ವಿರಾಟ್​ ಕೊಹ್ಲಿ ಇನ್​ಸ್ಟಾ ಖಾತೆಯಿಂದ ಲೈಕ್​ ಪಡೆದ ಬೆಡಗಿಯರು 
ಕ್ರಿಕೆಟ್

ಅವನೀತ್​​​ ಕೌರ್​ ಬಳಿಕ ಜರ್ಮನ್​ ಬೆಡಗಿ ಫೋಟೋಗೆ ಕೊಹ್ಲಿ ಲೈಕ್​! ಈ ಸಲ ಕೂಡ ಅದೇನಾ? 'ಕಿಂಗ್'​ಗೆ ಫ್ಯಾನ್ಸ್​ಗಳ ಚಮಕ್​

ಪ್ರಮುಖ ಮುಖ್ಯಾಂಶಗಳು

  • ಕಳೆದ ವರ್ಷ ನಟಿ ಅವನೀತ್ ಕೌರ್​ ಫೋಟೋಗೆ ವಿರಾಟ್​ ಕೊಹ್ಲಿ ಖಾತೆಯಿಂದ ಲೈಕ್​
  • ಈ ವರ್ಷ ಜರ್ಮನ್ ಬೆಡಗಿಯ ಫೋಟೋಗೆ ಅದೇ ರೀತಿ ಲೈಕ್​
  • ಕಳೆದ ಬಾರಿ ಸ್ಪಷ್ಟನೆ ಕೊಟ್ಟಿದ್ದ ವಿರಾಟ್​ ಈಗ ಏನು ಹೇಳ್ತಾರೆ ಅಂತ ಫ್ಯಾನ್ಸ್ ಕುತೂಹಲ
Virat Kohli: ಕಳೆದ ವರ್ಷ ನಟಿ ಅವನೀತ್​ ಕೌರ್​ ಇನ್​ಸ್ಟಾಗ್ರಾಮ್​ ಫೋಟೋವೊಂದಕ್ಕೆ ಲೈಕ್​ ಕೊಟ್ಟಿದ್ದ ವಿರಾಟ್​ ಕೊಹ್ಲಿ, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ ಹಿನ್ನೆಲೆ, ಅಭಿಮಾನಿಗಳ ಕುತೂಹಲಕಾರಿ ಚರ್ಚೆಗೆ ಕಾರಣವಾಯಿತು. ವಿರಾಟ್​ ಅವರಿಗೆ ಆ ಬೆಡಗಿ ಕಂಡು ಇಷ್ಟವಾಗಿಯೇ ಲೈಕ್​ ಮಾಡಿದ್ದಾರೆ ಎಂಬ ಸುದ್ದಿಗಳು ಸಿಕ್ಕಾಪಟ್ಟೆ ಹರಿದಾಡಿತ್ತು. ಇದಕ್ಕೆ ಸ್ವತಃ ಕೊಹ್ಲಿಯೇ ಪ್ರತಿಕ್ರಿಯಿಸಿ, ಅದು ಇನ್​ಸ್ಟಾಗ್ರಾಮ್​ ಅಲ್ಗಾರಿದಮ್​ ಮಿಸ್ಟೇಕ್ ವಿನಃ ನಾನು ಮಾಡಿದ್ದಲ್ಲ ಎಂದಿದ್ದರು. ಆದರೀಗ, ಮತ್ತೊಂದು ಯುವತಿಯ ಫೋಟೋಗೆ ವಿರಾಟ್​ ಫ್ರೊಫೈಲ್​ನಿಂದ ಲೈಕ್ ಬಂದಿರುವುದು ಸದ್ಯ ಫ್ಯಾನ್ಸ್​ಗಳಲ್ಲಿ ಮತ್ತೊಮ್ಮೆ ಕುತೂಹಲ ಕೆರಳಿಸಿದೆ.​    
ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಫೋಟೊವನ್ನು ಲೈಕ್ ಮಾಡಿದ್ದ ವಿರಾಟ್​, ಸ್ಪಷ್ಟನೆ ವೇಳೆ ಇದೊಂದು ಅಲ್ಗಾರಿದಮ್ ಮಿಸ್ಟೇಕ್​ ಬಿಟ್ಟರೆ, ನಾನಾಗಿ ಲೈಕ್​ ಮಾಡಿರುವುದಲ್ಲ ಎಂದಿದ್ದರು. ಆದರೀಗ, ಜರ್ಮನಿ ಮೂಲದ ವ್ಲಾಗರ್​ ಲಿಜ್‌ಲಾಜ್ ಎಂಬ ಯುವತಿಯ ಫೋಟೋಗೆ ಜನವರಿಯಲ್ಲಿ ವಿರಾಟ್​ ಅವರ ಇನ್​ಸ್ಟಾ ಖಾತೆಯಿಂದ ಲೈಕ್​ ಆಗಿರುವುದು ಗೊತ್ತಾಗಿದೆ. ಇದನ್ನು ನೋಡಿದ ವಿರಾಟ್​ ಅಭಿಮಾನಿಗಳು, ಕಳೆದ ಬಾರಿ ಏನೋ ಅಲ್ಗಾರಿದಮ್​ ಅಂತ ಹೇಳಿದ್ರು. ಆದರೆ, ಎರಡನೇ ಬಾರಿ ಅದೇ ರೀತಿ ಆಗಿರುವುದಕ್ಕೆ ಏನು ಹೇಳ್ತಾರೆ ಕೊಹ್ಲಿ ಎಂಬ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ.

ಇನ್ನೂ ಯಾವುದೇ ಪ್ರತಿಕ್ರಿಯೆ ಇಲ್ಲ 

ಈ ವರ್ಷದ ಜನವರಿ 30ರಂದು ಜರ್ಮನ್​ ಬೆಡಗಿಯ ಫೋಟೋಗೆ ಕೊಹ್ಲಿ ಅವರು ಲೈಕ್​ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕಳೆದ ವರ್ಷ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಫೋಟೋಗೆ ಲೈಕ್​ ಮಾಡಿದ್ದ ವಿಚಾರಕ್ಕೆ ವಿರಾಟ್​ ಸ್ಪಷ್ಟನೆ ನೀಡಿದ್ದರು. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ಯಾವುದೇ ಅನಗತ್ಯ ಊಹೆಗಳಿಗೆ ಇಲ್ಲಿ ಜಾಗವಿಲ್ಲ. ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದಿದ್ದರು. ಆದರೆ, ಎರಡನೇ ಬಾರಿಯೂ ಇದೇ ರೀತಿ ಆಗಿರುವುದಕ್ಕೆ ಕಿಂಗ್ ಏನು ಹೇಳಬಹುದು ಎಂಬ ಕುತೂಹಲ ಸದ್ಯ ಹಲವರಲ್ಲಿ ಕಾಡತೊಡಗಿದೆ.

ಆರ್​ಸಿಬಿ ಪರ ಅದ್ಭುತ ಆಟ 

ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಬ್ರ್ಯಾಂಡ್​ ಆಟಗಾರ ವಿರಾಟ್​ ಕೊಹ್ಲಿ ಅವರನ್ನು ನೋಡಲು ತುದಿಗಾಲಿನಲ್ಲಿ ಕಾಯುವ ಕ್ರಿಕೆಟ್​ ಅಭಿಮಾನಿಗಳು, ಪ್ರತಿ ಪಂದ್ಯದಲ್ಲೂ ಅವರ ಮಿಂಚಿನ ಓಟ, ಅಮೋಘ ಕ್ಯಾಚ್​ ಮತ್ತು ರನ್​ಗಳ ಹೊಳೆಯನ್ನು ನೋಡಲು ಬಯಸುತ್ತಾರೆ. ಅಂತೆಯೇ, ತಮ್ಮಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕೊಹ್ಲಿ, ಆರ್​ಸಿಬಿ ಪರ ಅಧಿಕ ರನ್​ಗಳನ್ನು ಕಲೆಹಾಕುತ್ತಿರುವುದು ಫ್ಯಾನ್ಸ್​ಗಳಲ್ಲಿ ಖುಷಿ ನೀಡುತ್ತಿದೆ. ಕಳೆದ ವರ್ಷದಂತೆ ಈ ವರ್ಷವು ಅವರಿಗೆ ಐಪಿಎಲ್​ನ ಆರೆಂಜ್ ಕ್ಯಾಪ್​ ಮುಡಿಗೇರಲಿದೆ ಎಂದೇ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್). ​