Sanjiv Goenka (ಚಿತ್ರ X) 
ಕ್ರಿಕೆಟ್

ಕಿಂಗ್ ಕೊಹ್ಲಿಗಾಗಿ ಕಾದ ಲಕ್ನೋ ನವಾಬ: ಸಂಜೀವ್ ಗೋಯೆಂಕಾ ಅವರ ವಿನಯಕ್ಕೆ ನೆಟ್ಟಿಗರು ಫಿದಾ! Sanjiv Goenka

ಲಕ್ನೋ: ಐಪಿಎಲ್ 2026ರ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ತನ್ನ ತವರು ಮೈದಾನವಾದ ಏಕಾನಾ ಕ್ರೀಡಾಂಗಣದಲ್ಲಿ, ಮಳೆಯ ಅಡ್ಡಿಯ ನಡುವೆಯೂ ನಡೆದ ಜಿದ್ದಾಜಿದ್ದಿನ (Sanjiv Goenka) ಹೋರಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು 9 ರನ್‌ಗಳಿಂದ ಸೋಲಿಸುವ ಮೂಲಕ, ಈ ಋತುವಿನ ಮೊದಲ ತವರು ಮೈದಾನದ ಗೆಲುವನ್ನು ದಾಖಲಿಸಿಕೊಂಡಿದೆ.
ಆದಾಗ್ಯೂ, ಈ ಸಮಯದಲ್ಲಿ ನಡೆದಂತಹ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರ ಹೃದಯೀಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.

ವಿಡಿಯೋದಲ್ಲೇನಿದೆ?

ವಿರಾಟ್ ಕೊಹ್ಲಿ ಮತ್ತು ಎಲ್‌ಎಸ್‌ಜಿ ತಂಡದ ಕಾರ್ಯತಂತ್ರದ ಸಲಹೆಗಾರ ಕೇನ್ ವಿಲಿಯಮ್ಸನ್ ಇಬ್ಬರು ಚರ್ಚೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಆ ಸಮಯದಲ್ಲಿ ಸಂಜೀವ್ ಗೋಯೆಂಕಾ ಅವರು ತಮ್ಮ ಮೊಮ್ಮಗನೊಂದಿಗೆ ಅಲ್ಲಿಗೆ ಆಗಮಿಸಿದ್ದು, ಅವರಿಬ್ಬರ ಮಾತುಕತೆಗೆ ಅಡ್ಡಿಪಡಿಸಬಾರದೆಂದು ದೂರದಲ್ಲೇ ನಿಂತು. ಅವರಿಗೆ ತೊಂದರೆ ಕೊಡಬೇಡಿ ಎಂದು ಸೇನಾ ಸಿಬ್ಬಂದಿಗೆ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದಾದ ಬಳಿಕ ವಿಲಿಯಮ್ಸನ್ ಅವರೊಂದಿಗೆ ಸಂಭಾಷಣೆ ನಡೆಸಿದ ನಂತರ ಕೊಹ್ಲಿ ಗೋಯೆಂಕಾ ಅವರನ್ನು ಭೇಟಿ ಮಾಡಿದರು. ನಂತರ ಮಗುವನ್ನು ಪ್ರೀತಿಯಿಂದ ಇಬ್ಬರೂ ನಾಯಕರು ಕರೆದು ಆಟೋಗ್ರಾಫ್​ ನೀಡಿದರು. ಆದಾಗ್ಯೂ, ವಿಲಿಯಮ್ಸನ್ ಜೊತೆಗಿನ ಮಾತುಕತೆಯ ಸಮಯದಲ್ಲಿ ಗೋಯೆಂಕಾ ಕೊಹ್ಲಿ ಅವರನ್ನು ಅಡ್ಡಪಡಿಸುವ ಅವಕಾಶವಿತ್ತು. ಆದರೆ, ಅವರು ಅದನ್ನು ನಿರಾಕರಿಸಿದ್ದು, ಅವರ ಗೌರವವನ್ನು ಇನ್ನಷ್ಟು ಹೆಚ್ಚಿಸಿತ್ತು.

ಐಪಿಎಲ್ ತಂಡಗಳ ಮಾಲೀಕರ ವಿರುದ್ಧ ಬಿಸಿಸಿಐ ಕಠಿಣ ಕ್ರಮ

ಐಪಿಎಲ್ 2026 ರಲ್ಲಿ ನಡೆದ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ, ಕ್ಲಬ್ ಆಡಳಿತಾಧಿಕಾರಿಗಳು ಮತ್ತು ಮಾಲೀಕರು ಅನುಸರಿಸಲು 10 ಅಂಶಗಳ ಆದೇಶವನ್ನು ಹೊರಡಿಸಿದೆ. ಅನಾಮಧೇಯ ತಂಡದ ಮಾಲೀಕರು ಮಾಡಿರುವ ಈ ಉಲ್ಲಂಘನೆಯು ಕೇವಲ ಶಿಸ್ತಿನ ಕ್ರಮವಲ್ಲ, ಬದಲಿಗೆ ಇದು ಭ್ರಷ್ಟಾಚಾರ ವಿರೋಧಿ ನಿಯಮಗಳಾಗಿವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಪಂದ್ಯಗಳ ಸಮಯದಲ್ಲಿ ಕೆಲವು ಐಪಿಎಲ್ ಫ್ರಾಂಚೈಸಿ ಮಾಲೀಕರು ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರವೇಶ ಶಿಷ್ಟಾಚಾರವನ್ನು ಪಾಲಿಸಿಲ್ಲ ಎಂದು ಬಿಸಿಸಿಐ ಕಳವಳ ವ್ಯಕ್ತಪಡಿಸಿದೆ.
ನಿರ್ದಿಷ್ಟವಾಗಿ ಐಪಿಎಲ್ ಫ್ರಾಂಚೈಸಿ ಮಾಲೀಕರು ಪಂದ್ಯ ನಡೆಯುವಂತಹ ಸಂದರ್ಭದಲ್ಲಿ ಆಟಗಾರರೊಂದಿಗೆ ಸಂವಹನ ನಡೆಸಲು, ಸಮೀಪಿಸಲು, ತಬ್ಬಿಕೊಳ್ಳಲು ಅಥವಾ ದೈಹಿಕವಾಗಿ ಸಂವಹನ ನಡೆಸಲು ಪ್ರಯತ್ನಿಸುತ್ತಿರುವ ನಿದರ್ಶನಗಳನ್ನು ಗಮನಿಸಲಾಗಿದ್ದು, ಅಂತಹ ನಡವಳಿಕೆಗಳು ಎಷ್ಟೇ ಸದುದ್ದೇಶದಿಂದ ಕೂಡಿದ್ದರೂ ಶಿಷ್ಟಾಚಾರವಾಗಿರುವುದರಿಂದ ಇದನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದು ತಿಳಿಸಿದೆ (ಏಜೆನ್ಸೀಸ್​).