ದಳಪತಿ ವಿಜಯ್ ಸ್ಟೈಲ್ ನೆನಪಿಸಿದ ವೆಂಕಟೇಶ್ ಅಯ್ಯರ್
RCB vs PBKS:
40 ಎಸೆತಗಳಲ್ಲಿ 73 ರನ್ ಬಾರಿಸಿದ ವೆಂಕಟೇಶ್ ಅಯ್ಯರ್, 8 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಬಾರಿಸಿದರು. ತಂಡದ ಪರ ಅರ್ಧಶತಕ ಬಾರಿಸುತ್ತಿದ್ದಂತೆ ಎರಡೂ ಕೈಯನ್ನು ಮೇಲಕ್ಕೆತ್ತಿ ಸಂಭ್ರಮಿಸಿದ ಅಯ್ಯರ್, ಫ್ಯಾನ್ಸ್ಗಳಿಗೆ ತಾವು ಯಾರ ಸ್ಟೈಲ್ ಅನುಕರಿಸಿದೆ ಹೇಳಿ? ಎಂಬ ಸಂದೇಶವನ್ನು ನೀಡಿದರು. ಇದನ್ನು ತಕ್ಷಣಕ್ಕೆ ಅರಿತ ಆರ್ಸಿಬಿ ಅಭಿಮಾನಿಗಳು ತಮಿಳುನಾಡಿನ ನೂತನ ಸಿಎಂರನ್ನು ನೆನಪಿಸಿಕೊಂಡರು.
ಹೌದು. ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರ ಮೆರ್ಸಲ್ ಪೋಸ್ ಅನ್ನು ವೆಂಕಟೇಶ್ ಅಯ್ಯರ್ ಅರ್ಧಶತಕ ಬಾರಿಸಿದಾಗ ತೋರಿಸಿದರು. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗಿದೆ.
ಇನ್ನು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್, ರಜತ್ ಪಾಟೀದಾರ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಹೇಳಿತು. 20 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ ಆರ್ಸಿಬಿ 210 ರನ್ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿರುವ ಪಂಜಾಬ್ ಕಿಂಗ್ಸ್ಗೆ ಆರಂಭಿಕ ಬ್ಯಾಟರ್ಗಳು ಕೈಕೊಟ್ಟಿದ್ದೇ ಆದರೂ ಶಶಾಂಕ್ ಸಿಂಗ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಜತೆಯಾಟದಿಂದ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಇಂದಿನ ಪಂದ್ಯ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.