ವೈಭವ್ ಸೂರ್ಯವಂಶಿ(ಎಡ), ಜಿತೇಶ್ ಶರ್ಮ (ಬಲ)
- 19ನೇ ಐಪಿಎಲ್ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ ಅಬ್ಬರದ ಆಟ
- ಯುವ ಸ್ಟಾರ್ ಆಟಗಾರನ ಬಗ್ಗೆ ಜಿತೇಶ್ ಶರ್ಮ ಶಾಕಿಂಗ್ ಹೇಳಿಕೆ
- ಈ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಆರ್ಸಿಬಿ ಸ್ಟಾರ್ ಆಟಗಾರ
Vaibhav Sooryavanshi: 15 ವರ್ಷಕ್ಕೆ ಅಂತಾರಾಷ್ಟ್ರೀಯ ಮತ್ತು ಅನುಭವಿ ಬೌಲರ್ಗಳನ್ನು ತನ್ನ ಬ್ಯಾಟ್ನಿಂದ ಬೆಂಡೆತ್ತುತ್ತಿರುವ ವೈಭವ್ ಸೂರ್ಯವಂಶಿಯ ಐಪಿಎಲ್ ಸಾಹಸಗಳು ಬ್ರೇಕ್ ಇಲ್ಲದೆ ಮುಂದುವರೆದಿವೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚಕ ಅನುಭವ ಮತ್ತು ಹುಬ್ಬೇರಿಸುತ್ತಿರುವುದು ಗಮನಾರ್ಹ. ಕೇವಲ 14, 15 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಈ ಯುವ ಆಟಗಾರ, 36 ಬಾಲ್ಗಳಲ್ಲಿ ಸ್ಫೋಟಕ ಶತಕವನ್ನು ಸಿಡಿಸುವ ಮೂಲಕ ದಿಗ್ಗಜ ಕ್ರಿಕೆಟಿಗರೇ ಅಬ್ಬಬ್ಬಾ ಎನ್ನುವಂತೆ ಮಾಡಿರುವುದು ನಿಜಕ್ಕೂ ಗಮನಾರ್ಹ. ಹೀಗಿರುವಾಗ, ತನ್ನ ಸ್ನೇಹಿತ ವೈಭವ್ ಒಬ್ಬ ಪ್ರೊಫೆಶನಲ್ ಕ್ರಿಕೆಟಿಗ ಅಲ್ಲ ಎಂದು ಆರ್ಸಿಬಿ ಸ್ಟಾರ್ ಆಟಗಾರ ಜಿತೇಶ್ ಶರ್ಮ ಮತ್ತೊಮ್ಮೆ ಹೇಳಿದ್ದಾರೆ.
ಈ ಹಿಂದೆ ಒಮ್ಮೆ ವೈಭವ್ ವೃತ್ತಿಪರ ಆಟಗಾರನಲ್ಲ, ಆತ ಬದಲಾಗುವುದಿಲ್ಲ ಎಂದು ಹೇಳಿದ್ದ ಜಿತೇಶ್ ಶರ್ಮ, ಮಧ್ಯರಾತ್ರಿ ಎದ್ದು ಐಸ್ಕ್ರೀಮ್ ಕೇಳ್ತಾನೆ. ಇದನ್ನೆಲ್ಲ ನೋಡಿದರೆ, ಅವನು ಚೇಂಚ್ ಆಗಲ್ಲ. ಆತ ವೃತ್ತಿಪರನಾಗಿ ಬದಲಾಗಲ್ಲ ಎಂದಿದ್ದರು. ಜಿತೇಶ್ ಅವರ ಈ ಹೇಳಿಕೆಗೆ ಸೂರ್ಯವಂಶಿ ಅಭಿಮಾನಿಗಳು ಗರಂ ಆಗಿದ್ದರು. ಇಂತಹ ಮಾತುಗಳನ್ನು ನಾವು ಒಪ್ಪುವುದಿಲ್ಲ ಎಂದು ಜಿತೇಶ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಅದಕ್ಕೀಗ ಪ್ರತಿಕ್ರಿಯಿಸಿರುವ ಆರ್ಸಿಬಿ ಸ್ಟಾರ್ ಆಟಗಾರ, ನನ್ನ ಹೇಳಿಕೆಗೆ ನಾನು ಬದ್ಧ ಎಂದಿರುವುದು ಬೇಬಿ ಬಾಸ್ ಫ್ಯಾನ್ಸ್ ಕಣ್ಣನ್ನು ಕೆಂಪಗಾಗಿಸಿದೆ.
ಈ ಮೊದಲು ಮಾಜಿ ಆರ್ಸಿಬಿ ಕ್ರಿಕೆಟಿಗ, ಮಿ.360 ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನಲ್ನಲ್ಲಿ ಕುಳಿತು ಮಾತನಾಡಿದ್ದ ಜಿತೇಶ್, ವೈಭವ್ ನನಗೆ ಒಬ್ಬ ಒಳ್ಳೆಯ ಸ್ನೇಹಿತ. ನಾವಿಬ್ಬರು ತುಂಬ ಕ್ಲೋಸ್ ಇದ್ದೀವಿ. ಅವನಿಗೆ ನಾನು ಯಾವಾಗ ಬೇಕಾದರೂ ಫೋನ್ ಮಾಡಿ, ಮಾತಾಡುತ್ತೀನಿ. ಆ ಮಟ್ಟಿಗಿನ ಸ್ನೇಹ ನಮ್ಮ ನಡುವೆ ಇದೆ ಎಂದಿದ್ದರು. ಇದನ್ನು ಸ್ಪಷ್ಟತೆಗಾಗಿ ಆರ್ಸಿಬಿ ಇನ್ಸೈಡರ್ ಶೋನಲ್ಲಿ ಮತ್ತೊಮ್ಮೆ ವಿವರಿಸಿದ ಜಿತೇಶ್ ಶರ್ಮ, ಯಾವ ಯುವ ಕ್ರಿಕೆಟಿಗ ನಿಮ್ಮ ಪ್ರಕಾರ ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರನಾಗಿ ಮಿಂಚಬಹುದು ಎಂಬ ಪ್ರಶ್ನೆಗೆ ನನ್ನ ಉತ್ತರವೇ ವೈಭವ್ ಸೂರ್ಯವಂಶಿ ಎಂದರು.
ಆತನ ಟೆಕ್ನಿಕ್, ಪ್ರತಿಭೆ, ಬುದ್ಧಿವಂತಿಕೆ ಮತ್ತು ಕಠಿಣ ಶ್ರಮದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಟಿ20, ಏಕದಿನ ಮತ್ತು ಟೆಸ್ಟ್, ಈ ಮೂರು ಫಾರ್ಮೆಟ್ಗಳಲ್ಲಿಯೂ ವೈಭವ್ ಅದ್ಭುತವಾಗಿ ಆಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾನೆ. ಮೈದಾನದಲ್ಲಿ ಅವನು ವೃತ್ತಿಪರ ಅಂತ ಕಂಡರೂ, ರಿಯಾಲಿಟಿಯಲ್ಲಿ ಆತ ಅದಾಗಿಲ್ಲ. 15 ವರ್ಷದ ಹುಡುಗ ಮಧ್ಯರಾತ್ರಿ ಐಸ್ಕ್ರೀಮ್ ತಿಂತಾನೆ. ನನ್ನೊಟ್ಟಿಗೆ ರೂಮ್ನಲ್ಲಿ ಕುಳಿತು ತಿನ್ನಲು ಇಷ್ಟಪಡ್ತಾನೆ. ನನ್ನ ಪತ್ನಿ ಜೊತೆಗೂ ಮಾತಾಡ್ತಾನೆ. ಯೂಟ್ಯೂಬ್ನಲ್ಲಿ ಕಾರ್ಟೂನ್ ನೋಡುತ್ತಿರುತ್ತಾನೆ. ಅವನು ನನ್ನ ತಮ್ಮನಂತೆ. ನಾನು ಯಾವ ರೀತಿಯಲ್ಲಿ ಅವನಿಗೆ ಅನ್ಫ್ರೊಫೆಶನಲ್ ಅಂತ ಹೇಳಿದ್ದೀನಿ ಎಂಬುದು ನನಗೆ ಗೊತ್ತಿಗೆ. ಟೀಕಾಕಾರರಿಗೆ ಹೇಳುವ ಅವಶ್ಯತೆಯಿಲ್ಲ ಎಂದಿದ್ದಾರೆ,(ಏಜೆನ್ಸೀಸ್).