ವೈಭವ್ ಸೂರ್ಯವಂಶಿ ಜಗಳ ಮಾಡಿಕೊಂಡ ದೃಶ್ಯ 
ಕ್ರಿಕೆಟ್

ಫೈನಲ್​ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬಿಗ್​​ ಟಾರ್ಗೆಟ್? ಶ್ರೀಲಂಕಾ ಎ ತಂಡದ ಕ್ಯಾಪ್ಟನ್ ಹೇಳಿಕೆ ವೈರಲ್​

ಪ್ರಮುಖ ಮುಖ್ಯಾಂಶಗಳು

  • ನಾಳೆ (ಜೂ.21) ಶ್ರೀಲಂಕಾ ಎ- ಭಾರತ ಎ ನಡುವೆ ತ್ರಿಕೋನ ಸರಣಿಯ ಫೈನಲ್​ ಪಂದ್ಯ
  • ಈ ಪಂದ್ಯದಲ್ಲಿ ಜಗಳ ಮಾಡಿಕೊಂಡಿದ್ದ ವೈಭವ್​ ಸೂರ್ಯವಂಶಿ ಬಿಗ್ ಟಾರ್ಗೆಟ್​
Vaibhav Sooryavanshi: ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಅಂತಿಮ ಪಂದ್ಯ ನಾಳೆ (ಜೂ.21) ನಡೆಯಲಿದ್ದು, ಕ್ರಿಕೆಟ್​ ಪ್ರಿಯರ ಕಣ್ಣು 15 ವರ್ಷದ ಸ್ಟಾರ್​ ಬ್ಯಾಟರ್​ ವೈಭವ್ ಸೂರ್ಯವಂಶಿ ಮೇಲಿದೆ. ಈ ಫೈನಲ್​ ಹಣಾಹಣಿಯಲ್ಲಿ ಮತ್ತೊಮ್ಮೆ ಶ್ರೀಲಂಕನ್ ಆಟಗಾರರು ವೈಭವ್​ರನ್ನು ಟಾರ್ಗೆಟ್​ ಮಾಡುವ ನಿರೀಕ್ಷೆಗಳು ಹೆಚ್ಚಿದೆ.
ಈ ಫೈನಲ್‌ ಪಂದ್ಯಕ್ಕೂ ಮೊದಲು ಮಾತನಾಡಿರುವ ಶ್ರೀಲಂಕಾ ಕ್ಯಾಪ್ಟನ್​ ಸಹನ್ ಅರಾಚಿ, ಕೆಲವು ಕುತೂಹಲ ಕೆರಳಿಸುವ ಹೇಳಿಕೆಗಳನ್ನೇ ಹಂಚಿಕೊಂಡಿದ್ದಾರೆ. ಟೀಮ್​ ಇಂಡಿಯಾದ ಯುವ ಸೆನ್ಸೇಷನಲ್​ ಬ್ಯಾಟರ್​ ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿದ ನಾಯಕ, ಆತ ನಮ್ಮ ಟಾರ್ಗೆಟ್ ಅಲ್ಲವೇ ಅಲ್ಲ. ಮೊದಲಿಗೆ ನಮ್ಮ ಹುಡುಗರು ಯಾರನ್ನು ಗುರಿಯಾಗಿಸಿಕೊಂಡಿಲ್ಲ​ ಎಂದು ಓಪನ್​ ಆಗಿ ಹೇಳಿದರು.
ಅಫ್ಘಾನಿಸ್ತಾನ ಎ ವಿರುದ್ಧ 103 ರನ್‌ಗಳ ಭರ್ಜರಿ ಗೆಲುವಿನ ನಂತರ ಶ್ರೀಲಂಕಾ ಎ ತಂಡವು ಫೈನಲ್​ಗೆ ಲಗ್ಗೆಯಿಟ್ಟಿತು. ಇದರ ಬೆನ್ನಲ್ಲೇ ಮಾತನಾಡಿದ ಕ್ಯಾಪ್ಟನ್​, "ನಮ್ಮ ಆಟಗಾರರು ಯಾರನ್ನೂ ಟಾರ್ಗೆಟ್​ ಮಾಡಿಲ್ಲ. ನಾವು ನಮ್ಮ ಆಟವನಷ್ಟೇ ಎಂಜಾಯ್​ ಮಾಡುತ್ತಿದ್ದೀವಿ. ಸೂಪರ್ ಓವರ್‌ನಂತಹ ರೋಮಾಂಚಕ ಪಂದ್ಯಗಳಲ್ಲಿ ಭಾವನೆಗಳು ಹೊರಬರುವುದು ತೀರ ಸಹಜ. ನಾವು ಫೈನಲ್‌ನತ್ತ ಗಮನ ಹರಿಸಿದ್ದೇವೆ. ಬ್ಯಾಟಿಂಗ್​ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಅದೇ ಬೌಲಿಂಗ್​ನಲ್ಲಿ ವೇಗಿಗಳು ಮತ್ತು ಸ್ಪಿನ್ನರ್​ಗಳು ಉತ್ತಮವಾಗಿದ್ದಾರೆ. ನಮ್ಮ ತಂಡದ ಒಂದೊಳ್ಳೆ ಶೇಪ್​ನಲ್ಲಿದೆ" ಎಂದರು,(ಏಜೆನ್ಸೀಸ್).

ಏನದು ವೈಭವ್​ ಜಗಳ?

ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತೀಚೆಗಷ್ಟೇ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಆಟಗಾರ ಮತ್ತು ವೈಭವ್ ಮಧ್ಯೆ ಮಾತಿಗೆ ಮಾತು ಬೆಳೆದು, ಪರಸ್ಪರ ತಳ್ಳಾಟ ನಡೆಯಿತು. ಇದು ದೊಡ್ಡ ವಿವಾದಕ್ಕೂ ಕಾರಣವಾಯಿತು. 'ವಂಡರ್​ ಕಿಡ್​' ವೈಭವ್​ರದ್ದೇ ಇಲ್ಲಿ ತಪ್ಪು ಎಂದಿರುವ ಅನೇಕರು, ಮೈದಾನದಲ್ಲಿ ಎದುರಾಳಿ ತಂಡದ ಆಟಗಾರನನ್ನು ನೂಕಿದ್ದು ಸರಿಯಲ್ಲ. ಕ್ರಿಕೆಟ್​ನಲ್ಲಿ ಇಂತಹ ವರ್ತನೆಗಳು ಮೂಲ ನಿಯಮವನ್ನು ಉಲ್ಲಂಘಿಸಿದಂತೆ. ಹೀಗಾಗಿ, ವೈಭವ್ ವಿರುದ್ಧ ಏನು ಕ್ರಮ ಜರುಗಿಸಲಿದೆ? ಆತನನ್ನು ಮುಂದಿನ ಒಂದು ಮ್ಯಾಚ್​ನಿಂದ ಬ್ಯಾನ್​ ಮಾಡಲಿದ್ಯಾ ಅಥವಾ ಡಿಮೆರಿಟ್​ ಪಾಯಿಂಟ್​, ದಂಡ ವಿಧಿಸಲಿದೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟರು.