ವೈಭವ್ ಸೂರ್ಯವಂಶಿ, ಶ್ರೇಯಸ್​ ಅಯ್ಯರ್​ 
ಕ್ರಿಕೆಟ್

ವೈಭವ್​ಗೆ ಬಿಗ್ ಶಾಕ್​! ಐರ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಿಂದ​ ಸೂರ್ಯವಂಶಿಯನ್ನು ಕೈಬಿಟ್ಟಿದ್ದೇಕೆ? ಕಾರಣ ಹೀಗಿದೆ...

ಪ್ರಮುಖ ಮುಖ್ಯಾಂಶಗಳು

  • ಐರ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಿಂದ ವೈಭವ್​ ಸೂರ್ಯವಂಶಿ ಔಟ್​
  • ಹಲವು ದಾಖಲೆಗಳನ್ನು ಬ್ರೇಕ್​ ಮಾಡಲು ನಿಂತಿದ್ದ ವೈಭವ್​ಗೆ ನಿರಾಸೆ
Vaibhav Sooryavanshi: ಇಂದಿನಿಂದ ಐರ್ಲೆಂಡ್​ ಮತ್ತು ಭಾರತ ನಡುವೆ ಎರಡು ಪಂದ್ಯಗಳ ಟಿ20 ಸರಣಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿಯನ್ನು ತಂಡದಿಂದ ಹೊರಗಿಟ್ಟಿರುವುದು ಸದ್ಯ ಕ್ರಿಕೆಟ್​ ಪ್ರೇಮಿಗಳಿಗೆ ಭಾರಿ ಬೇಸರ ತಂದಿದೆ. ವಂಡರ್​ ಕಿಡ್​ ಬ್ಯಾಟ್​ನಿಂದ ಬರುವ ಅಬ್ಬರದ ಪ್ರದರ್ಶನ ನೋಡಲು ಕಾದು ಕುಳಿತಿದ್ದ ಕ್ರಿಕೆಟ್​ ಪ್ರೇಮಿಗಳ ತೀವ್ರ ಕಾತರಕ್ಕೆ ಈಗ ತಣ್ಣೀರೆರಚಿದಂತಾಗಿದೆ.
ಬೆಲ್‌ಫಾಸ್ಟ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಲು ಸಜ್ಜಾಗಿದ್ದ ವೈಭವ್​ಗೆ ಮ್ಯಾನೇಜ್​ಮೆಂಟ್​ ತಂಡದಿಂದ ಕೈಬಿಡುವ ಮೂಲಕ ಶಾಕ್​ ನೀಡಿದೆ. ಇದು ಅಪಾರ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಪಂದ್ಯದ ಶುರುವಿಗೂ ಮುನ್ನ ಮಾತನಾಡಿದ ಶ್ರೇಯಸ್​ ಅಯ್ಯರ್​, ಇಂದಿನ ಪಂದ್ಯದಲ್ಲಿ ವೈಭವ್​ ಸೂರ್ಯವಂಶಿ ತಂಡದ ಪರ ಆಡುತ್ತಿಲ್ಲ. ಈಗಾಗಲೇ ಅನುಭವಿ ಆಟಗಾರರನ್ನು ಹೊಂದಿರುವ ತಂಡವೇ ಇಲ್ಲಿಯೂ ಆಡಲಿದೆ. ಸದ್ಯಕ್ಕೆ ಅವರನ್ನು ಇನ್ನೂ ಅಂತಿಮ ತಂಡದಲ್ಲಿ ಸೇರಿಸಿಲ್ಕ. ಸಮಯ ಬಂದಾಗ ಖಂಡಿತ ಸೂರ್ಯವಂಶಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ವೈಭವ್​ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್​​, "ತಮ್ಮ ಅವಕಾಶಗಳನ್ನು ವೈಭವ್​ ಖಂಡಿತ ಪಡೆಯುತ್ತಾರೆ. ಈಗಾಗಲೇ ರನ್ ಗಳಿಸುತ್ತಿರುವ ವ್ಯಕ್ತಿಯನ್ನು ಕೈಬಿಡಬೇಕು ಎಂಬ ನಿರ್ಧಾರ ನನಗೆ ಇಷ್ಟವಿಲ್ಲ. ಅಸಲಿಗೆ ಅದು ಸರಿಯೂ ಅಲ್ಲ" ಎಂದು ತಿಳಿಸಿದ್ದಾರೆ. ಮೊದಲ ಪಂದ್ಯದಿಂದ ವೈಭವ್​​ರನ್ನು ಕೈಬಿಟ್ಟಿರುವ ಮ್ಯಾನೇಜ್​ಮೆಂಟ್ ಭಾನುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಅವರಿಗೆ ಅವಕಾಶ ಕೊಡಲಿದೆ ಎಂಬ ನಂಬಿಕೆಯಿದೆ,(ಏಜೆನ್ಸೀಸ್). ​