ಆಟಕ್ಕುಂಟು ಲೆಕ್ಕಕ್ಕಿಲ್ಲ... ಮೊದಲು ವೈಭವ್​ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ: ಆಕಾಶ್​ ಚೋಪ್ರಾ ಅಚ್ಚರಿ ಹೇಳಿಕೆ | Vaibhav Sooryavanshi  
ಕ್ರಿಕೆಟ್

ಆಟಕ್ಕುಂಟು ಲೆಕ್ಕಕ್ಕಿಲ್ಲ... ಮೊದಲು ವೈಭವ್​ ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ: ಆಕಾಶ್​ ಚೋಪ್ರಾ ಅಚ್ಚರಿ ಹೇಳಿಕೆ | Vaibhav Sooryavanshi

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಒಂದೇ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. ವೈಭವ್​ಗೆ ಪ್ಲೇಯಿಂಗ್​ ಎಲೆವನ್​ನಲ್ಲಿ ಸ್ಥಾನ ಸಿಗಬೇಕಾದರೆ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರು ಹೊರಗುಳಿಯಬೇಕು.

Vaibhav Sooryavanshi: ಇತ್ತೀಚೆಗಷ್ಟೇ ಮುಕ್ತಾಯಗೊಂಡ ವೆಸ್ಟ್ ಇಂಡೀಸ್​ ವಿರುದ್ಧದ ಟಿ20 ಸರಣಿಯ ತಂಡದಲ್ಲಿ ಸ್ಥಾನ ಪಡೆದಿದ್ದೇ ಆದರೂ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿಗೆ ಸಿಗದಿರುವುದು ಸದ್ಯ ಮಾಜಿ ಭಾರತ ತಂಡದ ಕ್ರಿಕೆಟಿಗ ಆಕಾಶ್​ ಚೋಪ್ರಾರನ್ನು ಅಕ್ಷರಶಃ ಕೆರಳಿಸಿದೆ. ಈ ಕುರಿತಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡಿರುವ ಅವರು, ವೈಭವ್​ರನ್ನು ತಂಡದಿಂದಲೇ ಕಿತ್ತುಬಿಸಾಡಿ ಎಂದು ಬೇಸರ ಹೊರಹಾಕಿದ್ದಾರೆ.

ಮೂವರು ಟಾಪ್​ ಆರ್ಡರ್​

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಒಂದೇ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಗಲಿಲ್ಲ. ವೈಭವ್​ಗೆ ಪ್ಲೇಯಿಂಗ್​ ಎಲೆವನ್​ನಲ್ಲಿ ಸ್ಥಾನ ಸಿಗಬೇಕಾದರೆ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರು ಹೊರಗುಳಿಯಬೇಕು. ಆದರೆ, ಈ ಮೂವರು ಆಟಗಾರರೂ ಕಳೆದ ಪಂದ್ಯಗಳಲ್ಲಿ ಉತ್ತಮ ಫಾರ್ಮ್​ನಲ್ಲಿ ಇರುವುದರಿಂದ ಸೂರ್ಯವಂಶಿಗೆ ಸ್ಥಾನ ಬಹುತೇಕ ಅನುಮಾನ ಎಂದು ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಹೇಳಿದ್ದಾರೆ.

ಸ್ಥಾನ ಸಿಕ್ಕರೂ ಅವಕಾಶವಿಲ್ಲ

ಆರಂಭಿಕರಾದ ಸಂಜು, ಅಭಿಷೇಕ್​ ಮತ್ತು ಇಶಾನ್ ಕಿಶನ್​ರನ್ನು​ ತಂಡದಿಂದ ಹೊರಗಿಡುವುದು ಅಷ್ಟು ಸುಲಭವಿಲ್ಲ. ವೈಭವ್‌ಗೆ ಅವಕಾಶ ಸಿಗದಿರಲು ಮುಖ್ಯ ಕಾರಣವೆಂದರೆ ತಂಡದಲ್ಲಿ ಅವರಿಗೆ ಸೂಕ್ತ ಸ್ಥಾನವಿಲ್ಲದಿರುವುದು. ಸಂಜು, ಅಭಿಷೇಕ್ ಮತ್ತು ಇಶಾನ್ ಪೈಕಿ ಒಬ್ಬರು ಹೊರಗುಳಿದರೆ ಮಾತ್ರ ವೈಭವ್‌ಗೆ ಅವಕಾಶ ಸಿಗಲು ಸಾಧ್ಯ. ಇಲ್ಲಿ, 'ರೊಟೇಷನ್ ಸಿಸ್ಟಮ್' ಮೂಲಕ ಈ ನಾಲ್ವರಿಗೂ ಅವಕಾಶ ಕಲ್ಪಿಸಬಹುದು. ಆದರೆ, ಅದು ಮ್ಯಾನೇಜ್​ಮೆಂಟ್​ಗೆ ಬಿಟ್ಟದ್ದು ಎಂದು ಸಲಹೆ ನೀಡಿದ್ದಾರೆ.

ವೈಭವ್‌ರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡು, ಪಂದ್ಯದ ಸಮಯದಲ್ಲಿ ಸುಮ್ಮನೆ ಬೆಂಚ್​ನಲ್ಲಿ ಕೂರಿಸುವ ಬದಲು ರಣಜಿ ಟ್ರೋಫಿಯಲ್ಲಿ ಆಡಲು ಅವಕಾಶ ನೀಡುವುದು ಉತ್ತಮ. ಪಂದ್ಯಗಳನ್ನು ಆಡಿಸದೆ ಕೇವಲ ಬೆಂಚ್‌ಗೆ ಸೀಮಿತಗೊಳಿಸುವುದರಿಂದ ಆಟಗಾರನಿಗೆ ಯಾವುದೇ ಪ್ರಯೋಜನವಿಲ್ಲ. ವೈಭವ್​ಗೆ ತಂಡದಲ್ಲಿ ಸ್ಥಾನ ಕೊಡುವುದಕ್ಕಿಂತ ಆಡಿಸಬೇಕು. ನಿಮ್ಮಿಂದ ಆಡಿಸಲು ಸಾದ್ಯವಿಲ್ಲ ಎಂದಾದರೆ, ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ. ಇದನ್ನು ಬಿಟ್ಟರೆ ಬೇರೇನೂ ದಾರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).