ಟೀಮ್ ಇಂಡಿಯಾ ದಿಗ್ಗಜ ವಿರಾಟ್​ ಕೊಹ್ಲಿ  
ಕ್ರಿಕೆಟ್

ಆ ವಿಷಯ ಯಾರಿಗೂ ಗೊತ್ತಿರಲಿಲ್ಲ! 2 ಗಂಟೆಯಲ್ಲೇ​ ವೈರಲ್​ ಫೋಟೋ ನೋಡಿ ವಿರಾಟ್​ ಕೊಹ್ಲಿ ಶಾಕ್

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ವಿರಾಟ್​ ಕೊಹ್ಲಿ ಸಜ್ಜು
  • ಲಂಡನ್​ನಲ್ಲಿ ವಿರಾಟ್​ ಭೇಟಿಯಾದ ಇಂಗ್ಲೆಂಡ್​ ಆಟಗಾರನ ಹೇಳಿಕೆ ವೈರಲ್​
  • ತಮ್ಮಿಬ್ಬರ ರಹಸ್ಯ ಭೇಟಿಯ ಫೋಟೋ ನೋಡಿ ಕೊಹ್ಲಿಯೇ ಶಾಕ್​
Virat Kohli: ಟೀಮ್ ಇಂಡಿಯಾ ದಿಗ್ಗಜ, ದಾಖಲೆಗಳ ಸರದಾರ, ಸ್ಟಾರ್​ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಮ್‌ಬ್ಯಾಕ್​ ಮಾಡಲು ಸದ್ಯ ಮೈದಾನದಲ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ, ತಮ್ಮ ಸಹ ಆರ್​ಸಿಬಿ ಆಟಗಾರ ಮತ್ತು ಇಂಗ್ಲೆಂಡ್​ ತಂಡದ ಕ್ರಿಕೆಟಿಗ ಜೋರ್ಡಾನ್ ಕಾಕ್ಸ್ ಭೇಟಿಯ ಫೋಟೋ ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗಿರುವುದು ವಿರಾಟ್​ರನ್ನೇ ಅಚ್ಚರಿಗೊಳಿಸಿದೆ.
ಈ ವರ್ಷ ಆರ್​ಸಿಬಿಯ ಐಪಿಎಲ್​ ಟ್ರೋಫಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ ವಿರಾಟ್​ ಕೊಹ್ಲಿ, ​600ಕ್ಕೂ ಅಧಿಕ ರನ್ ಗಳಿಸಿ, ತಂಡವನ್ನು ಸತತ ಎರಡನೇ ಬಾರಿ ಟ್ರೋಫಿ ಎತ್ತಿಹಿಡಿಯಲು ಸಹಾಯ ಮಾಡಿದರು. ಇದೇ ವೇಳೆ, ಹ್ಯಾರ್ಮ್​ಸ್ಟ್ರಿಂಗ್​ ಇಂಜುರಿಯಿಂದ ಬಳಲುತ್ತಿದ್ದ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದರು. ಆದಾಗ್ಯೂ, ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಜು.14ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್​ ಮೈದಾನಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಈ ಏಕದಿನ ಸರಣಿಯ ಆರಂಭಕ್ಕೂ ಮುನ್ನ, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋರ್ಡಾನ್ ಕಾಕ್ಸ್ ಲಂಡನ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಮುಖಾಮುಖಿಯಾಗಿ ಭೇಟಿ ಮಾಡಿ, ಕೆಲ ಸಮಯ ಅವರೊಂದಿಗೆ ಸಂಭಾಷಣೆ ನಡೆಸಿದರು. ಮಾಧ್ಯಮ ಮತ್ತು ಜನರ ಕಣ್ಣಿಗೆ ಬೀಳದಂತೆ ಕಳೆದ ತಿಂಗಳಲ್ಲಿ ಕೊಹ್ಲಿಯನ್ನು ಭೇಟಿಯಾದ ಕಾಕ್ಸ್, ಅಲ್ಲಿಂದ ಹೊರಬಂದ 2 ಗಂಟೆಗೆ ತಮ್ಮಿಬ್ಬರ ಭೇಟಿಯ ಫೋಟೋ ವೈರಲ್​ ಆಗಿರುವುದನ್ನು ಕಂಡು ಅಚ್ಚರಿ ಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಅಸಲಿಗೆ, ಇದನ್ನು ಮೊದಲು ನೋಡಿದ್ದೇ ವಿರಾಟ್​ ಎಂದಿದ್ದಾರೆ.
ಲಂಡನ್ ಭೇಟಿಯ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ ಕಾಕ್ಸ್, ನಾವಿಬ್ಬರೂ ಭೇಟಿಯನ್ನು ಬಹಳ ರಹಸ್ಯವಾಗಿಡಲು ಪ್ರಯತ್ನಿಸಿದರೂ, ಯಾರೋ ನಮ್ಮಿಬ್ಬರ ಫೋಟೋಗಳನ್ನು ಕ್ಲಿಕ್ಕಿಸಿ, ಅದನ್ನು 2 ಗಂಟೆಯೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ವಿರಾಟ್‌ರ ಅರಿವಿಗೆ ಬಾರದಂತೆ ಕೆಲವರು ಅವರನ್ನು ಹಿಂಬಾಲಿಸಿದ್ದು ನಿಜಕ್ಕೂ ಬೇಸರದ ಸಂಗತಿ. ನಾವು ಲಂಡನ್‌ನ ಬೀದಿಯಲ್ಲಿ ಕುಳಿತಿದ್ದಾಗ, ನೂರಾರು ಜನರು ನಮ್ಮ ಮುಂದೆಯೇ ಓಡಾಡುತ್ತಿದ್ದರು. ಆದರೆ, ಯಾರೊಬ್ಬರು ಕೂಡ ತಡೆದು ನಿಲ್ಲಿಸಲಿಲ್ಲ ಅಥವಾ ಮಾತನಾಡಿಸಲು ಮುಂದಾಗಲಿಲ್ಲ. ಹೀಗಿರುವಾಗ, ವೈರಲ್​ ಹೇಗಾಯ್ತು ಎಂಬುದೇ ಆಶ್ಚರ್ಯ ಎಂದರು.
ನಾನು ಭೇಟಿಯಾಗಿ ಎರಡು ಗಂಟೆಗಳ ಬಳಿಕ ಕೊಹ್ಲಿ ನನಗೆ ಒಂದು ಮೆಜೇಜ್​ ಕಳುಹಿಸಿದರು. ನೀವು ಈ ಫೋಟೋಗಳನ್ನು ನೋಡಿದ್ರಾ ಅಂತ ಕೇಳಿದರು. ಅದನ್ನು ನೋಡಿ ನನಗೂ ಆಶ್ಚರ್ಯವಾಯಿತು. ಇದು ಹೇಗೆ ಸಾಧ್ಯ? ಎಂದು ಒಂದೆರೆಡು ನಿಮಿಷ ಯೋಚಿಸಿದೆ. ವಿರಾಟ್ ಕೊಹ್ಲಿ ಎಲ್ಲರಂತೆ ಸಿಂಪಲ್​ ಲೈಫ್​ ನಡೆಸಲು ಮತ್ತು ಅದನ್ನು ಆನಂದಿಸಲು ಬಯಸುತ್ತಾರೆ. ಆದರೆ, ದುರದೃಷ್ಟವಶಾತ್, ಅದು ಅವರಿಂದ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).