹತ್ವದ ಸಲಹೆ ನೀಡಿದ್ದಾರೆ.
ಅಂದಹಾಗೆ, ಲೆಜೆಂಡರಿ ಆಲ್‌ರೌಂಡರ್ ಆಂಡ್ರೆ ರಸೆಲ್ ಬದಲಿಗೆ ಕೆಕೆಆರ್​ ತಂಡ ಭಾರಿ ಮೊತ್ತಕ್ಕೆ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿ ಮಾಡಿದೆ. ಸುಮಾರು 25 ಕೋಟಿಗೂ ಹೆಚ್ಚು ಹಣ ನೀಡಿ ಖರೀಸಿದೆ. ಇಷ್ಟೊಂದು ದೊಡ್ಡ ಮೊತ್ತ ಕೊಟ್ಟರೂ ಕೆಕೆಆರ್​ ತಂಡಕ್ಕೆ ಗ್ರೀನ್​ ಅವರಿಂದ ಯಾವುದೇ ಪ್ರಯೋಜನವಾಗಿಲ್ಲ. ಇದುವರೆಗೂ 5 ಪಂದ್ಯಗಳನ್ನು ಆಡಿರುವ ಕೆಕೆಆರ್​ 4ರಲ್ಲಿ ಸೋಲುಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೆಕೆಆರ್​ ಕೊನೆಯ ಸ್ಥಾನದಲ್ಲಿದೆ.
ಬೆನ್ನುನೋವಿನಿಂದಾಗಿ ಆರಂಭಿಕ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಗ್ರೀನ್​ ಅವರಿಂದ ಸಾಧ್ಯವಾಗಲಿಲ್ಲ. ಕೇವಲ ಬ್ಯಾಟ್ಸ್‌ಮನ್ ಆಗಿ ಕ್ರೀಸ್​ಗೆ ಇಳಿದ ಗ್ರೀನ್​, ತಮ್ಮ ಬ್ಯಾಟಿಂಗ್​ನಲ್ಲಿಯೂ ಯಾವುದೇ ಪ್ರಭಾವ ಬೀರಲಿಲ್ಲ. ಇದೀಗ ಗ್ರೀನ್​ ಬೌಲಿಂಗ್ ಮಾಡುತ್ತಿದ್ದರೂ ಯಾವುದೇ ಪರಿಣಾಮ ಬೀರಲು ಸಾಧ್ಯವಾಗುತ್ತಿಲ್ಲ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಸಂಪೂರ್ಣ ವಿಫಲರಾಗಿರುವ ಗ್ರೀನ್​, ತಂಡಕ್ಕೆ ಹೊರೆಯಾಗಿದ್ದಾರೆ. ಈ ಸಂದರ್ಭದಲ್ಲಿ, ವೀರೇಂದ್ರ ಸೆಹ್ವಾಗ್ ಗ್ರೀನ್ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಗ್ರೀನ್​ ಅವರನ್ನು ಅಂತಿಮ ತಂಡದಿಂದ ತೆಗೆದುಹಾಕಿ, ಬೇರೆ ಆಟಗಾರನಿಗೆ ಸ್ಥಾನ ನೀಡುವಂತೆ ಕೆಕೆಆರ್​ ತಂಡಕ್ಕೆ ಸೂಚಿಸಿದ್ದಾರೆ.
ಕ್ರಿಕ್​ಬುಜ್​ ಜೊತೆ ಮಾತನಾಡಿದ ವೀರೂ, ನಿಮ್ಮ ಬಳಿ ಸಾಕಷ್ಟು ಹಣವಿರುವಾಗ ಆಟಗಾರರಲ್ಲಿ ಹೂಡಿಕೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಕ್ಯಾಮರೂನ್ ಗ್ರೀನ್‌ನಂತಹ ಆಟಗಾರನ ಮೇಲೆ ನೀವು 25 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದಾಗ, ಅವರು ನಿಮಗೆ ದುಬಾರಿ ಆಸ್ತಿಯಾಗುತ್ತಾರೆ. ನೀವು ಅವರನ್ನು ಅಂತಿಮ ತಂಡದಲ್ಲಿ ಆಡಿಸಿದಾಗ, ಅವರು ಯಾವುದೇ ಪರಿಣಾಮವನ್ನು ಬೀರಿಲ್ಲ. ಹೀಗಾಗಿ, ಅವರನ್ನು ಅಂತಿಮ ತಂಡದಿಂದ ಹೊರಗಿಟ್ಟರೆ, ಅಂತಹ ಆಟಗಾರನನ್ನು ಖರೀದಿಸಿ ಬೆಂಚ್‌ಗೆ ಸೀಮಿತಗೊಳಿಸುವುದರ ಅರ್ಥವೇನು ಎಂಬುದರ ಕುರಿತು ಪ್ರಶ್ನೆಗಳು ಮತ್ತು ಟೀಕೆಗಳು ಬಂದೇ ಬರುತ್ತವೆ. ಆದರೆ, ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನೀವು ಏಕೆ ಇಷ್ಟೊಂದು ಹಿಂಜರಿಯುತ್ತೀರಿ? ಹೌದು, ತಪ್ಪು ಮಾಡಲಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಸೆಹ್ವಾಗ್​ ಹೇಳಿದರು.
ಕ್ಯಾಮರೂನ್ ಗ್ರೀನ್ ಅವರನ್ನು ಹೊರಗಿಟ್ಟು ಇನ್ನೊಬ್ಬ ಆಟಗಾರನಿಗೆ ಅಂತಿಮ ತಂಡದಲ್ಲಿ ಸ್ಥಾನ ನೀಡಿ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಗ್ರೀನ್ ಅವರಿಂದ​ ಯಾವುದೇ ಪ್ರಯೋಜನವಿಲ್ಲದಿದ್ದಾಗ ಅವರೇಕೆ ತಂಡದಲ್ಲಿ ಮುಂದುವರಿಯಬೇಕು? ತಂಡವು ಅವರಿಂದ ಏನನ್ನೂ ಪಡೆಯುತ್ತಿಲ್ಲ ಎಂದು ನೀವು ಭಾವಿಸಿದರೆ, ಸೂಕ್ತವಾದ ಬೇರೊಬ್ಬರನ್ನು ತೆಗೆದುಕೊಳ್ಳಿ ಎಂದು ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ.
ಅಂದಹಾಗೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಈ ಋತುವಿನಲ್ಲಿ ಕೆಕೆಆರ್ ಪರ ಐದು ಪಂದ್ಯಗಳಲ್ಲಿ ಕೇವಲ 56 ರನ್ ಗಳಿಸಿದ್ದಾರೆ. ಅವರು ಬೌಲಿಂಗ್‌ನಲ್ಲೂ ವಿಫಲರಾಗಿದ್ದಾರೆ. ಈವರೆಗೆ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್ ತಂಡ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ರನ್‌ಗಳಿಂದ ಸೋಲುಂಡಿತು. ಮುಂದಿನ ಪಂದ್ಯ ಏಪ್ರಿಲ್ 17 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೆ ಅಹಮದಾಬಾದ್ ವೇದಿಕೆಯಾಗಲಿದೆ, (ಏಜೆನ್ಸೀಸ್​).