ವಿರಾಟ್​ ಕೊಹ್ಲಿ ಶತಕದಾಟ 
ಕ್ರಿಕೆಟ್

ರಾಂಚಿಯಲ್ಲಿ 'ವಿರಾಟ' ರೂಪ! 'ಕಿಂಗ್'​ ಕೊಹ್ಲಿ ಭರ್ಜರಿ ಶತಕ, ಮಾಸ್ಟರ್​ಬ್ಲಾಸ್ಟರ್​ ದಾಖಲೆ ಉಡೀಸ್​ | Virat Kohli

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ
  • ದಿಗ್ಗಜ ಬ್ಯಾಟರ್​ ದಾಖಲೆ ಮುರಿಯಲು ಒಂದೇ ಒಂದು ಶತಕ ಬೇಕಿತ್ತು
  • ಕಡೆಗೂ ಭರ್ಜರಿ ಶತಕದಾಟ ತೋರಿ ಸಚಿನ್ ದಾಖಲೆ ಉಡೀಸ್​
ಜಾರ್ಖಂಡ್​: ಮೂರು ಪಂದ್ಯಗಳ ಏಕದಿನ ಸರಣಿಯ ಭಾಗವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಇಂದು (ನ.30) ರಾಂಚಿಯಲ್ಲಿ ನಡೆಯುತ್ತಿದ್ದು, ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ.   
ಟೆಸ್ಟ್ ಸರಣಿಯಲ್ಲಿ ಆದ ಕ್ಲೀನ್​ ಸ್ವೀಪ್​ ಮುಖಭಂಗಕ್ಕೆ ಸೇಡು ತೀರಿಸಿಕೊಳ್ಳಲು ಉತ್ಸಾಹದಲ್ಲಿ ಏಕದಿನ ಅಖಾಡಕ್ಕಿಳಿದ ಭಾರತ ತಂಡಕ್ಕೆ ವಿರಾಟ್​ ಕೊಹ್ಲಿ ಅವರ ಶತಕದಾಟ (133* ರನ್​, 115 ಎಸೆತ)ಕ್ರಿಕೆಟ್​ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ. ಕೇವಲ 40 ಓವರ್​ಗೆ ತಂಡದ ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 'ರೋಕೊ' ಜೋಡಿಯ ಪೈಕಿ ವಿರಾಟ್​ ಶತಕ ಬಾರಿಸಿದ್ದು, ಇದೀಗ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ. 
ವಿರಾಟ್ ಕೊಹ್ಲಿ ಅಪರೂಪದ ದಾಖಲೆಗೆ ಸಾಕ್ಷಿಯಾಗಲು ಒಂದೇ ಒಂದು ಹೆಜ್ಜೆ ದೂರದಲ್ಲಿದ್ದರು. ಇದು ಅವರ ಒಂದು ಶತಕದ ಮೇಲೆ ನಿಂತಿತು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಅವರಿಂದ ಒಂದೇ ಒಂದು ಶತಕದ ಅಗತ್ಯವಿತ್ತು. ಕಡೆಗೂ ಮೊದಲ ಪಂದ್ಯದಲ್ಲಿಯೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ 'ಕ್ರಿಕೆಟ್​ ದೇವರು' ಎಂದೇ ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್ ಅವರ​ ದಾಖಲೆಯನ್ನು ಇದೀಗ ಕೊಹ್ಲಿ ಮುರಿದಿದ್ದಾರೆ. 
ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 200 ಪಂದ್ಯಗಳನ್ನಾಡಿದ್ದು, 53.8 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಕಗಳು ಸೇರಿವೆ. ಇನ್ನು ವಿರಾಟ್ ಬಗ್ಗೆ ಹೇಳುವುದಾದರೆ, ಇದುವರೆಗೆ 306 ಏಕದಿನ ಪಂದ್ಯಗಳನ್ನಾಡಿದ್ದು​, 294 ಇನ್ನಿಂಗ್ಸ್‌ಗಳಲ್ಲಿ 57.7 ಸರಾಸರಿಯಲ್ಲಿ 14,255* ರನ್ ಗಳಿಸಿದ್ದಾರೆ. ಇದರಲ್ಲಿ 52 ಶತಕ ಮತ್ತು 76 ಅರ್ಧಶತಕಗಳು ಸೇರಿವೆ.

ಹರಿಣರ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ಈಗ ವಿರಾಟ್​ ಕೊಹ್ಲಿ ಹೆಸರಿನಲ್ಲಿದೆ. ಈ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಡೇವಿಡ್ ವಾರ್ನರ್ ಅವರನ್ನು ವಿರಾಟ್​ ಹಿಂದಿಕ್ಕಿದ್ದಾರೆ. ಇನ್ನು 2025ರಲ್ಲಿ ಐಪಿಎಲ್​ ನಂತರ ತವರಿನಲ್ಲಿ ಇದೇ ಮೊದಲ ಬಾರಿಗೆ ಆಡಿದ ಕೊಹ್ಲಿ, ರಾಂಚಿ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಆರನೇ ಶತಕ ದಾಖಲಿಸಿದರು. 

ಟೀಮ್​ ಇಂಡಿಯಾ ಬ್ಯಾಟಿಂಗ್ ವಿವರ (ಪ್ರಸ್ತುತ)

ಯಶಸ್ವಿ ಜೈಸ್ವಾಲ್​ (18 ರನ್​, 16 ಎಸೆತ)
ರೋಹಿತ್ ಶರ್ಮ (57 ರನ್​, 51 ಎಸೆತ)
ರುತುರಾಜ್​ ಗಾಯಕ್ವಾಡ್​ (8 ರನ್​, 14 ಎಸೆತ)
ವಿರಾಟ್​ ಕೊಹ್ಲಿ (135 ರನ್​, 120 ಎಸೆತ)
ವಾಷಿಂಗ್ಟನ್​ ಸುಂದರ್​ (13 ರನ್​, 19 ಎಸೆತ)
ಕೆಎಲ್​ ರಾಹುಲ್​ (60 ರನ್​, 56 ಎಸೆತ)