(ಚಿತ್ರ X) 
ಕ್ರಿಕೆಟ್

ಕಾಂಬ್ಳಿ ಸ್ಥಿತಿ ಚಿಂತಾಜನಕವೇ? ವೈರಲ್ ಸುದ್ದಿಗಳ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಪತ್ನಿ ಆಂಡ್ರಿಯಾ ಹೆವಿಟ್! Vinod Kambli

Vinod Kambli: ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ಎನಿಸಿಕೊಂಡಿದ್ದ ವಿನೋದ್ ಕಾಂಬ್ಳಿ (54) ಸದ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಾಂಬ್ಳಿ ಬಾಲ್ಯದ ಸ್ನೇಹಿತ ಮಾರ್ಕಸ್ ಕೌಟೊ ಹಲವಾರು ಮಾಜಿ ಕ್ರಿಕೆಟಿಗರು, ಸಹಪಾಠಿಗಳು ಮತ್ತು ಹಿತೈಷಿಗಳನ್ನು ಒಂದೇ ವೇದಿಕೆಗೆ ತಂದು ಕಾಂಬ್ಳಿ ಸಹಾಯಕ್ಕೆ ಮುಂಚೂಣಿಯಲ್ಲಿ ನಿಂತಿದ್ದಾರೆ.
ಈ ಬೆನ್ನಲ್ಲೇ ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ಹರಡುತ್ತಿದ್ದ ಆತಂಕಕಾರಿ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಪತ್ನಿ ಆಂಡ್ರಿಯಾ ಹೆವಿಟ್, ಅಭಿಮಾನಿಗಳೊಂದಿಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಪತ್ನಿ ಹೇಳಿದ್ದೇನು?

ದೇವರ ದಯೆಯಿಂದ, ವಿನೋದ್ ಚೆನ್ನಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಡುತ್ತಿರುವ ವದಂತಿಗಳು ಸತ್ಯಕ್ಕೆ ದೂರವಾಗಿವೆ. ಆರ್ಥಿಕವಾಗಿ ಕಷ್ಟವನ್ನು ಅನುಭವಿಸುತ್ತಿದ್ದರೂ ಧೈರ್ಯದಿಂದ ಮುನ್ನುಗ್ಗುತ್ತಿದ್ದೇವೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.

ಕಾಂಬ್ಳಿಯವರ ಆರೋಗ್ಯದ ಬಗ್ಗೆ ಮಾರ್ಕಸ್ ಕೌಟೊ ಹೇಳಿದ್ದೇನು?

ಕಾಂಬ್ಳಿಗೆ ಸಹಾಯ ಮಾಡುವ ಭರವಸೆಯಲ್ಲಿ ವಾಟ್ಸಾಪ್​ ಗ್ರೂಪ್​ವೊಂದನ್ನು ರಚಿಸಿದ್ದೇನೆ. ಅಲ್ಲಿ ಹೆಸರುಗಳನ್ನು ಹೇಳದೆಯೇ ಬಹಳಷ್ಟು ಜನರು ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಆತನ ಸ್ಮರಣಶಕ್ತಿ ಚೆನ್ನಾಗಿಲ್ಲ, ಯಾವುದು ಸರಿಯಾಗಿ ನೆನಪಿಲ್ಲ. ಯಾವುದಾದರೂ ವಿಷಯದ ಬಗ್ಗೆ ನೆನಪಿಸಿದಾಗ ಮಾತ್ರ ನೆನಪಾಗುತ್ತದೆ ಇಲ್ಲದಿದ್ದರೆ ಅವರಿಗೆ ಕಷ್ಟವಾಗುತ್ತದೆ ಎಂದು ಸುದ್ದಿ ಮೂಲಗಳಿಗೆ ತಿಳಿಸಿದ್ದರು.
ಅವರ ಮುಂದಿನ ಹಂತವು ಮೆದುಳು ಪಾಶ್ವವಾಯು ಎಂದು ವೈದ್ಯರು ತಿಳಿಸುತ್ತಾರೆ. ಅವರು ಕುಡಿಯುವುದನ್ನು ನಿಲ್ಲಿಸಿದ್ದಾರೆ. ಆದರೆ, ಮನೆಯಿಂದ ಹೊರಗಡೆ ಹೋದಾಗ ಯಾರಿಗಾದರೂ ಧೂಮಪಾನ ಮಾಡಲು ಸಹಾಯ ಮಾಡಿ ಎಂದು ಕೇಳುತ್ತಾರೆ ಎಂದು ಕೌಟೊ ತಿಳಿಸಿದ್ದಾರೆ (ಏಜೆನ್ಸೀಸ್).