- ಇಂದು ಇಂಗ್ಲೆಂಡ್ ಸರಣಿಯ ಎರಡನೇ ಟಿ20 ಪಂದ್ಯಕ್ಕೆ ಭಾರತ ಸಜ್ಜು
- ಎರಡನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಎಂಟ್ರಿ ಬಹುತೇಕ ಖಚಿತ
- ವೈಭವ್ ಸೂರ್ಯವಂಶಿ ಹಂಚಿಕೊಂಡ ಪೋಸ್ಟ್ ಹೇಳುತ್ತಿದೆ ಎಂಟ್ರಿ ಕಥೆ
Vaibhav Sooryavanshi: ಪ್ರಸಕ್ತ ನಡೆಯುತ್ತಿರುವ ಐದು ಟಿ20 ಪಂದ್ಯಗಳ ಇಂಗ್ಲೆಂಡ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕಣಕ್ಕಿಳಿಯುವುದು 100ಕ್ಕೆ 100 ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಅದಕ್ಕೆ ಕಾರಣವೇ, ವಂಡರ್ ಕಿಡ್ ಹಾಕಿಕೊಂಡಿರುವ ಹೊಸ ಪೋಸ್ಟ್.
ಐರ್ಲೆಂಡ್ ಸರಣಿಯ ಎರಡು ಟಿ20 ಪಂದ್ಯಗಳಿಂದಲೂ ವೈಭವ್ರನ್ನು ಕೈಬಿಟ್ಟ ಮ್ಯಾನೇಜ್ಮೆಂಟ್ಗೆ ಆಗಿದ್ದು ಭಾರಿ ಮುಖಭಂಗ. ಈಗ ಇಂಗ್ಲೆಂಡ್ ಸರಣಿಯನ್ನು ಆಡುತ್ತಿರುವ ಟೀಮ್ ಇಂಡಿಯಾ, ಇಲ್ಲಿಯೂ ಸೂರ್ಯವಂಶಿಯನ್ನು ತಂಡದಿಂದ ಹೊರಗಿಟ್ಟಿದೆ. ಇದು ಅಪಾರ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಐರಿಶ್ ಎದುರು ಕ್ಲೀನ್ಸ್ವೀಪ್ ಆದಂತೆ ಇಂಗ್ಲೆಂಡ್ನಲ್ಲಿ ಆಗಬಾರದು ಎಂದರೆ, ತಂಡದಲ್ಲಿ ವೈಭವ್ಗೆ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿಯಲಾಗಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಸತತವಾಗಿ ಫ್ಲಾಪ್ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ರನ್ನು ಹೊರಗಿಟ್ಟು, ಅವರ ಸ್ಥಾನಕ್ಕೆ ವೈಭವ್ಗೆ ಅವಕಾಶ ಕೊಡಿ ಎಂದರೂ ಗೌತಮ್ ಗಂಭೀರ್ ನೇತೃತ್ವದ ಮ್ಯಾನೇಜ್ಮೆಂಟ್ ಇದಕ್ಯಾಕೋ ಮನಸ್ಸು ಮಾಡುತ್ತಿಲ್ಲ. ಇದರಿಂದ ತೀವ್ರ ಸಿಡಿಮಿಡಿಗೊಂಡಿರುವ ಕ್ರಿಕೆಟ್ ಅಭಿಮಾನಿಗಳಿಗೆ ಈಗ ವೈಭವ್ ಹಾಕಿರುವ ಪೋಸ್ಟ್ವೊಂದು ಆಂಗ್ಲರ ಮಣ್ಣಿನಲ್ಲಿ ಅವರ ಎಂಟ್ರಿ ಖಚಿತ ಎಂಬುದನ್ನು ಪರೋಕ್ಷವಾಗಿ ಹೇಳಿದೆ.
'ಹೊಸ ಅಧ್ಯಾಯ' ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ವೈಭವ್, ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿದೆ ಎಂಬುದನ್ನು ಒತ್ತಿ ಹೇಳಿದಂತಿದೆ. ಆದರಿದು ಎಷ್ಟು ನಿಜ ಅನ್ನೋದನ್ನು ಭಾರತ ತಂಡ ಹೊರಬಿಡಲಿರುವ ಪ್ಲೇಯಿಂಗ್ 11 ನೋಡಿಯೇ ಖಚಿತಪಡಿಸಿಕೊಳ್ಳಬೇಕಿದೆ. ಆದರೆ, ಕ್ರಿಕೆಟ್ ಪ್ರಿಯರು ಬಯಸುತ್ತಿರುವುದು ಮಾತ್ರ ಒಂದೇ. ಇಂದಿನ ಪಂದ್ಯದಲ್ಲಿ ವೈಭವ್ ಕಣಕ್ಕಿಳಿಯಬೇಕು, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಬೇಕೆಂದು. ಇಲ್ಲಿ ಮ್ಯಾನೇಜ್ಮೆಂಟ್ ಲೆಕ್ಕಾಚಾರ ಏನಿದೆ ಎಂಬುದನ್ನು ಸದ್ಯ ಕಾದು ನೋಡಬೇಕು,(ಏಜೆನ್ಸೀಸ್).