ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ, ಅಂಪೈರ್ ಅನಿಲ್ ಚೌಧರಿ
- ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಕೋಪಿಷ್ಠ ಆಟದ ಬಗ್ಗೆ ಓಪನ್ ಟಾಕ್
- ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ಕುರಿತು ಮಾಜಿ ಅಂಪೈರ್ ಮುಕ್ತ ಮಾತು
Virat Kohli: ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ಅಭಿಮಾನಿಗಳ ನೆಚ್ಚಿನ 'ಕಿಂಗ್', ವಿರಾಟ್ ಕೊಹ್ಲಿ ಬಗ್ಗೆ ಯಾರಾದರೂ ಒಬ್ಬರು ಮಾತನಾಡುವುದು, ಯಾವುದಾದರೂ ಒಂದು ವಿಷಯ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬರುವುದು ತೀರ ಸಾಮಾನ್ಯವಾಗಿಬಿಟ್ಟಿದೆ. ಪ್ರಸ್ತುತ, ಯಾವುದೇ ಏಕದಿನ ಪಂದ್ಯ ಅಥವಾ ಎಲ್ಲಿಯೂ ಕಾಣಿಸಿಕೊಳ್ಳದ ವಿರಾಟ್ ಬಗ್ಗೆ ಮಾಜಿ ಐಸಿಸಿ ಅಂಪೈರ್ವೊಬ್ಬರು ಆಡಿರುವ ನೇರ ಮಾತುಗಳು ಸದ್ಯ ಸ್ಟಾರ್ ಕ್ರಿಕೆಟಿಗನ ಫ್ಯಾನ್ಸ್ ಹೃದಯ ಗೆದ್ದಿದೆ.
ಐಪಿಎಲ್ 19ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಇನ್ನಿಂಗ್ಸ್ ಆಡಿದ ಕಿಂಗ್ ಕೊಹ್ಲಿ, 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಇತ್ತೀಚೆಗೆ ಮುಗಿದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿರಾಟ್, ಮುಂದಿನ ದಿನಗಳಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಏಕದಿನ ಪ್ರವಾಸದಲ್ಲಿ ತಂಡದ ಪರ ಮತ್ತೊಮ್ಮೆ ಕಣಕ್ಕಿಳಿಯಲು ಮೈದಾನದಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಅನಿಲ್ ಚೌಧರಿ ಹೇಳಿಕೆ ಹಲವರ ಗಮನ ಸೆಳೆದಿದೆ.
ಜಿಯೋ ಹಾಟ್‌ಸ್ಟಾರ್ ಜತೆಗಿನ ಸಂವಾದದಲ್ಲಿ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ ಹಾಗೂ ಉಮೇಶ್ ಯಾದವ್ ಅವರೊಂದಿಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡ ಮಾಜಿ ಅಂತಾರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಅಗ್ರೆಸಿವ್ ಆಟ, ಕೋಪಿಷ್ಠ ವರ್ತನೆ ನೋಡಿದಾಗ ಏಕೆ ಈ ವ್ಯಕ್ತಿ ಹೀಗೆ ಅನಿಸಿತ್ತು. ನಿಜಕ್ಕೂ, ಈ ಸಂದರ್ಭಗಳಲ್ಲಿ, ಅವರ ಮನಸ್ಸಿನಲ್ಲಿ ಯಾವುದೇ ದ್ವೇಷ ಇರುವುದಿಲ್ಲ ಎಂದರು.
"ನಾನು ವಿರಾಟ್ರನ್ನು ಬಾಲ್ಯದಿಂದಲೂ ನೋಡಿದ್ದೇನೆ. ಆತ ಮೈದಾನದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಿದರೂ ಅವರ ಮನಸ್ಸಿನಲ್ಲಿ ಯಾವುದೇ ದ್ವೇಷವಿರುವುದಿಲ್ಲ. ಅದು ಮೈದಾನಕ್ಕೆ ಅಥವಾ ಆಟಕ್ಕೆ ಮಾತ್ರ ಸೀಮಿತ ಅಷ್ಟೇ. ಅಂಪೈರ್ ಆಗಿ ನಾವುಗಳು ಸರಿಯಾದ ನಿರ್ಧಾರ ತೋರಿಸಿದರೆ 'ಥಂಬ್ಸ್ ಅಪ್' ತೋರಿಸುತ್ತಾರೆ, ಓವರ್‌ಗಳ ನಡುವೆ ಬಂದು ನಮ್ಮ ಹೆಗಲ ಮೇಲೆ ಕೈಹಾಕಿಕೊಂಡು ಮಾತಾಡುತ್ತಾರೆ. ಕೊಹ್ಲಿಯಂತಹ ಆಟಗಾರರಿದ್ದರೆ ಮಾತ್ರ ಆಟ ರೋಚಕವಾಗಿರಲು ಸಾಧ್ಯ ಎಂದಿದ್ದಾರೆ.