ಅರ್ಷದೀಪ್​ ಓಡುವ ಶೈಲಿ ಅನುಕರಿಸಿದ ಕೊಹ್ಲಿ 
ಕ್ರಿಕೆಟ್

ಅರ್ಷದೀಪ್​ ಓಡುವ ಶೈಲಿ ಅನುಕರಿಸಿದ ಕೊಹ್ಲಿ: ವೈರಲ್​ ವಿಡಿಯೋ ನೋಡಿ ನಗಾಡಿದ ನೆಟ್ಟಿಗರು! Virat Kohli

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಜನವರಿ 11 ರಿಂದ ಆರಂಭ
  • ಮೊದಲ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಗುಜರಾತಿನ ವಡೋದರಾ
  • ಇತ್ತೀಚೆಗಷ್ಟೇ ಅಭ್ಯಾಸಕ್ಕಾಗಿ ಟೀಮ್​ ಇಂಡಿಯಾವನ್ನು ಸೇರಿಕೊಂಡ ವಿರಾಟ್​ ಕೊಹ್ಲಿ
  • ವೇಗಿ ಅರ್ಷದೀಪ್​ ಸಿಂಗ್ ಅವರನ್ನು ಅನುಕರಣೆ ಮಾಡಿದ ವಿರಾಟ್​
Virat Kohli : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಿಂದ ಅಂದರೆ, ನಾಳೆಯಿಂದ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯಕ್ಕೆ ವಡೋದರಾ ಆತಿಥ್ಯ ವಹಿಸಲಿದ್ದು, ಎರಡೂ ತಂಡಗಳು ಅಭ್ಯಾಸಕ್ಕಾಗಿ ವಡೋದರಾದಲ್ಲಿ ಬೀಡುಬಿಟ್ಟಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೆಸ್ಟ್ ಮತ್ತು ಟಿ20 ಸ್ವರೂಪಗಳಿಗೆ ನಿವೃತ್ತಿ ಘೋಷಿಸಿರುವ ದಾಖಲೆಗಳ ಸರದಾರ, ರನ್​ ಮೆಷಿನ್​, ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ, ಪ್ರಸ್ತುತ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಕೊಹ್ಲಿ ಅವರು ಇತ್ತೀಚೆಗಷ್ಟೇ ಅಭ್ಯಾಸಕ್ಕಾಗಿ ಟೀಮ್​ ಇಂಡಿಯಾವನ್ನು ಸೇರಿಕೊಂಡಿದ್ದಾರೆ.
ಬ್ಯಾಟ್​ ಹಿಡಿದು ಕ್ರೀಸ್​ಗೆ ಇಳಿದರೆ ತುಂಬಾ ಆಕ್ರಮಣಕಾರಿಯಾಗಿ ಕಾಣುವ ವಿರಾಟ್ ಕೊಹ್ಲಿ, ಮೈದಾದನಲ್ಲಿ ಮಾತ್ರ ತುಂಬಾ ತಮಾಷೆಯಾಗಿರುತ್ತಾರೆ. ಸಹ ಆಟಗಾರರ ರೀತಿ ನಟಿಸುವುದು ಹಾಗೂ ಡಾನ್ಸ್​ ಮಾಡಿ ರಂಜಿಸುವುದು ಮಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್​ ಆಗಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.
ಇದೀಗ ಕೊಹ್ಲಿ ಅವರು ಟೀಮ್ ಇಂಡಿಯಾ ವೇಗಿ ಅರ್ಷದೀಪ್​ ಸಿಂಗ್ ಅವರನ್ನು ಅನುಕರಿಸುವ ಮೂಲಕ ಸುದ್ದಿಯಾಗಿದ್ದಾರೆ. ಅಭ್ಯಾಸದ ಸಮಯದಲ್ಲಿ ಕೊಹ್ಲಿ, ಅರ್ಷದೀಪ್ ಅವರು ಓಡುವ ರೀತಿಯನ್ನು ಅನುಕರಿಸಿದರು. ಇದನ್ನು ನೋಡಿದ ತಂಡದ ಇತರೇ ಸದಸ್ಯರು ನಗಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಭಾರತ, ನ್ಯೂಜಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ
* ಮೊದಲ ಏಕದಿನ - ಜನವರಿ 11 (ವಡೋದರಾ)
* ಎರಡನೇ ಏಕದಿನ - ಜನವರಿ 14 (ರಾಜ್‌ಕೋಟ್)
* ಮೂರನೇ ಏಕದಿನ - ಜನವರಿ 18 (ಇಂದೋರ್)

ಏಕದಿನ ಸರಣಿಗೆ ಟೀಮ್ ಇಂಡಿಯಾ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್​ ಕೀಪರ್​), ಶ್ರೇಯಸ್ ಅಯ್ಯರ್ (ಉಪನಾಯಕ), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್), ನಿತೀಶ್ ಕುಮಾರ್​ ರೆಡ್ಡಿ, ಅರ್ಷದೀಪ್​ ಸಿಂಗ್​, ಯಶಸ್ವಿ ಜೈಸ್ವಾಲ್​.